ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜಿ.ಎಸ್ ಪಾಟೀಲ್ ಅವಿರೋಧ ಆಯ್ಕೆ -ಕಹಳೆ ನ್ಯೂಸ್
ಬೆಂಗಳೂರು: ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜಿ.ಎಸ್ ಪಾಟೀಲ್ (GS Patil) ಸರ್ವಾನುಮತನದಿಂದ ಆಯ್ಕೆಯಾದರು. ಸಂಪ್ರದಾಯದಂತೆ ವಿಪಕ್ಷ ನಾಯಕ ಆರ್. ಅಶೋಕ್ (R Ashok) ಹಾಗೂ ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಜಿ.ಎಸ್ ಪಾಟೀಲ್ ಅವರನ್ನ ಕರೆತಂದು ಸ್ಪೀಕರ್ ಪೀಠದಲ್ಲಿ ಕೂರಿಸಿದರು. ಸ್ಪೀಕರ್ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ಕಲಾಪದೊಳಗೆ ವಿಪಕ್ಷ ಬಿಜೆಪಿ ಸದಸ್ಯರು ಪ್ರವೇಶಿಸಿದ್ರು. ಆಯ್ಕೆ ನಡೆದಿದ್ದು ಹೇಗೆ? ಸ್ಪೀಕರ್ ಆಯ್ಕೆ ಬಗ್ಗೆ ಸದನದಲ್ಲಿ ಹಂಗಾಮಿ ಸ್ಪೀಕರ್...







