ಉಪ್ಪಿನಂಗಡಿ ಸಮೀಪದ ಕೆಮ್ಮಾರದ ಉಜ್ಜೀವನ ಬಡಾವಣೆಯಲ್ಲಿ ಸಾಮೂಹಿಕ ಭೂಮಿ ಪೂಜೆ – ಕಹಳೆ ನ್ಯೂಸ್
ದ್ವಾರಕಾ ಕಾರ್ಪ್. ಪ್ರೈ. ಲಿ. ಇದರ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಉಪ್ಪಿನಂಗಡಿ ಸಮೀಪದ ಕೆಮ್ಮಾರದ ಉಜ್ಜೀವನ ಬಡಾವಣೆಯಲ್ಲಿ ಸಾಮೂಹಿಕ ಭೂಮಿ ಪೂಜೆ ದಿನಾಂಕ 18-06-2026ರಂದು ಜರುಗಿತು. ಪುರೋಹಿತರಾದ ಶ್ರೀ ವೇ. ಮೂ. ಕೃಷ್ಣಕುಮಾರ ಉಪಾಧ್ಯಾಯ ಇವರ ನೇತೃತ್ವದಲ್ಲಿ ಸಾಮೂಹಿಕ ಭೂಮಿ ಪೂಜೆ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಸುಮಾರು 51 ಮನೆಯ ಭೂಮಿ ಪೂಜೆ ನಡೆದಿದ್ದು, ಹಲವು ಗ್ರಾಹಕರು ತಮ್ಮ ಸೈಟ್ ನ ಭೂಮಿ ಪೂಜೆಯನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಬಡಾವಣೆಯ ದ್ವಾರಕಾ...







