
ವಾಷಿಂಗ್ಟನ್: ಡಿವೈಡರ್ ಹಾರಿ ಕಾರಿಗೆ ಪಿಕಪ್ ಟ್ರಕ್ ಡಿಕ್ಕಿಯಾದ ಪರಿಣಾಮ ಭಾರತೀಯ ಮೂಲದ ಟೆಕ್ಕಿ ಸಾವನ್ನಪ್ಪಿರುವ ಘಟನೆ ಅಮೆರಿಕದ ಒಹಾಯೊದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಆಂಧ್ರಪ್ರದೇಶದ ಜಿಲ್ಲೆಯ ಜೆಟ್ಟಿವಾರಪಲ್ಲಿ ಗ್ರಾಮದವರಾದ ದಿಲೀಪ್ ಕುಮಾರ್ ಬಂಗತವುಲ (26) ಎಂದು ಗುರುತಿಸಲಾಗಿದೆ. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ದಿಲೀಪ್ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದು, ಕೆಂಟ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ ಪದವಿ ಪೂರ್ಣಗೊಳಿಸಿದ್ದರು.
ಒಹಾಯೊದ ಮಸಿಡೋನಿಯಾ ಪ್ರದೇಶದ ಇಂಟರ್‌ಸ್ಟೇಟ್ 480 ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಮೃತ ದಿಲೀಪ್ ಕುಮಾರ್ ಸೆಡಾನ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಎದುರಿನಿಂದ ಅತಿವೇಗವಾಗಿ ಬಂದ ಪಿಕ್‌ಅಪ್ ಟ್ರಕ್ ಡಿವೈಡರ್ ಹಾರಿ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದಿಲೀಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾ
ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಗಾಯಗೊಂಡ ಇತರ ಮೂವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಅಪಘಾತಕ್ಕೆ ನಿಖರವಾದ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.











