Recent Posts

Tuesday, September 8, 2026

ಮುಂಬೈ

ಜಿಲ್ಲೆಮುಂಬೈಸುದ್ದಿ

200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗು ಜನನ : ರಥದಲ್ಲಿ ಕೂರಿಸಿ ಅದ್ದೂರಿ ಸ್ವಾಗತ – ಕಹಳೆ ನ್ಯೂಸ್

ಮುಂಬೈ: ಹೆಣ್ಣು ಮಗು ಬೇಡ ಎಂದು ಭ್ರೂಣ ಹತ್ಯೆ ಮಾಡಿಸುವ ಈ ಕಾಲದಲ್ಲಿ ಹೆಣ್ಣು ಮಗು ಜನಿಸಿದೆ ಎಂದು ಕುಟುಂಬವೊಂದು ರಥದಲ್ಲಿ ಕೂರಿಸಿ ಅದ್ದೂರಿಯಾಗಿ ಸ್ವಾಗತಿಸಿರುವ ಘಟನೆ ಮಹಾರಾಷ್ಟ್ರದ ಬೀಡ್‌ನಲ್ಲಿ (Beed) ನಡೆದಿದೆ. ಹೌದು, ಈ ಕುಟುಂಬದಲ್ಲಿ ಸುಮಾರು 200 ವರ್ಷಗಳ ಅಂದರೆ ನಾಲ್ಕು ತಲೆಮಾರುಗಳ ಬಳಿಕ ಹೆಣ್ಣು ಮಗು ಜನಿಸಿದೆ. ಹೆರಿಗೆಯಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಕುಟುಂಬಸ್ಥರು ಮಗು ಹಾಗೂ ತಾಯಿಯನ್ನು ರಥದಲ್ಲಿ ಕೂರಿಸಿ, ತಾಳ-ವಾದ್ಯಗಳು ಹಾಗೂ ನೃತ್ಯದೊಂದಿಗೆ...
ಮುಂಬೈರಾಜ್ಯಸುದ್ದಿ

ಮಗನನ್ನ ರಕ್ಷಿಸಲು ಹೋದ ತಂದೆ, ಬಳಿಕ ತಾಯಿ; ಮೂವರೂ ಸಾವು – ಕಹಳೆ ನ್ಯೂಸ್

ಮುಂಬೈ: ಮಹಾರಾಷ್ಟ್ರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಬೆಟ್ಟದ ಅಂಚಿನಲ್ಲಿ ನಿಂತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುತ್ತಿದ್ದ ಯುವಕನನ್ನ ರಕ್ಷಿಸಲು ಮುಂದಾದ ತಂದೆ, ಬಳಿಕ ತಾಯಿ ಕೂಡ ಬೆಟ್ಟದಿಂದ ಬಿದ್ದು  ಮೃತಪಟ್ಟಿದ್ದಾರೆ. 18/19 ವರ್ಷದ ಮಗ ಸೇರಿದಂತೆ ಒಂದೇ ಕುಟುಂಬದ ಮೂವರು ದುರಂತ ಸಾವಿಗೀಡಾಗಿದ್ದಾರೆ. ಮೃತರನ್ನು ನಗರದ ಜಲ್ತಾ ಫಾಟಾ ಪ್ರದೇಶದ ನಿವಾಸಿಗಳಾದ ಮುರಳೀಧರ್ ಚಾಂದ್ಗುಡೆ (48), ಅವರ ಪತ್ನಿ ಸಂಗೀತಾ ಹಾಗೂ ಪುತ್ರ ಕುನಾಲ್ ಎಂದು ಪೊಲೀಸರು ಗುರುತಿಸಿದ್ದಾರೆ. ಹೊಸ...
ಮುಂಬೈಸುದ್ದಿ

LPG ಸಿಲಿಂಡರ್‌ ಅಭಾವದ ನಡುವೆ ʻಮಹಾʼ ಮಳೆಗೆ ಕೊಚ್ಚಿ ಹೋದ 3,000 ಸಿಲಿಂಡರ್‌ -ಕಹಳೆ ನ್ಯೂಸ್

ಮುಂಬೈ: ಭಾರೀ ಮಳೆಯಿಂದಾಗಿ  ಮಹಾರಾಷ್ಟ್ರದ  ರಾಯಗಢದ HPCL ಬಾಟ್ಲಿಂಗ್ ಸ್ಥಾವರಕ್ಕೆ ಪಾತಾಳಗಂಗಾ ನದಿ ನೀರು ನುಗ್ಗಿ 3,000 LPG ಸಿಲಿಂಡರ್‌ಗಳು  ತೇಲಿ ಹೋಗಿವೆ. ಸಿಲಿಂಡರ್‌ಗಳು ತೇಲಿ ಹೋಗುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. LPG ಸಿಲಿಂಡರ್‌ ಅಭಾವದ ನಡುವೆ ಈ ಘಟನೆ ಸಂಭವಿಸಿದ್ದು, ತೀವ್ರ ಆಘಾತಕ್ಕೆ ಕಾರಣವಾಗಿದೆ. ಪನ್ವೇಲ್ ತಾಲೂಕಿನ ಚವಾಣೆ ಗ್ರಾಮದಲ್ಲಿರುವ HPCL ನ ಪಾತಾಳಗಂಗಾ LPG ಬಾಟ್ಲಿಂಗ್ ಸ್ಥಾವರದಲ್ಲಿ ( HPCL Bottling...
ಮುಂಬೈರಾಜ್ಯಸುದ್ದಿ

ಕೇತನ್‌ ಜೊತೆ ಎಂಗೆಜ್‌ಮೆಂಟ್‌, ಲವ್ವರ್ ಜೊತೆ ರಹಸ್ಯ ಮದುವೆ – ಬಗೆದಷ್ಟು ಬಯಲಾಗ್ತಿದೆ ಕ್ರಿಮಿನಲ್‌ ಬ್ಯೂಟಿ ಸಿಯಾ ಪುರಾಣ – ಕಹಳೆ ನ್ಯೂಸ್

ಮುಂಬೈ: ಭಾವಿ ಪತಿ ಕೇತನ್‌ ಅಗರ್ವಾಲ್‌ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಸಿಯಾ ಗೋಯಲ್‌ (Siya) ಹಾಗೂ ಚೇತನ್‌ ಚೌಧರಿ ಇಬ್ಬರು ರಹಸ್ಯವಾಗಿ ಮದುವೆಯಾಗಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಸಿಯಾ ಮತ್ತು ಚೇತನ್ ನಾಲ್ಕು ತಿಂಗಳ ಹಿಂದೆ ಸ್ಥಳೀಯ ರಿಜಿಸ್ಟ್ರಾರ್ ಕಚೇರಿಯಲ್ಲಿ ರಹಸ್ಯವಾಗಿ ವಿವಾಹವಾಗಿದ್ದರು ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪುಣೆ ಗ್ರಾಮೀಣ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಾಕ್ಷಿಗಳಾಗಿ ಸಹಿ ಹಾಕಿದ್ದಾರೆ ಎನ್ನಲಾದ ಗೋಯಲ್ ಅವರ...
ಮುಂಬೈರಾಜ್ಯಸುದ್ದಿ

ಮುಂಬೈನಲ್ಲಿ `ಮರಣ ಮಳೆ’ಗೆ 8 ಬಲಿ – ಕುಸಿದ ರಸ್ತೆ, ಅಪ್ಪಳಿಸಿದ ಪ್ರವಾಹ, ಮುಂಬೈ-ಪುಣೆ ಸಂಪರ್ಕ ಕಟ್‌ – ಕಹಳೆ ನ್ಯೂಸ್

ಮುಂಬೈ: ದೇಶದ ವಿವಿಧ ರಾಜ್ಯಗಳಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂದೆ. ಮುಂಬೈನಲ್ಲಂತೂ ಮಳೆ  ರೌದ್ರನರ್ತನ ತಾಳಿದ್ದು, ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಭಾರೀ ಮಳೆಯಿಂದಾಗಿ ಮುಂಬೈನಲ್ಲಿ ಭಾನುವಾರ ಒಂದೇ ದಿನ ವಿವಿಧೆಡೆ 8 ಮಂದಿ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಮುಂಖುರ್ಡ್‌ ಪ್ರದೇಶದಲ್ಲಿ ಚಾಲ್‌ ಕಟ್ಟದ ಒಂದು ಭಾಗ ಕುಸಿದು 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಮರ ಬಿದ್ದು ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ರೆ, ಕಟ್ಟಡದ ಗ್ರಿಲ್ ಪಾದಚಾರಿ ಮಾರ್ಗದ ಮೇಲೆ ಬಿದ್ದು...
ಮುಂಬೈರಾಜ್ಯಸುದ್ದಿ

ʻನನ್ನನ್ನು ಕ್ಷಮಿಸಿ ಬಿಡು ಅಮ್ಮʼ : ವಿಡಿಯೋ ಮಾಡಿಟ್ಟು ಬಾವಿಗೆ ಹಾರಿದ ನೀಟ್‌ ಆಕಾಂಕ್ಷಿ – ಕಹಳೆ ನ್ಯೂಸ್

ಮುಂಬೈ: ಮಹಾರಾಷ್ಟ್ರದ  ಹಿಂಗೋಲಿಯಲ್ಲಿ 18 ವರ್ಷದ ನೀಟ್  ಆಕಾಂಕ್ಷಿ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಸ್ವಲ್ಪ ಸಮಯದ ಮುನ್ನ ವಿಡಿಯೋ ಮಾಡಿದ್ದು, ಅದರಲ್ಲಿ ಕೈಮುಗಿದು ʻಕ್ಷಮಿಸಿ, ಅಮ್ಮʼ ಎಂದು ಮನವಿ ಮಾಡಿದ್ದಾನೆ. ಸುಶೀಲ್ ಧಾಗೆ ಆತ್ಮಹತ್ಯೆಗೆ ಶರಣಾದ ಯುವಕ. ಈತ ಜೂ.21 ರಂದು NEET (UG) 2026 ಮರು ಪರೀಕ್ಷೆಗೆ ಹಾಜರಾಗಿದ್ದ. ಆತ್ಮಹತ್ಯೆಗೂ ಮುನ್ನ, 33 ಸೆಕೆಂಡುಗಳ ವಿಡಿಯೋ ಮಾಡಿ, ಕುಟುಂಬಸ್ಥರಿಗೆ ಕಳುಹಿಸಿದ್ದಾನೆ. ಆ ವಿಡಿಯೋದಲ್ಲಿ ತನ್ನ ತಾಯಿಗೆ...
ಮುಂಬೈರಾಜ್ಯಸುದ್ದಿ

ಪ್ರಿಯಕರನೊಂದಿಗೆ ಸೇರಿ ಭಾವಿ ಪತಿ ಕೊಲೆ ಕೇಸ್ : ಆರೋಪಿ ಜೋಡಿ 7 ದಿನ ಪೊಲೀಸ್ ಕಸ್ಟಡಿಗೆ -ಕಹಳೆ ನ್ಯೂಸ್

ಮುಂಬೈ: ಪ್ರಿ-ವೆಡ್ಡಿಂಗ್ ಶೂಟಿಂಗ್  ನೆಪದಲ್ಲಿ ಮಹಾರಾಷ್ಟ್ರದ  ಯುವತಿ ಪ್ರಿಯಕರನೊಂದಿಗೆ ಸೇರಿ ಭಾವಿ ಪತಿಯನ್ನು ಹತ್ಯೆ ಮಾಡಿರುವ ಕೇಸ್ ಮಹತ್ವದ ತಿರುವು ಪಡೆದುಕೊಂಡಿದೆ. ಆರೋಪಿ ಜೋಡಿಯನ್ನು 7 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್‌ನನ್ನು ಮಂಗಳವಾರ ಲೋನಾವಾಲಾ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪ್ರಕರಣದ ತನಿಖೆಗಾಗಿ ಜೂನ್ 29ರವರೆಗೆ 7 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಜೂನ್...
ಮುಂಬೈರಾಜ್ಯಸುದ್ದಿ

ಪ್ರಿಯಕರನೊಂದಿಗೆ ಸೇರಿ ಭಾವಿ ಪತಿ ಕೊಲೆ ಕೇಸ್ : ಆರೋಪಿ ಜೋಡಿ 7 ದಿನ ಪೊಲೀಸ್ ಕಸ್ಟಡಿಗೆ -ಕಹಳೆ ನ್ಯೂಸ್

ಮುಂಬೈ: ಪ್ರಿ-ವೆಡ್ಡಿಂಗ್ ಶೂಟಿಂಗ್  ನೆಪದಲ್ಲಿ ಮಹಾರಾಷ್ಟ್ರದ  ಯುವತಿ ಪ್ರಿಯಕರನೊಂದಿಗೆ ಸೇರಿ ಭಾವಿ ಪತಿಯನ್ನು ಹತ್ಯೆ ಮಾಡಿರುವ ಕೇಸ್ ಮಹತ್ವದ ತಿರುವು ಪಡೆದುಕೊಂಡಿದೆ. ಆರೋಪಿ ಜೋಡಿಯನ್ನು 7 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್‌ನನ್ನು ಮಂಗಳವಾರ ಲೋನಾವಾಲಾ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪ್ರಕರಣದ ತನಿಖೆಗಾಗಿ ಜೂನ್ 29ರವರೆಗೆ 7 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಜೂನ್...
1 2 3 11
Page 1 of 11