ನವೀಕರಿಸಬಹುದಾದ ಇಂಧನದಲ್ಲಿ ಭಾರತ 3ನೇ ಅತಿದೊಡ್ಡ ರಾಷ್ಟ್ರ: ಪ್ರಹ್ಲಾದ್ ಜೋಶಿ -ಕಹಳೆ ನ್ಯೂಸ್
ನವದೆಹಲಿ: ಸೌರಶಕ್ತಿ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ನಿಂತಿದ್ದು, ಊಹಿಸಲು ಅಸಾಧ್ಯ ಎನ್ನುವಂತೆ ಅಗಾಧ ಸಾಧನೆಗೈದಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. WION ವರ್ಲ್ಡ್ ಪಲ್ಸ್ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿ, 2030ರ ವೇಳೆಗೆ 500 GW ನವೀಕರಿಸಬಹುದಾದ ಇಂಧನ ಗುರಿಯತ್ತ ಸಾಗಿರುವ ಭಾರತದ ಶುದ್ಧ ಇಂಧನ ಪ್ರಯಾಣ ಅಭೂತಪೂರ್ವ ವೇಗ ಪಡೆಯುತ್ತಿದೆ ಎಂದರು. ಭಾರತದ ಮಾಡ್ಯೂಲ್ ಮತ್ತು ಉತ್ಪಾದನಾ...







