Monday, August 10, 2026
ಕ್ರೈಮ್ಬೆಂಗಳೂರುರಾಜ್ಯಸುದ್ದಿ

ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್‌ಗೆ ಇಂದು ಬಿಗ್‌ಡೇ : ಮಾಫಿ ಅರ್ಜಿಗಳ ಬಗ್ಗೆ ಕೋರ್ಟ್‌ನಲ್ಲಿ ನಿರ್ಧಾರ- ಕಹಳೆ ನ್ಯೂಸ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ (Darshan) ಇಂದು ಮಹತ್ವದ ದಿನ. ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ಮಾಫಿ ಅರ್ಜಿಗಳ ವಿಚಾರವಾಗಿ ಬೆಂಗಳೂರಿನ CCH-59 ಕೋರ್ಟ್ ಇಂದು ಆದೇಶ ನೀಡುವ ಸಾಧ್ಯತೆ ಇದೆ. ಈ ಅರ್ಜಿಗಳ ವಿಚಾರಣೆ ಕೋರ್ಟ್‌ನಲ್ಲಿ ಮುಂದುವರಿಯಲಿದ್ದು, ಆದೇಶದ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಜಾಹೀರಾತು

ಪ್ರಕರಣದಲ್ಲಿ ಆರೋಪಿ ಪ್ರದೋಷ್ ಮಾಫಿ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಸ್ವೀಕರಿಸುವಂತೆ ಪ್ರಾಸಿಕ್ಯೂಷನ್ ಪರ ವಕೀಲರು ವಾದಿಸಿದ್ದರು. ಆದರೆ, ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರು ಮಾಫಿ ಅರ್ಜಿಯನ್ನು ಸ್ವೀಕರಿಸಬಾರದು ಎಂದು ಪ್ರತಿವಾದಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ನಡುವೆ A10 ಆರೋಪಿ ವಿನಯ್ ಕೂಡ ಮಾಫಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಈ ಎರಡು ಅರ್ಜಿಗಳ ವಿಚಾರದಲ್ಲಿ ಪ್ರಾಸಿಕ್ಯೂಷನ್ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದು ಇಂದು ಪ್ರಮುಖವಾಗಲಿದೆ.

ದರ್ಶನ್‌ಗೆ ಕಂಟಕವಾಗುತ್ತಾ ಮಾಫಿ ಅರ್ಜಿಗಳು?
ಮಾಫಿ ಅರ್ಜಿಗಳನ್ನು ಕೋರ್ಟ್ ಸ್ವೀಕರಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಇಂದು ವಾದಕ್ಕೆ ಅವಕಾಶ ನೀಡಬೇಕಾ ಎಂಬ ಬಗ್ಗೆ CCH-59 ಕೋರ್ಟ್ ಆದೇಶ ನೀಡುವ ಸಾಧ್ಯತೆ ಇದೆ.ಒಂದು ವೇಳೆ ಕೋರ್ಟ್ ಮಾಫಿ ಅರ್ಜಿಗಳನ್ನು ಸ್ವೀಕರಿಸಿ ಮುಂದಿನ ಪ್ರಕ್ರಿಯೆಗೆ ಅವಕಾಶ ನೀಡಿದರೆ, ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ಹೊಸ ಬೆಳವಣಿಗೆಗಳು ಎದುರಾಗಬಹುದು. ಇದು ದರ್ಶನ್ ಪರ ವಾದದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಹಲವು ಬೆಳವಣಿಗೆಗಳು ನಡೆದಿದ್ದು, ಇದೀಗ ಮಾಫಿ ಅರ್ಜಿಗಳ ವಿಚಾರ ಮತ್ತೊಂದು ಪ್ರಮುಖ ಹಂತಕ್ಕೆ ಬಂದಿದೆ. ಇಂದು ಕೋರ್ಟ್ ಏನು ಹೇಳಲಿದೆ ಎಂಬುದು ಪ್ರಕರಣದ ಮುಂದಿನ ದಿಕ್ಕಿನಲ್ಲಿ ಮಹತ್ವ ಪಡೆದುಕೊಳ್ಳಲಿದೆ.