ಸೆ.14, 15 ಮತ್ತು 16: ವಿವೇಕಾನಂದ ಕಾಲೇಜಿನ ಶ್ರೀಗಣೇಶೋತ್ಸವಕ್ಕೆ 45ರ ಸಂಭ್ರಮ : ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸೇವಾ ಕಾರ್ಯಗಳು

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆಯುವ ಶ್ರೀ ಗಣೇಶೋತ್ಸವಕ್ಕೆ ಇದೀಗ 45ರ ಸಂಭ್ರಮ. ಇದರ ಪ್ರಯುಕ್ತವಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಶ್ರಯದಲ್ಲಿರುವ ವಿದ್ಯಾಸಂಸ್ಥೆಗಳಿಂದ ಆಚರಿಸಲಾಗುವ ಶ್ರೀ ಗಣೇಶೋತ್ಸವ ಸೆ. 14 ರಿಂದ ಸೆ. 16ರವರೆಗೆ ನಡೆಯುವ ಮೂರು ದಿನಗಳ ಕಾಲ ಅದ್ದೂರಿಯಾಗಿ ಗಣೇಶೋತ್ಸವವನ್ನು ಆಚರಿಸಲಾಗುವುದು.
ಸೆ.14 ರಂದು ಬೆಳಿಗ್ಗೆ ಶಿವಪೇಟೆಯಿಂದ ಗಣೇಶನ ವಿಗ್ರಹವನ್ನು ತಂದು ಮೆರವಣಿಗೆ ಮೂಲಕ ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಹಿರಿಯ ನಿವೃತ್ತ ಉದ್ಯೋಗಿ ನಾರಾಯಣಕ್ಕೆ ಇವರಿಂದ ಜ್ಯೋತಿ ಬೆಳಗಿಸಲಾಗುವುದು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದು. ಜೊತೆಗೆ ಗ್ರಾಮಸ್ಥರಿಂದ ಭಜನೆ ಹಾಗೂ ಸಂಜೆ 7 ಗಂಟೆಗೆ ರಂಗಪೂಜೆ ನಡೆಯಲಿರುವುದು. ವಿವೇಕಾನಂದ ಕಾಲೇಜಿನ ಅಧ್ಯಾಪಕರುಗಳ ನೇತೃತ್ವದಲ್ಲಿ ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಲಿರುವುದು.
ಸೆ. 15- ಬೆಳಗ್ಗೆ ಗಣಪತಿ ಹವನ ನಡೆದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಾಗಿ ಬಳಿಕ ಸಭಾ ಕಾರ್ಯಕ್ರಮಗಳು ನಡೆಯಲಿರುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ಶೆಟ್ಟಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಇಲ್ಲಿನ ಕಾರ್ಯದರ್ಶಿ ಲತೇಶ್ ಬಾಕ್ರಬೈಲು ಅಭ್ಯಾಗತರಾಗಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ. ಎಂ ಉಪಸ್ಥಿತರಿರುತ್ತಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಗ್ರಾಮಸ್ಥರಿಂದ ಭಜನೆ ಹಾಗೂ ಸಂಜೆ 7 ಗಂಟೆಗೆ ರಂಗಪೂಜೆ ನಡೆಯಲಿರುವುದು.
ಸೆ.15-ಶೋಭಾಯಾತ್ರೆ:
ಸೆ.16 ರಂದು ಸಾಂಸ್ಕೃತಿಕ ಕಾರ್ಯಕ್ರಮಗಳಾದ ಬಳಿಕ ಮಧ್ಯಾಹ್ನ ಮಹಾಪೂಜೆ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಗೆ ಗಣಪತಿಯ ಅದ್ದೂರಿ ಶೋಭಾಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಾರಾಡಿಯ ಬಾವಿಯಲ್ಲಿ ವಿಸರ್ಜನೆಗೊಳ್ಳಲಿದೆ.
ಶೃಂಗಾರಮಯ:
45ನೇ ಸಂಭ್ರಮಾಚರಣೆಯ ಪ್ರಯುಕ್ತ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಗಳ ವಿದ್ಯಾರ್ಥಿಗಳಿಂದ ಕಾಲೇಜು ಕೇಸರೀಮಯವಾಗಿ ಕಂಗೊಳಿಸುತ್ತಿದೆ. ಶ್ರೀ ಗಣೇಶೋತ್ಸವದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ ಆಟೋಟ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಗುವುದು.
ಭಕ್ತಾದಿಗಳಿಂದ ಸ್ವಯಂ ಆರತಿ ಸೇವೆ:
ಈ ಬಾರಿ ಸಂಘದಿಂದ ಸ್ವಯಂ ಆರತಿ ಎಂಬ ಸೇವೆಯ ಆರಂಭಗೊಂಡಿದ್ದು, ಗಣೇಶನ ವಿಗ್ರಹಕ್ಕೆ ಭಕ್ತಾದಿಗಳು ಸ್ವಯಂ ಆರತಿ ಬೆಳಗಿಸುವ ಸೇವೆ 45ನೇ ವರ್ಷದ ಶ್ರೀ ಗಣೇಶೋತ್ಸವದಲ್ಲಿ ವಿಶೇಷವಾಗಿರುತ್ತದೆ.
ಜೊತೆಗೆ ರಂಗಪೂಜೆ, ಸರ್ವಸೇವೆ, ಮಹಾಪೂಜೆ, ಗಣಪತಿ ಹವನ, ಹರಕೆ ಸೇವೆ, ಪಂಚಕಜ್ಜಾಯ,ವಿದ್ಯಾರಕ್ಷೆ, ಕರ್ಪೂರಾರತಿ ಸೇವೆಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ











