
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರು ಸಿಲ್ವರ್‌ಸ್ಟೋನ್ ರೇಸಿಂಗ್ ಸರ್ಕ್ಯೂಟ್‌ನಲ್ಲಿ ನಟ ಅಜಿತ್ ಕುಮಾರ್ ಅವರೊಂದಿಗೆ ಸೌಹಾರ್ದಯುತ ಕ್ಷಣವನ್ನು ಹಂಚಿಕೊಂಡರು.
ರೇಸ್‌ಗೆ ಚಾಲನೆ ನೀಡಲು ಮತ್ತು ತಮಿಳು ನಟನಿಗೆ ಬೆಂಬಲ ಸೂಚಿಸಲು ವಿಜಯ್ ಅಲ್ಲಿಗೆ ಆಗಮಿಸಿದ್ದರು.
ಲೆ ಮಾನ್ಸ್ ಕಪ್ ರೇಸ್‌ನ ನಂತರ ವಿಜಯ್ ಅವರು ಅಜಿತ್ ಅವರಿಗೆ ರೇಸ್ ಕಾರಿನ ಪುಟ್ಟ ಮಾದರಿಯೊಂದನ್ನು ಉಡುಗೊರೆಯಾಗಿ ನೀಡಿದರು. ಜೊತೆಗೆ ʼನನ್ನ ಪ್ರೀತಿಯ ಸಹೋದರ ಅಜಿತ್‌ಗೆ ಪ್ರೀತಿಯಿಂದ ವಿಜಯ್ ಎಂಬ ಮುದ್ದಾದ ಸಂದೇಶವನ್ನೂ ಅದರ ಮೇಲೆ ಬರೆದರು.











