Recent Posts

Wednesday, May 1, 2024

ಸುದ್ದಿ

ಬೈಂದೂರುಸುದ್ದಿ

ದೇಶ ರಕ್ಷಣೆಗಾಗಿ ಬಿಜೆಪಿ ಬೆಂಬಲಿಸಿ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನಲ್ಲಿ ಕೋಟ ಬಿರುಸಿನ ಪ್ರಚಾರ : ಒಂದು ಲಕ್ಷ ಲೀಡ್ ನೀಡುವ ಸಂಕಲ್ಪ ಸಾಕಾರಕ್ಕೆ ಕೋಟ ಶ್ರೀನಿವಾಸ ಪೂಜಾರಿ ಕರೆ–ಕಹಳೆ ನ್ಯೂಸ್

ಬೈಂದೂರು: ಭಾರತದ ಸಮಗ್ರ ಭದ್ರತೆ, ಆರ್ಥಿಕ ಸಬಲೀಕರಣ, ಭಯೋತ್ಪಾದನೆ ನಿರ್ಮೂಲನೆಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಅವರನ್ನು ಬಹುಮತದಿಂದ ಗೆಲ್ಲಿಸಿ, ರಾಷ್ಟ್ರ ಭಕ್ತ ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಕರೆ ನೀಡಿದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರ್ಗಾಲು, ಬಿಜೂರು, ಶಿರೂರು, ಏಳಜಿತ್ ಮುಂತಾದ...
ಉಡುಪಿಕುಂದಾಪುರಬೈಂದೂರುಸುದ್ದಿ

ತ್ರಾಸಿ, ಗಂಗೊಳ್ಳಿ, ಗುಜ್ಜಾಡಿ ಪರಿಸರದಲ್ಲಿ ಶಾಸಕರಾದ ಕಿರಣ್ ಕೊಡ್ಗಿ ಮತಬೇಟಿ : ಒಂದು ಲಕ್ಷ ಲೀಡ್ ಕೊಡಿಸಲು ಕಾರ್ಯಕರ್ತರಿಗೆ ಶಾಸಕರಿಂದ ಪ್ರೇರಣೆ–ಕಹಳೆ ನ್ಯೂಸ್

ತ್ರಾಸಿ: ಕುಂದಾಪುರದ ಶಾಸಕರಾದ ಕಿರಣ್ ಕೊಡ್ಗಿ ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿ, ಗಂಗೊಳ್ಳಿ ಪರಿಸರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಪರ ಪ್ರಚಾರ ನಡೆಸಿದರು. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದಲೇ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡುವ ಸಂಕಲ್ಪವನ್ನು ಈಗಾಗಲೇ ಶಾಸಕರಾದ ಗುರುರಾಜ ಗಂಟಿಹೊಳೆಯವರು ಮಾಡಿದ್ದಾರೆ. ಅದನ್ನು ಈಡೇರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಈ ಚುನಾವಣೆ ಯಜ್ಞದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು...
ಉಡುಪಿಬೈಂದೂರುಸುದ್ದಿ

ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅವರಿಂದ ಬಿರುಸಿನ ಪ್ರಚಾರ : ಕೊಂಕಣಿ ಸಮುದಾಯ ಬಾಂಧವರೊಂದಿಗೆ ಸಭೆ, ಬಿಜೆಪಿಗೆ ಮತ ಹಾಕಲು ಮನವಿ–ಕಹಳೆ ನ್ಯೂಸ್

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೊಂಕಣಿ ಸಮುದಾಯದ ದೇವಸ್ಥಾನಗಳಿಗೆ ಸೋಮವಾರ ಮಂಗಳೂರಿನ ಶಾಸಕರಾದ ವೇದವ್ಯಾಸ ಕಾಮತ್ ಅವರು ಬೈಂದೂರಿನ ಶಾಸಕರಾದ ಗುರುರಾಜ್ ಗಂಟಿಹೊಳೆಯವರೊಂದಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಪರ ಪ್ರಚಾರ ನಡೆಸಿದರು. ಮೊದಲಿಗೆ ಶಿರೂರಿನಲ್ಲಿರುವ ಶ್ರೀ ಪೇಟೆ ವೆಂಕಟರಮಣ ದೇವಸ್ಥಾನದಲ್ಲಿ ಪ್ರಮುಖರ ಸಭೆ ನಡೆಸಿ, ನಮ್ಮ ಸಮುದಾಯವು ಸದಾ ರಾಷ್ಟ್ರವಾದಿ ಚಿಂತನೆಯನ್ನು ಬೆಂಬಲಿಸಿಕೊಂಡು ಬಂದಿದೆ. ಎಲ್ಲ ಸಂದರ್ಭದಲ್ಲಿ ಬಿಜೆಪಿ ಪರವಾಗಿಯೇ ನಿಂತಿದೆ. ಪ್ರಧಾನಿ ನರೇಂದ್ರ...
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಡ್ಯಾಂ ನ ಬಳಿಯಿಂದ ಅಕ್ರಮವಾಗಿ ಮರಳು ಮಾರಾಟಕ್ಕೆ ಯತ್ನ : ಓರ್ವನ ವಿರುದ್ದ ಪ್ರಕರಣ ದಾಖಲು –ಕಹಳೆ ನ್ಯೂಸ್

ಬಂಟ್ವಾಳ: ಡ್ಯಾಂ ನ ಬಳಿಯಿಂದ ಅಕ್ರಮವಾಗಿ ಮರಳು ಮಾರಾಟಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನ ವಿರುದ್ದ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಬ್ಯಾರೇಜ್ ಕಮ್ ಡ್ಯಾಂ ನ ಎದುರುಭಾಗದಿಂದ ಅಕ್ರಮವಾಗಿ ಮರಳು ತೆಗೆಯುವ ಉದ್ದೇಶದಿಂದ ನದಿಯಲ್ಲಿ ನಿಲ್ಲಿಸಲಾಗಿದ್ದ ಒಂದು ಟಿಪ್ಪರ್ ಹಾಗೂ ಹಿಟಾಚಿಯನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನದಿ ಭಾಗದಲ್ಲಿ ಸುಮಾರು 7 ಟಿಪ್ಪರ್ ಲಾರಿ ಲೋಡ್ ಗಳಷ್ಟು...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲ: ಬೈಕ್‌ಗೆ ಕಾರ್ ಡಿಕ್ಕಿ ;ಬೈಕ್ ಸವಾರನಿಗೆ ಗಾಯ –ಕಹಳೆ ನ್ಯೂಸ್

ವಿಟ್ಲ: ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಪಲ್ಟಿಯಾಗಿ ಸವಾರ ಗಾಯಗೊಂಡಿರುವ ಘಟನೆ ವಿಟ್ಲದಲ್ಲಿ ನಡೆದಿದೆ. ಬೈಕ್ ಸವಾರ ಕೊಳ್ಳಾಡು ಗ್ರಾಮದ ಮಂಕುಡೆ ಶಾಲಾ ಬಳಿಯ ಕೆ.ಹರ್ಷವರ್ಧನ ರಾವ್ (58 ವ)ರವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಏ.28ರಂದು ಅಡುಗೆ ಕೆಲಸದ ನಿಮಿತ್ತ ತಾನು ಮೋಟಾರ್ ಸೈಕಲ್‌ನಲ್ಲಿ ಮನೆಯಿಂದ ಕಬಕ ಕಡೆಗೆ ಹೊರಟು ಸಾಲೆತ್ತೂರು-ಕಬಕ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಕಬಕ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ...
ಕ್ರೀಡೆದಕ್ಷಿಣ ಕನ್ನಡಮೂಡಬಿದಿರೆಶಿಕ್ಷಣಸುದ್ದಿ

ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಸಾಫ್ಟ್ಬಾಲ್ ಪಂದ್ಯಾಟ – ಕಹಳೆ ನ್ಯೂಸ್

ಮೂಡುಬಿದಿರೆ: ಮಂಗಳೂರು ವಿವಿ ಯ ಅಂತರ್ ಕಾಲೇಜು ಮಟ್ಟದ ಪುರುಷರ ಹಾಗೂ ಮಹಿಳೆಯರ ವಿಭಾಗದ ಸಾಫ್ಟ್ಬಾಲ್ ಪಂದ್ಯಾಟವು ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು. ಮೂಡುಬಿದಿರೆ ಪುರಸಭಾ ಸದಸ್ಯ, ಕಾಲೇಜಿನ ಹಳೆ ವಿದ್ಯಾರ್ಥಿ ಪಿ.ಕೆ. ಥೋಮಸ್ ಅವರು ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ ಜೀವನದಲ್ಲಿ ಸೋಲು ಗೆಲುವು ಇದ್ದಂತೆಯೆ ಕ್ರೀಡೆಯಲ್ಲಿಯೂ ಇರುತ್ತದೆ. ಮೊದಲು ನಾವು ಸೋಲುವುದನ್ನು ಕಲಿತರೆ ಮುಂದೆ ಸತತ ಪ್ರಯತ್ನದಿಂದ ಗೆಲುವನ್ನು ಸಾಧಿಸಲು ಸಾಧ್ಯವಿದೆ ಎಂದರು. ಮಂಗಳೂರು ವಿವಿಯ...
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು : ವಿವೇಕಾನಂದ ಕಾಲೇಜು ರಸ್ತೆಯಲ್ಲಿರುವ ರೈಲ್ವೇ ಮೇಲ್ಸೆತುವೆ ಸಾಂಕೇತಿಕ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು : ನೆಹರುನಗರ ವಿವೇಕಾನಂದ ಕಾಲೇಜು ರಸ್ತೆಯಲ್ಲಿರುವ ರೈಲ್ವೇ ಮೇಲ್ಸೆತುವೆಯನ್ನು ಇಂದು ಸಾಂಕೇತಿಕವಾಗಿ ಉದ್ಘಾಟಿಸಲಾಯಿತು. ಹಲವು ವರ್ಷಗಳ ಬೇಡಿಕೆಯಾಗಿದ್ದ ರೈಲ್ವೇ ಮೇಲ್ಸೆತುವೆಯ ಕಾಮಗಾರಿ ಪೂರ್ಣಗೊಂಡಿದ್ದು, ಇಂದು ನಗರ ಸಭೆ ಮಾಜಿ ಅಧ್ಯಕ್ಷರಾದ ಜೀವಂಧರ್ ಜೈನ್ ಅವರ ನೇತೃತ್ವದಲ್ಲಿ ಸ್ಥಳೀಯರು ಸಾಂಕೇತಿಕವಾಗಿ ಉದ್ಘಾಟಿಸಿದರು. ಮೇ.1ರಿಂದ ಈ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಈ ವೇಳೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿದ ಧಾತ್ರಿ ಕನ್ಸ್ಟ್ರಕ್ಷನ್ ನ ಕಾಂಟ್ರಾಕ್ಟರ್ ತಿರುಪ್ಪಾಲ್ ರೆಡ್ಡಿ ಅವರನ್ನು ಗೌರವಿಸಲಾಯಿತು. ಈ...
ದಕ್ಷಿಣ ಕನ್ನಡಬೆಂಗಳೂರುರಾಜಕೀಯಸುದ್ದಿ

ಇಹ ಲೋಕ ತ್ಯಜಿಸಿದ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ –ಕಹಳೆ ನ್ಯೂಸ್

ಬೆಂಗಳೂರು:(ಎ.29) ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಹು ಅಂಗಾAಗ ಸಮಸ್ಯೆಗಳಿಂದ ಬಳಲುತ್ತಿದ್ದ ಶ್ರೀನಿವಾಸ ಪ್ರಸಾದ್ ಅವರು ಮೂರು ದಿನಗಳ ಹಿಂದೆ ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಧ್ಯರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಶ್ರೀನಿವಾಸ ಪ್ರಸಾದ್ ಅವರು ಮೈಸೂರು, ಚಾಮರಾಜನಗರ ಭಾಗದ ಪ್ರಭಾವಿ ದಲಿತ ಮುಖಂಡರಾಗಿದ್ದರು. ಸ್ವಾಭಿಮಾನಿ ರಾಜಕಾರಣಿ ಎಂದೇ ಹೆಸರಾಗಿದ್ದರು. ಚಾಮರಾಜನಗರ...
1 2 3 2,433
Page 1 of 2433