Monday, September 14, 2026
ಮೈಸೂರುಸುದ್ದಿ

ಮೈಸೂರಿನಲ್ಲಿ ಸ್ವಂತ ಮನೆ ಕಟ್ಟಿಸಿದ ಸಿದ್ದರಾಮಯ್ಯ: ಇಂದು ಸರಳವಾಗಿ ನೆರವೇರಿತು ಗೃಹ ಪ್ರವೇಶ – ಕಹಳೆ ನ್ಯೂಸ್

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರ ಪತ್ನಿ ಪಾರ್ವತಿ ಅವರ ಬಹು ವರ್ಷಗಳ ಕನಸು ಕೊನೆಗೂ ನನಸಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ವಂತ ಮನೆಯೊಂದನ್ನು ನಿರ್ಮಿಸಬೇಕೆಂಬ ಪತ್ನಿಯ ಆಸೆಯಂತೆ ಸಿದ್ದರಾಮಯ್ಯ ಅವರು ನಿರ್ಮಿಸಿರುವ ನೂತನ ನಿವಾಸದ ಗೃಹ ಪ್ರವೇಶ ಗಣೇಶ ಚತುರ್ಥಿ ಶುಭ ದಿನದಿಂದದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಇಂದು ನೆರವೇರಿತು.
ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ 80*120 ಅಳತೆಯ ನಿವೇಶನದಲ್ಲಿ ಎರಡು ಅಂತಸ್ತಿನ ನೂತನ ಬಂಗಲೆಯನ್ನು ನಿರ್ಮಿಸಲಾಗಿದೆ.

ಜಾಹೀರಾತು