Tuesday, August 11, 2026
ದೆಹಲಿರಾಜ್ಯಸುದ್ದಿ

ಕೆಂಪುಕೋಟೆಯಲ್ಲಿ ಫಸ್ಟ್‌ ಟೈಮ್‌ ಮೊಳಗಲಿದೆ ‘ವಂದೇ ಮಾತರಂ’ ಗಾಯನ – ಕಹಳೆ ನ್ಯೂಸ್

ನವದೆಹಲಿ: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ವಂದೇ ಮಾತರಂ ಗೀತೆಗೆ 150ನೇ ವರ್ಷ ತುಂಬುತ್ತಿರುವ ಹೊತ್ತಲ್ಲೇ ಈ ಬಾರಿಯ 80ನೇ ಸ್ವಾತಂತ್ರ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯ ಮೇಲೆ `ವಂದೇ ಮಾತರಂ’ ಗೀತೆ ಮೊಳಗಲಿದೆ.

ಜಾಹೀರಾತು

ಪ್ರಧಾನಿ ಮೋದಿ ಅವರು ಧ್ವಜಾರೋಹಣ ನೆರವೇರಿಸಿದ ಬಳಿಕ ರಾಷ್ಟ್ರಗೀತೆ ಜೊತೆಗೆ ವಂದೇ ಮಾತರಂ ಹಾಡಲಾಗುವುದು ಅಂತ ರಕ್ಷಣಾ ಇಲಾಖೆ ತಿಳಿಸಿದೆ. ಅಂದಹಾಗೆ, ಈ ಬಾರಿ ಮೋದಿ ಅವರ ಭಾಷಣದಲ್ಲಿ ಯುವಶಕ್ತಿ ಮತ್ತು 2047ರ ವಿಕಸಿತ ಭಾರತಕ್ಕೆ ಯಂಗ್ ಇಂಡಿಯಾದ ಕೊಡುಗೆ ಬಗ್ಗೆ ಉಲ್ಲೇಖಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮಧ್ಯೆ, ಸ್ವಾತಂತ್ರ್ಯೋತ್ಸವದ ದಿನ ಪೂರ್ಣಪ್ರಮಾಣದಲ್ಲಿ ವಂದೇ ಮಾತರಂ ಹಾಡಬೇಕೆಂಬ ಕೇಂದ್ರ ಸರ್ಕಾರದ ಸುತ್ತೋಲೆ ಕೇರಳದಲ್ಲಿ ವಿವಾದಕ್ಕೀಡಾಗಿದೆ. ಪೂರ್ಣಪ್ರಮಾಣದಲ್ಲಿ ಹಾಡು ಬೇಡ ಅಂತ ಸಿಎಂ ವಿಡಿ ಸತೀಶನ್ ವಿರುದ್ಧ ಮಾಜಿ ಸಿಎಂ ಪಿಣರಾಯಿ ವಿಜಯ್ ಕಿಡಿಕಾರಿದ್ದು, ಕೇಂದ್ರ ಸರ್ಕಾರವು ಸಂಘಪರಿವಾರದ ಅಜೆಂಡಾವನ್ನುಹೇರುತ್ತಿದೆ ಅಂದಿದ್ದಾರೆ. ಅಲ್ಲದೆ, ಮುಸ್ಲೀಂ ಲೀಗ್ ಕೂಡ ಆಕ್ಷೇಪಿಸಿದೆ.