Recent Posts

Sunday, June 7, 2026

ಮೂಡಬಿದಿರೆ

ಜಿಲ್ಲೆಮೂಡಬಿದಿರೆಸುದ್ದಿ

ಡಿಬಿಎಲ್ ಕಂಪನಿಯ ಕಳಪೆ ಕಾಮಗಾರಿ : ಮಿಜಾರಿನಲ್ಲಿ ಮಳೆಗೆ ಕೊಚ್ಚಿ ಹೋದ ರಸ್ತೆ -ಕಹಳೆ ನ್ಯೂಸ್

ಮೂಡುಬಿದಿರೆ : ಡಿಬಿಎಲ್ ಕಂಪನಿಯ ಕಳಪೆ ಕಾಮಗಾರಿಯಿಂದ ಮಂಗಳೂರು- ಮೂಡುಬಿದಿರೆ ಮಿಜಾರಿನಲ್ಲಿ ರಸ್ತೆಯು ಮಳೆಗೆ ಕೊಚ್ಚಿ ಹೋಗಿ ಅಪಾಯದ ಸ್ಥಿತಿ ಎದುರಾಗಿದೆ. ರಾ. ಹೆ. ನಿಮಿ೯ಸುವ ಮೊದಲು ವೈಜ್ಞಾನಿಕ ರೀತಿಯಲ್ಲಿ ಸವೀ೯ಸ್ ರಸ್ತೆಯನ್ನು ನಿಮಿ೯ಸದೆ ನೀರು ಹರಿಯುವ ದೊಡ್ಡ ಸೇತುವೆ ಜಾಗದಲ್ಲಿ ಅತೀ ಚಿಕ್ಕ ಮೋರಿ ನಿರ್ಮಿಸಿರುವುದರಿಂದಲೇ ರಸ್ತೆ ಕುಸಿಯಲು ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದರು. ಇದೀಗ ಹೊಂಡವಾಗಿರುವ ರಸ್ತೆಯ ಬದಿಗೆ ಕಲ್ಲುಗಳನ್ನು ಮಾತ್ರ ಇಡಲಾಗಿದೆ ಹೊರತು ಯಾವುದೇ ಸುರಕ್ಷತಾ...
ಜಿಲ್ಲೆಮೂಡಬಿದಿರೆಸುದ್ದಿ

ಮೂಡುಬಿದಿರೆ ಪುತ್ತಿಗೆ ಯಲ್ಲಿ ಪದ್ಮಾವತಿ ಜೈನ ಸಮುದಾಯ ಭವನ ಉದ್ಘಾಟನೆ : ಮಕ್ಕಿಮನೆ ಕಲಾವೃಂದ ಬಳಗದಿಂದ ವೈವಿಧ್ಯತೆಯ ಸಾಂಸ್ಕ್ರತಿಕ ಕಾರ್ಯಕ್ರಮ -ಕಹಳೆ ನ್ಯೂಸ್

ಮೂಡುಬಿದಿರೆ : ಪದ್ಮಾವತಿ ಚಾರಿಟೇಬಲ್ ಟ್ರಸ್ಟ್ (ರಿ) ಚಿಟ್ಟೆಮಾರ್, ಸಂಪಿಗೆ , ಪುತ್ತಿಗೆ ವತಿಯಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದೊಂದಿಗೆ ನಿರ್ಮಿಸಿರುವ ಸುಂದರ ಪರಿಸರದಲ್ಲಿ ಭವ್ಯವಾದ "ಪದ್ಮಾವತಿ ಜೈನ ಸಮುದಾಯ ಭವನ ಸೋಮವಾರ ಶುಭ ಆರಂಭವಾದಿದ್ದು  ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಸುದೇಶ್ ಜೈನ್ ಮಕ್ಕಿಮನೆ ಸಂಯೋಜನೆಯಲ್ಲಿ ಮಕ್ಕಿಮನೆ ಕಲಾವೃಂದ ಬಳಗದಿಂದ ಜಿನ ಭಜನಾ ಕಾರ್ಯಕ್ರಮ ಹಾಗೂ ವೈವಿಧ್ಯತೆಯ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು ಎಲ್ಲರ ಮೆಚ್ಚುಗೆ ಪಡೆಯಿತು. ಪ್ರಮಯಿ ಜೈನ್ ಮೂಡುಬಿದಿರೆ...
ಜಿಲ್ಲೆದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಮೂಡುಬಿದಿರೆ: ಪಾಳುಬಿದ್ದ ಮನೆಯಲ್ಲಿ ಅನಾಥ ಶವ ಪತ್ತೆ – ಕಹಳೆ ನ್ಯೂಸ್

ಮೂಡುಬಿದಿರೆ: ಇಲ್ಲಿನ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡದಂಗಡಿ ಪರಿಸರದ ಪಾಳುಬಿದ್ದ ಮನೆಯೊಂದರಲ್ಲಿ ಅನಾಥ ಶವವೊಂದು ತೀವ್ರವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹವು ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಈ ವ್ಯಕ್ತಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದ್ದು, ಶವದಿಂದ ತೀವ್ರ ದುರ್ನಾಥ ಬರುತ್ತಿತ್ತು. ನೆರೆಮನೆಯವರ ನಾಯಿಯೊಂದು ಕಾಣೆಯಾಗಿದ್ದರಿಂದ, ಅದು ಎಲ್ಲಾದರೂ ಸತ್ತು ಬಿದ್ದಿರಬಹುದೇ ಎಂದು ಸುತ್ತಮುತ್ತ ಹುಡುಕಾಟ ನಡೆಸುತ್ತಿದ್ದಾಗ ಈ ಪಾಳುಬಿದ್ದ...
ಜಿಲ್ಲೆದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಎನ್.ಎಂ.ಸಿ ವಿದ್ಯಾರ್ಥಿಗಳ ಸಾಧನೆ: ಅಂತರ್‌ಕಾಲೇಜು ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ -ಕಹಳೆ ನ್ಯೂಸ್

ಮೂಡಬಿದ್ರೆಯ ಅಳ್ವಾಸ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಮಂಗಳೂರು ವಿಶ್ವವಿದ್ಯಾಲಯದ ಅಂತರ್‌ಕಾಲೇಜು ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ತೃತೀಯ ಬಿ.ಕಾಂ ವಿದ್ಯಾರ್ಥಿ ಅಭಿನಂದನ್ ಬಿ.ಎಸ್. ಅವರು 79 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರೆ, ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಶ್ರೀಶ್ಮಾ ಅವರು 47 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಈ ಸಾಧನೆಗೆ ಮಾಜಿ ರಾಷ್ಟ್ರೀಯ ಚಾಂಪಿಯನ್ ತರಬೇತುದಾರ...
ಮೂಡಬಿದಿರೆವಾಣಿಜ್ಯಸುದ್ದಿ

ಝರಿ ಬೆದ್ರ ನೂತನ ಮಳಿಗೆ ಉದ್ಘಾಟನೆ : ವಸ್ತ್ರ ವೈವಿಧ್ಯದ ಝರಿ ಕೌಚರ್ ಈಗ ಜೈನಕಾಶಿ ಮೂಡುಬಿದಿರೆಯಲ್ಲಿ…!! – ಕಹಳೆ ನ್ಯೂಸ್

ಮೂಡುಬಿದಿರೆ: ಬಸ್ ನಿಲ್ದಾಣದ ಎದುರಿಗಿನ ನವಮಿ ಪ್ಲಾಜಾದಲ್ಲಿ ಝರಿ ಕೌಚರ್ ಸಂಸ್ಥೆಯ ಝರಿ ಬೆದ್ರ ನೂತನ ಮಳಿಗೆ ಭನುವಾರ ಉದ್ಘಾಟನೆಗೊಂಡಿತು. ವಿಜಯಲಕ್ಷ್ಮೀ ಆರಿಗ ಮಳಿಗೆ ಉದ್ಘಾಟಿಸಿದರು. ಮೂಡುಬಿದಿರೆ ಪುರಸಭೆ ಮುಖ್ಯ ಅಧಿಕಾರಿ ಇಂದು ಎಂ ದೀಪ ಬೆಳಗಿಸಿ ಮಾತನಾಡಿ, ಝರಿ ವಸ್ತ್ರ ಮಳಿಗೆ ಮೂಡುಬಿದಿರೆಯಲ್ಲಿ ಸ್ಥಾಪನೆಗೊಂಡಿರುವುದು ಸಂತಸದ ವಿಷಯ. ಮಹಿಳೆಯರಿಗೆ ಪ್ರಿಯವಾದ ಈ ಮಳಿಗೆಯಿಂದ ಎಲ್ಲ ಸಮಾರಂಭಗಳಿಗೆ ಒಂದೇ ಸೂರಿನಡಿ ವಸ್ತ್ರ ಖರೀದಿಸುವ ಅವಕಾಶ ಒದಗಿಬಂದಿದೆ. ಝರಿ ಸಂಸ್ಥೆ ಎಲ್ಲರ...
ಜಿಲ್ಲೆದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಮೂಡುಬಿದಿರೆಯಲ್ಲಿ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್ ಹೊಸ ಮಳಿಗೆ ಉದ್ಘಾಟನೆ -ಕಹಳೆ ನ್ಯೂಸ್

ಮೂಡುಬಿದಿರೆಯ ಬಸ್‌ಸ್ಟ್ಯಾಂಡ್ ಸಮೀ ಪದ ನವಮಿ ಪ್ಲಾಜಾದಲ್ಲಿ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್‌ನ ನೂತನ ಮಳಿಗೆಯು ಶುಭಾರಂಭಗೊಂಡಿದೆ. ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ನೂತನ ಮಳಿಗೆ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಸ್ಥಾಪಕರಾದ ಜಿ.ಎಲ್. ಆಚಾರ್ಯರು ವೃತ್ತಿಯ ಜತೆ ಸಮಾಜದ ಪರಿಕಲ್ಪನೆಯನ್ನು ಬೆಳೆಸಿಕೊಂಡವರು. ಯಾವ ರೀತಿ ನಾವು ವೃತ್ತಿ ಮತ್ತು ನಮ್ಮ ಧರ್ಮ, ಬೇರೆ ಬೇರೆ ಚಟುವಟಿಕೆಗಳನ್ನು ಹೇಗೆ ಮಾಡಬೇಕು ಎಂದು ನಮಗೆಲ್ಲ ಕಿವಿಮಾತುಗಳನ್ನು ಹೇಳಿ ಕೊಟ್ಟವರು. ಅದೇ ದಿಕ್ಕಿನಲ್ಲಿ...
ದಕ್ಷಿಣ ಕನ್ನಡಪುತ್ತೂರುಮಂಗಳೂರುಮೂಡಬಿದಿರೆಸುದ್ದಿಸುಳ್ಯಹಾಸನ

ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ ನಲ್ಲಿ “ರಿಪಬ್ಲಿಕ್ ಸೇಲ್” ಕೊಡುಗೆಗೆ ಗ್ರಾಹಕರಿಂದ ಉತ್ತಮ ಸ್ಪಂದನೆ -ಕಹಳೆ ನ್ಯೂಸ್

ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಪುತ್ತೂರು, ಮೂಡಬಿದ್ರೆ,ಸುಳ್ಯ, ಹಾಸನ ಮತ್ತು ಕುಶಾಲನಗರದಲ್ಲಿರುವ ತನ್ನ ಶಾಖೆಗಳಲ್ಲಿ ಗಣರಾಜ್ಯೋತ್ಸವ ಹಬ್ಬದ ಪ್ರಯುಕ್ತ "ರಿಪಬ್ಲಿಕ್ ಸೇಲ್" ಜನವರಿ 22ರಿಂದ 26ರವರೆಗೆ ಆಯೋಜಿಸಲಾಗಿದ್ದು ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯು ಭಾರೀ ಏರಿಕೆ ಕಂಡಿದ್ದು ಜಿ ಎಲ್ ರಿಪಬ್ಲಿಕ್ ಸೇಲ್‌ನಿಂದಾಗಿ ಮೇಕಿಂಗ್ ಚಾರ್ಜಸ್‌ನ ಮೇಲೆ ವಿಶೇಷ ರಿಯಾಯಿತಿ ದರವು ಗ್ರಾಹಕರಿಗೆ ಹೆಚ್ಚಿನ ಲಾಭದಾಯಕವಾಗಿದೆ ಹಾಗೂ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರಕಿದೆ....
ಕ್ರೀಡೆದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ರಾಜ್ಯ ಮಟ್ಟದ ಬಾಲ್‌ ಬ್ಯಾಡ್ಮಿಂಟನ್: ಆಳ್ವಾಸ್ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ-ಕಹಳೆನ್ಯೂಸ್

ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪಿಯು) ಹಾಸನ ಹಾಗೂ ಎಚ್‌ಎಸ್‌ಕೆ ಪಿಯು ಕಾಲೇಜಿನ ಆಶ್ರಯದಲ್ಲಿ ಹಾಸನದಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ಟೂರ್ನಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಬಾಲಕ ಹಾಗೂ ಬಾಲಕಿಯರ ತಂಡವು ಎರಡೂ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಬಾಲಕರ ವಿಭಾಗದಲ್ಲಿ ಆಳ್ವಾಸ್ ತಂಡವು ಬೆಂಗಳೂರು ದಕ್ಷಿಣ ತಂಡವನ್ನು 2-0 ಅಂತರದಲ್ಲಿ ಸೋಲಿಸಿ ಪ್ರಶಸ್ತಿ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ತಂಡವು ಬೆಂಗಳೂರು ದಕ್ಷಿಣ ತಂಡವನ್ನು 2-0...
1 2 3 29
Page 1 of 29