ನಿವೃತ್ತ ಸರಕಾರಿ ನೌಕರ ಸೀನಿಯರ್ ಲೇಡಿಸ್ ಕ್ಲಬ್ ವಿಟ್ಲ ಇದರ ಸಾಮಾನ್ಯ ಸಭೆ – ಕಹಳೆ ನ್ಯೂಸ್

ವಿಟ್ಲ : ನಿವೃತ್ತ ಸರಕಾರಿ ನೌಕರ ಸೀನಿಯರ್ ಲೇಡಿಸ್ ಕ್ಲಬ್ ವಿಟ್ಲ ಇದರ ಸಾಮಾನ್ಯ ಸಭೆಯು ಸೆಪ್ಟಂಬರ್ 11 ರಂದು ವಿಟ್ಲದ ಸೋಮಾವತಿ ಟೀಚರ್ ರವರ ಮನೆಯಲ್ಲಿ ಕ್ಲಬ್ ಅಧ್ಯಕ್ಷರಾದ ಜಯಂತಿ.ಕೆ. ರವರ ಅಧ್ಯಕ್ಷತೆಯಲ್ಲಿ ಜರಗಿತು.
ಬಂಟ್ವಾಳ ತಾಲೂಕು ನಿವೃತ್ತ ಸರಕಾರಿ ನೌಕರರ ಸಂಘದ ಪ್ರಧಾನಕಾರ್ಯದರ್ಶಿ ನಾರಾಯಣ ಪೂಜಾರಿ ಎಸ್ .ಕೆ ಮಾತನಾಡಿ ,ಪಿಂಚಣಿದಾರರ ಸಂಘವು, ಬಂಟ್ವಾಳ ತಾಲೂಕು ನಿವೃತ್ತ ಸರಕಾರಿ ನೌಕರರ ಸಂಘ ಎಂಬ ಹೆಸರಿನೊಂದಿಗೆ ನೋಂದಣಿಯಾದ ಬಗ್ಗೆ ಮಾಹಿತಿ ನೀಡಿ ಸದಸ್ಯರಾಗದ ಆಸಕ್ತರು ಸದಸ್ಯರಾಗುವ ಅವಕಾಶ ಇದೆಯೆಂದು ಹೇಳಿ,ಸದಸ್ಯತ್ವ ಅರ್ಜಿ ಫಾರ್ಮ್ ವಿತರಿಸಿದರು.
ನಿವೃತ್ತ ಸರಕಾರಿ ನೌಕರರು ಮಾತ್ರ ಇರುವ ಈ ಲೇಡಿಸ್ ಕ್ಲಬ್ ನ ಚಟುವಟಿಕೆ ಬಗ್ಗೆ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಸದಸ್ಯರಾದ ಪ್ರೇಮ.ಕೆ. ,ಲಕ್ಷ್ಮಿ.ಪಿ, ಗಣೇಶ್ ಕುಮಾರಿ, ಪಿ.ಕೆ.ಶಶಿಕಲಾ, ಜಯಂತಿ,ಚಂದ್ರಾವತಿ, ಸುಲೋಚನಾ, ಪ್ರೇಮಲತಾ, ಕಮಲ, ದೇವಕಿ ಅಮ್ಮ, ಕುಸುಮ, ರಾಣಿಕಲಾ, ಸುಶೀಲಾ, ರೇವತಿ,ಜಯಲಕ್ಷ್ಮಿ, ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಪುಷ್ಪಾ.ಎಚ್. ಸ್ವಾಗತಿಸಿ, ಸೋಮಾವತಿ ಟೀಚರ್ ವಂದಿಸಿದರು.ಭವ್ಯ ಟೀಚರ್ ಸಹಕರಿಸಿದರು,











