Thursday, April 23, 2026
ಅಂತಾರಾಷ್ಟ್ರೀಯಚಿಕ್ಕಮಂಗಳೂರುಶುಭಾಶಯಸುದ್ದಿ

ಕಾಫಿನಾಡಲ್ಲೊಂದು ಕಡಲಾಚೆಯ ಪ್ರೇಮಕಥೆ : ಚಿಕ್ಕಮಗಳೂರಿನ ಯುವಕನಿಗೆ ಜೋಡಿಯಾದ ಚೀನಾ ಚೆಲುವೆ!- ಕಹಳೆ ನ್ಯೂಸ್

ಚಿಕ್ಕಮಗಳೂರು: ಪ್ರೇಮ  ದೇಶ, ಭಾಷೆ, ಗಡಿ ಎಲ್ಲದ್ದನ್ನೂ ಮೀರಿದ್ದು.. ಅದಕ್ಕೆ ಸಾಕ್ಷಿ ಎಂಬಂತೆ ನಗರದ ಹೌಸಿಂಗ್ ಬೋರ್ಡಿನ ಯುವಕನಿಗೆ ಚೀನಾದ  ಯುವತಿಯೊಬ್ಬಳು ಜೋಡಿಯಾಗಿದ್ದಾಳೆ. ಇಬ್ಬರು ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.

ಯುವಕ ರೂಪಕ್ ಚೀನಾ ಮೂಲದ ಜೇಡ್, ಕುಟುಂಬಸ್ಥರ ಸಮ್ಮುಖದಲ್ಲಿ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ  ಮದುವೆಯಾಗಿದ್ದಾರೆ. ಯುವತಿಯ ತಂದೆ – ತಾಯಿಯೇ ಚೀನಾದಿಂದ ಮಗಳನ್ನು ಕರೆತಂದು, ಯುವಕನಿಗೆ ಧಾರೆ ಎರೆದಿದ್ದಾರೆ. ಈ ವೇಳೆ ಭಾರತ-ಚೀನಾ ಸಂಪ್ರದಾಯ ಎರಡು ಒಂದೇ ರೀತಿ ಎಂದು ಯುವತಿ ಖುಷಿ ಪಟ್ಟಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆಸ್ಟ್ರೇಲಿಯಾದಲ್ಲಿ  ಓದುವಾಗ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರ ಕುಟುಂಬಸ್ಥರು ಒಪ್ಪಿ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಇಬ್ಬರೂ ಆಸ್ಟ್ರೇಲಿಯಾದಲ್ಲೇ ಸೆಟಲ್ ಆಗಿದ್ದಾರೆ. ಇನ್ನೂ ಚಿಕ್ಕಮಗಳೂರಿನ ಸೌಂದರ್ಯ ಕಂಡು ಚೀನಾ ಯುವತಿ ಫಿದಾ ಆಗಿದ್ದಾಳೆ.