Monday, September 14, 2026

ರಾಷ್ಟ್ರೀಯ

ದೆಹಲಿರಾಜ್ಯಸುದ್ದಿ

ಕೇತನ್ ಸಾವಿನ ಬಗ್ಗೆ ಅಪಹಾಸ್ಯ ಮಾಡಿದ್ದ ದಂತ ವೈದ್ಯೆ 5 ವರ್ಷ ಅಮಾನತು -ಕಹಳೆ ನ್ಯೂಸ್

ನವದೆಹಲಿ: ಲೋಹಗಢ ಕೋಟೆಯಿಂದ ತಳ್ಳಿ ಕೊಂದಿದ್ದ ಕೇತನ್ ಅಗರ್ವಾಲ್  ಸಾವನ್ನು ಅಪಹಾಸ್ಯ ಮಾಡಿದ್ದ ದಂತ ವೈದ್ಯೆಯನ್ನು ಅಖಿಲ ಭಾರತ ದಂತ ವೈದ್ಯಕೀಯ ವಿದ್ಯಾರ್ಥಿಗಳ ಮತ್ತು ಶಸ್ತ್ರಚಿಕಿತ್ಸಕರ ಸಂಘಐದು ವರ್ಷಗಳ ಕಾಲ ಅಮಾನತು ಮಾಡಿದೆ. ಅಮಾನತು ಆದೇಶದ ಪ್ರಕಾರ, ಮಧ್ಯಪ್ರದೇಶದ ಎಐಡಿಎಸ್‌ಎ ಸಂಘಟನೆಯ ಖಜಾಂಚಿಯಾಗಿದ್ದ ಡಾ.ಮುಸ್ಕಾನ್ ಸೋನಿ (Dr. Muskan Soni) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ಅಮಾನತುಗೊಳಿಸಲಾಗಿದೆ. ಇತ್ತೀಚಿಗೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ...
ಬೆಂಗಳೂರುರಾಜ್ಯಸುದ್ದಿ

ಕಿಂಚಿತ್ ಅಮಲು ಬೆರೆಸಿದರೂ ಗುಟ್ಕಾ, ಪಾನ್ ಮಸಾಲಾ ಕಂಪ್ಲೀಟ್ ಬ್ಯಾನ್: ಡಿಕೆಶಿ ಎಚ್ಚರಿಕೆ -ಕಹಳೆ ನ್ಯೂಸ್

ಬೆಂಗಳೂರು: ಪಾನ್ ಮಸಾಲಾ  ಗುಟ್ಕಾ ಹಾಗೂ ಅಡಿಕೆ ಪದಾರ್ಥಗಳಲ್ಲಿ ಸ್ವಲ್ಪ ಅಮಲು ಪದಾರ್ಥಗಳನ್ನು ಬೆರೆಸಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇದು ತಕ್ಷಣವೇ ನಿಲ್ಲದಿದ್ದರೆ ರಾಜ್ಯದಲ್ಲಿ   ಎಲ್ಲಾ ರೀತಿಯ ಪಾನ್ ಮಸಾಲಾ ಹಾಗೂ ಗುಟ್ಕಾಗಳನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌  ಎಚ್ಚರಿಕೆ ನೀಡಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 31ನೇ ಸಂಸ್ಥಾಪನಾ ದಿನ ಹಾಗೂ ‘ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ’ದ ಅಂಗವಾಗಿ ಬೆಂಗಳೂರಿನ  ಕಂಠೀರವ ಕ್ರೀಡಾಂಗಣದಲ್ಲಿ...
ಬೆಂಗಳೂರುರಾಜ್ಯಸುದ್ದಿ

ಬೆಂಗಳೂರಿನ ಮೊದಲ ಟನಲ್‌ ರಸ್ತೆ ಕಾಮಗಾರಿಗೆ ಇಂದು ಸಿಎಂ ಭೂಮಿಪೂಜೆ -ಕಹಳೆ ನ್ಯೂಸ್

ಬೆಂಗಳೂರು: ನಗರದ ಮೊದಲ ಟನಲ್ ರಸ್ತೆ ಕಾಮಗಾರಿಗೆ ಇಂದು ಭೂಮಿಪೂಜೆ ನೆರವೇರಲಿದೆ. ಹೆಬ್ಬಾಳದಿಂದ ಮೇಖ್ರಿ ಸರ್ಕಲ್ ವರೆಗೆ ನಿರ್ಮಾಣವಾಗುತ್ತಿರುವ ಟನಲ್ ರಸ್ತೆಗೆ ಬೆಳಗ್ಗೆ 9:30 ಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಭೂಮಿಪೂಜೆ ನೆರವೇರಿಸಲಿದ್ದಾರೆ.ಕಾರ್ಯಕ್ರಮ ಹಿನ್ನೆಲೆ ನಿನ್ನೆ ಕಾರ್ಯಕ್ರಮ ಸ್ಥಳಕ್ಕೆ ಸಾರಿಗೆ ಸಚಿವ ಬೈರತಿ ಸುರೇಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಸಚಿವ ಬೈರತಿ ಸುರೇಶ್ ಮಾತನಾಡಿ, 2.2 ಕಿ.ಮೀ ಉದ್ದದ ಟನಲ್ ರಸ್ತೆ ಕಾಮಗಾರಿಗೆ ಭಾನುವಾರ ಸಿಎಂ ಭೂಮಿ...
ಬೆಂಗಳೂರುರಾಜ್ಯಸುದ್ದಿ

ನಿರ್ಮಾಪಕ ಭಾ.ಮಾ.ಹರೀಶ್‌ ಪುತ್ರ ಉಲ್ಲಾಸ್‌ಗೌಡ ನಿಧನ -ಕಹಳೆ ನ್ಯೂಸ್

ಬೆಂಗಳೂರು: ನಿರ್ಮಾಪಕ ಭಾ.ಮಾ.ಹರೀಶ್‌ ಅವರ ಪುತ್ರ ಉಲ್ಲಾಸ್‌ಗೌಡ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ, ನಿರ್ಮಾಪಕ ಭಾ.ಮಾ.ಹರೀಶ್‌ ಪುತ್ರ ಉಲ್ಲಾಸ್‌ಗೌಡ ಅವರು ಶಿವಮೊಗ್ಗದ ಕೊಡಚಾದ್ರಿಗೆ ಟ್ರೆಕ್ಕಿಂಗ್‌ಗೆ ಹೋಗಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಉಲ್ಲಾಸ್‌ಗೌಡ ಅವರು ಐದು ತಿಂಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ....
ದೆಹಲಿರಾಜ್ಯಸುದ್ದಿ

ಡೇ-ಕೇರ್‌ನಲ್ಲಿ 2 ವರ್ಷದ ಮಗುವಿಗೆ 25 ಬಾರಿ ಕಚ್ಚಿದ ಮತ್ತೊಂದು ಮಗು – ಪ್ರಕರಣ ದಾಖಲಿಸದಂತೆ 10 ಲಕ್ಷ ರೂ. ಆಫರ್ -ಕಹಳೆ ನ್ಯೂಸ್

ನವದೆಹಲಿ: ಡೇ ಕೇರ್‌ನಲ್ಲಿ(Day Care) ನಡೆದ ನಿರ್ಲಕ್ಷ್ಯದಿಂದ 2 ವರ್ಷದ ಮಗುವೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಜೂನ್ 22ರಂದು ಸಿಐಡಿಸಿಒ ಪ್ರದೇಶದ ಫಸ್ಟ್‌ಕ್ರೈ ಇಂಟೆಲ್ಲಿಟಾಟ್ಸ್ ಪ್ರೀ-ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 10:30ರ ಸುಮಾರಿಗೆ ವಕೀಲೆಯಾಗಿರುವ ತಾಯಿ ತಮ್ಮ 2 ವರ್ಷದ ಮಗುವನ್ನು ಡೇ ಕೇರ್‌ನಲ್ಲಿ ಬಿಟ್ಟು ಹೋಗಿದ್ದರು. ಸ್ವಲ್ಪ ಸಮಯದ ಬಳಿಕ ಒಂದು ಮಗು...
ಗೋವಾಜಿಲ್ಲೆಸುದ್ದಿ

ಗೋವಾದ ಬಾಗಾ ಬೀಚ್‌ನಲ್ಲಿ ಕೊಚ್ಚಿ ಹೋದ ಕನ್ನಡಿಗ : ಬಂಡೆ ಮೇಲೆ ಕುಳಿತಿದ್ದಾಗ ಅಲೆಗಳ ರಭಸಕ್ಕೆ ಮುಳುಗಿ ಸಾವು -ಕಹಳೆ ನ್ಯೂಸ್

ಪಣಜಿ: ಗೋವಾದ ಜನಪ್ರಿಯ ಬಾಗಾ ಬೀಚ್‌ನಲ್ಲಿ (Baga Beach) ಬಂಡೆಯ ಮೇಲೆ ಕುಳಿತಿದ್ದ ಕನ್ನಡಿಗನೋರ್ವ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಬಲಿಪಶುವನ್ನು ಕರ್ನಾಟಕದ  ವಿಜಯಪುರ ಜಿಲ್ಲೆಯ ನಿವಾಸಿ ಸಹಸ್ ಅಶ್ಪಕ್ ಮಸಳಿ (33) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತ ವ್ಯಕ್ತಿ ಸಮುದ್ರದ ತೀರದಲ್ಲಿದ್ದ ಬಂಡೆಯ ಮೇಲೆ ಕುಳಿತಿದ್ದರು. ಈ ವೇಳೆ ಏಕಾಏಕಿ ಬೀಸಿದ ಬಿರುಗಾಳಿಯಿಂದ ಬಲವಾದ ಅಲೆಗಳು ಅವರನ್ನು ಎಳೆದೊಯ್ದಿದೆ. ಕೂಡಲೇ ಶೋಧ ಕಾರ್ಯ ಆರಂಭಿಸಿದರೂ ಕೂಡ...
ದೆಹಲಿರಾಜ್ಯಸುದ್ದಿ

‘ಕೃಷ್ಣ’ ಎಂದರೆ ನದಿ, ಧರ್ಮವಲ್ಲ; ಪಠ್ಯಪುಸ್ತಕ ವಿವಾದಕ್ಕೆ NCERT ಸ್ಪಷ್ಟನೆ -ಕಹಳೆ ನ್ಯೂಸ್

ನವದೆಹಲಿ: 6ನೇ ತರಗತಿಯ ಕನ್ನಡ ಪಠ್ಯಪುಸ್ತಕ ‘ಕೃಷ್ಣ’ ಕುರಿತು ಎದ್ದಿರುವ ವಿವಾದಕ್ಕೆ NCERT(ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ) ಸ್ಪಷ್ಟನೆ ನೀಡಿದೆ. ಪುಸ್ತಕದ ಹೆಸರಿಗೂ ಧರ್ಮಕ್ಕೂ ಯಾವುದೇ ಸಂಬಂಧ ಇಲ್ಲ. ‘ಕೃಷ್ಣ’ ಎಂಬುದು ಕೃಷ್ಣಾ ನದಿಯ ಹೆಸರಾಗಿದೆ ಎಂದು ತಳಿಸಿದೆ. ಇತ್ತೀಚೆಗೆ ಬಿಡುಗಡೆಯಾದ 6ನೇ ತರಗತಿಯ ಕನ್ನಡ (ಆರ್-3) ಪಠ್ಯಪುಸ್ತಕಕ್ಕೆ(Text Book) ‘ಕೃಷ್ಣ’ (Krishna)ಎಂದು ಹೆಸರು ಇಟ್ಟಿರುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಜೊತೆಗೆ, ಪಠ್ಯಪುಸ್ತಕದಲ್ಲಿ ಸಸ್ಯಾಹಾರವನ್ನು ಮಾತ್ರ ಪ್ರೋತ್ಸಾಹಿಸಲಾಗಿದೆ ಮತ್ತು ಮಾಂಸಾಹಾರವನ್ನು...
ಮುಂಬೈರಾಜ್ಯಸುದ್ದಿ

ʻನನ್ನನ್ನು ಕ್ಷಮಿಸಿ ಬಿಡು ಅಮ್ಮʼ : ವಿಡಿಯೋ ಮಾಡಿಟ್ಟು ಬಾವಿಗೆ ಹಾರಿದ ನೀಟ್‌ ಆಕಾಂಕ್ಷಿ – ಕಹಳೆ ನ್ಯೂಸ್

ಮುಂಬೈ: ಮಹಾರಾಷ್ಟ್ರದ  ಹಿಂಗೋಲಿಯಲ್ಲಿ 18 ವರ್ಷದ ನೀಟ್  ಆಕಾಂಕ್ಷಿ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಸ್ವಲ್ಪ ಸಮಯದ ಮುನ್ನ ವಿಡಿಯೋ ಮಾಡಿದ್ದು, ಅದರಲ್ಲಿ ಕೈಮುಗಿದು ʻಕ್ಷಮಿಸಿ, ಅಮ್ಮʼ ಎಂದು ಮನವಿ ಮಾಡಿದ್ದಾನೆ. ಸುಶೀಲ್ ಧಾಗೆ ಆತ್ಮಹತ್ಯೆಗೆ ಶರಣಾದ ಯುವಕ. ಈತ ಜೂ.21 ರಂದು NEET (UG) 2026 ಮರು ಪರೀಕ್ಷೆಗೆ ಹಾಜರಾಗಿದ್ದ. ಆತ್ಮಹತ್ಯೆಗೂ ಮುನ್ನ, 33 ಸೆಕೆಂಡುಗಳ ವಿಡಿಯೋ ಮಾಡಿ, ಕುಟುಂಬಸ್ಥರಿಗೆ ಕಳುಹಿಸಿದ್ದಾನೆ. ಆ ವಿಡಿಯೋದಲ್ಲಿ ತನ್ನ ತಾಯಿಗೆ...
1 14 15 16 17 18 364
Page 16 of 364