Sunday, September 13, 2026
ರಾಜ್ಯಸುದ್ದಿ

ಕಾರು ಮಾಲೀಕನಿಗೆ ‘ಹೆಲ್ಮೆಟ್‌ ಧರಿಸಿಲ್ಲ’ ಅಂತ ನೋಟಿಸ್‌ ಕೊಟ್ಟ ಎಐ ಕ್ಯಾಮೆರಾ! – ಕಹಳೆ ನ್ಯೂಸ್

ಚಿಕ್ಕೋಡಿ: ಅಥಣಿಯಲ್ಲಿ  ಟ್ರಾಫಿಕ್‌ ಪೊಲೀಸರ ಎಐ ಕ್ಯಾಮೆರಾ ಯಡವಟ್ಟೊಂದನ್ನು ಮಾಡಿದೆ. ಕಾರು ಮಾಲೀಕನಿಗೆ ‘ನೋ ಹೆಲ್ಮೆಟ್’‌ (ಸವಾರ ಹೆಲ್ಮೆಟ್‌ ಧರಿಸಿಲ್ಲ) ಅಂತ ದಂಡ ವಿಧಿಸಿದೆ.
ಬೆಳಗಾವಿ (Belagavi) ಜಿಲ್ಲೆ ಅಥಣಿ ಪಟ್ಟಣದ ನಿವಾಸಿ ಸುಭಾಷ್ ಬೋಜನೆ ಎಂಬ ವ್ಯಕ್ತಿ ತನಗೆ ಬಂದ ದಂಡದ ನೋಟಿಸ್‌ ನೋಡಿ ಶಾಕ್‌ ಆಗಿದ್ದಾರೆ.

ಜಾಹೀರಾತು

ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಲ್ಲಿ ಪ್ರಯಾಣಿಸಿದ್ದ ಕಾರೊಂದಕ್ಕೆ ನಿಯಮ ಉಲ್ಲಂಘನೆಯ ದಂಡ ಹಾಕಲಾಗಿತ್ತು. ಕಾರು ಮಾಲೀಕನ ವಾಟ್ಸಪ್‌ಗೆ ಟ್ರಾಫಿಕ್‌ ನಿಯಮ ಉಲ್ಲಂಘನೆಯ ಸಂದೇಶ ಬಂದಿತ್ತು. ಕಾರಿನ ಫೋಟೊವನ್ನು ಹಾಕಿ, ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ 500 ದಂಡ ರೂ. ದಂಡ ವಿಧಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಗಾವಿ ಜಿಲ್ಲಾ ಸಂಚಾರ ಪೊಲೀಸರ ದಂಡಕ್ಕೆ ಕಾರು ಮಾಲೀಕ ತಬ್ಬಿಬ್ಬಾಗಿದ್ದಾರೆ. ಹೆಲ್ಮೆಟ್‌ ಧರಿಸಿಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕಾರು ಮಾಲೀಕ ಸುಭಾಷ್ ಬೋಜನೆ ವಿಡಿಯೋ ವೈರಲ್‌ ಆಗಿದೆ.

ಕಾರು ಚಾಲಕರೂ ಹೆಲ್ಮೆಟ್‌ ಧರಿಸುವ ಪರಿಸ್ಥಿತಿ ಬಂತಾ ಅಂತ ಕೆಲವರು ಪ್ರಶ್ನಿಸಿದ್ದಾರೆ. ಎಐ ಕ್ಯಾಮೆರಾ ಯಡವಟ್ಟಿನ ಬಗ್ಗೆ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.