Sunday, June 14, 2026

ರಾಷ್ಟ್ರೀಯ

ಬೆಂಗಳೂರುರಾಜ್ಯಸುದ್ದಿ

ಖಾಸಗಿ ಫೋಟೋ ಇಟ್ಟುಕೊಂಡು ಸೈಬರ್ ವಂಚಕರ ಕಿರುಕುಳ – ಬೆಂಗಳೂರಿನಲ್ಲಿ ಬಿ.ಟೆಕ್ ವಿದ್ಯಾರ್ಥಿ ನಾಪತ್ತೆ -ಕಹಳೆ ನ್ಯೂಸ್

ಬೆಂಗಳೂರು: ಸೈಬರ್ ವಂಚಕರ ಕಿರುಕುಳಕ್ಕೆ ಬೇಸತ್ತು ಬಿ.ಟೆಕ್ ವಿದ್ಯಾರ್ಥಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ  ನಡೆದಿದೆ. ಒಡಿಶಾ ಮೂಲದ ಚಿನ್ಮಯ್ ಪ್ರಸಾದ್ ಸಾಹೋ ಎಂಬ ಯುವಕ ಕಣ್ಮರೆಯಾಗಿದ್ದಾನೆ. ಬಿ.ಟೆಕ್ ಓದಿಕೊಂಡಿರುವ ಚಿನ್ಮಯ್ ತನ್ನ ಗೆಳತಿಯೊಂದಿಗೆ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ಯುವಕ ಮತ್ತು ಯುವತಿ ಒಟ್ಟಿಗೆ ವಾಸವಾಗಿದ್ದು, ಕೆಲ ದಿನಗಳ ಹಿಂದೆ ಯುವಕ ಚಿನ್ಮಯ್ ಮೊಬೈಲ್‌ಗೆ ಆತನದ್ದೇ ಖಾಸಗಿ ಫೋಟೋಗಳು ಬಂದಿತ್ತು. ಸೈಬರ್ ವಂಚಕರು, ಇನ್ನೂ ಹಲವು ಖಾಸಗಿ ಫೋಟೋಗಳಿವೆ....
ಬೆಂಗಳೂರುರಾಜ್ಯಸುದ್ದಿ

SSLC ತೃತೀಯ ಭಾಷೆಗೆ ಈ ವರ್ಷ ಗ್ರೇಡ್ ಬೇಡ, ಅಂಕವನ್ನೇ ನೀಡಿ: ಹೈಕೋರ್ಟ್ ಆದೇಶ -ಕಹಳೆ ನ್ಯೂಸ್

ಬೆಂಗಳೂರು: ಹಿಂದಿ ಸೇರಿದಂತೆ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆಗೆ ಈ ವರ್ಷ ಗ್ರೇಡ್ ಬೇಡ, ಅಂಕವನ್ನೇ ನೀಡಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್ ನೀಡುವ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ವರ್ಷ ಹಳೆ ಪದ್ಧತಿಯನ್ನೇ ಮುಂದುವರಿಸುವಂತೆ ಸೂಚನೆ ನೀಡಿದೆ. ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಸಂಬಂಧ 2025ರ ಅಕ್ಟೋಬರ್ 28ರಂದು ಸುತ್ತೋಲೆ ಹೊರಡಿಸಲಾಗಿದೆ. ಬಳಿಕ...
ಜಿಲ್ಲೆದಕ್ಷಿಣ ಕನ್ನಡಬೆಂಗಳೂರುಸುದ್ದಿ

ಬೆಂಗಳೂರಿನಲ್ಲಿ ಜೀವಂತ ಗ್ರೆನೇಡ್ ಪತ್ತೆ ಕೇಸ್‌ : ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟ -ಕಹಳೆ ನ್ಯೂಸ್

ಬೆಂಗಳೂರು: ನಗರದಲ್ಲಿ ಜೀವಂತ ಗ್ರೆನೇಡ್‌ ಪತ್ತೆ ಪ್ರಕರಣದ ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟವಾಗಲಿದೆ. ನಗರದಲ್ಲಿ 2008ರ ಮಾದರಿಯಲ್ಲಿ ಸ್ಫೋಟ ನಡೆಸಲು ಆರೋಪಿಗಳು ಸಂಚು ರೂಪಿಸಿದ್ದರು. ಆರ್‌ಟಿ ನಗರದ ಮನೆಯಲ್ಲಿ ಜೀವಂತ ಗ್ರೆನೇಡ್, ಪಿಸ್ತೂಲ್, ಗುಂಡುಗಳು ವಶಕ್ಕೆ ಪಡೆಯಲಾಗಿತ್ತು. 2023 ರಲ್ಲಿ ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದರು. ಖಚಿತ ಮಾಹಿತಿ‌ ಮೇರೆಗೆ ಸಿಸಿಬಿ ದಾಳಿ ನಡೆಸಿತ್ತು. ಸ್ಫೋಟಕ ವಸ್ತುಗಳು, ವಾಕಿ ಟಾಕಿ, ಮ್ಯಾಪನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ಪ್ರಕರಣ ಎನ್ಐಎ ಕೈಗೆತ್ತಿಕೊಂಡು ವಿಚಾರಣೆ...
ದೆಹಲಿರಾಜ್ಯಸುದ್ದಿ

ನಿಲ್ಲದ ಮಧ್ಯಪ್ರಾಚ್ಯ ಸಂಘರ್ಷ : ಭಾರತದಲ್ಲಿ LPG ಬಳಕೆ 13% ಕುಸಿತ -ಕಹಳೆ ನ್ಯೂಸ್

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷ ಮುಂದುವರಿದಿದ್ದು, ಭಾರತದಲ್ಲಿ ಎಲ್‌ಪಿಜಿ (LPG) ಬಳಕೆ 13% ರಷ್ಟು ಕುಸಿತ ಕಂಡಿದೆ. ಯುದ್ಧದಿಂದಾಗಿ ಪೂರೈಕೆಯಲ್ಲಿ ಅಡಚಣೆ ಉಂಟಾಗಿರುವುದು ಎಲ್‌ಪಿಜಿ ಬಳಕೆ ತೀವ್ರ ಕುಸಿತಕ್ಕೆ ಕಾರಣವಾಗಿದೆ. ಭಾರತದಲ್ಲಿ ಮಾರ್ಚ್‌ನಲ್ಲಿ ಎಲ್‌ಪಿಜಿ ಬಳಕೆ ಶೇ.13ರಷ್ಟು ಕುಸಿತವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಎಲ್‌ಪಿಜಿ 2.729 ದಶಲಕ್ಷ ಟನ್ ಬಳಕೆಯಾಗಿತ್ತು. ಆದರೆ, ಈ ವರ್ಷದ ಮಾರ್ಚ್‌ನಲ್ಲಿ 2.379 ದಶಲಕ್ಷ ಟನ್ ಬಳಕೆಯಾಗಿದೆ. ಪೆಟ್ರೋಲಿಯಂ ಪ್ಲಾನಿಂಗ್ ಆ್ಯಂಡ್ ಅನಾಲಿಸಿಸ್ ಸೆಲ್ (ಪಿಪಿಎಸಿ) ದತ್ತಾಂಶಗಳಿಂದ...
ದೆಹಲಿರಾಜ್ಯಸುದ್ದಿ

ಕತ್ತು ಸೀಳಿ ನಿವೃತ್ತ ಆರ್‌ಬಿಐ ಅಧಿಕಾರಿಯ ಬರ್ಬರ ಹತ್ಯೆ – ಕಹಳೆ ನ್ಯೂಸ್

ನವದೆಹಲಿ: ಕತ್ತು ಸೀಳಿ ನಿವೃತ್ತ ಆರ್‌ಬಿಐ ಅಧಿಕಾರಿಯನ್ನು  ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯ  ಪಂಚಕುಯಿಯನ್ ಪ್ರದೇಶದಲ್ಲಿ ನಡೆದಿದೆ. ಮಾಧೋ ರಾಮ್ ಕೊಲೆಯಾದ ಅಧಿಕಾರಿ. ಎರಡು ವರ್ಷಗಳ ಹಿಂದೆ ಆರ್‌ಬಿಐ ಅಧಿಕಾರಿ ಹುದ್ದೆಯಿಂದ ನಿವೃತ್ತಿ ಹೊಂದ್ದಿದ್ದರು ಎಂದು ತಿಳಿದುಬಂದಿದೆ. ಕುಟುಂಬಸ್ಥರ ಮಾಹಿತಿ ಪ್ರಕಾರ, ಮೃತರ ಪತ್ನಿ ಸೀಮಾಪುರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಈ ವೇಳೆ ಮನೆಯಲ್ಲಿ ಮೃತ ವ್ಯಕ್ತಿ ಒಬ್ಬರೇ ಇದ್ದಾಗ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ ಎಂದರು....
ಬೆಂಗಳೂರುರಾಜ್ಯಸುದ್ದಿ

ನಲಪಾಡ್ ಮನೆ ಮೇಲೆ ಇಡಿ ದಾಳಿಗೆ ಆ 10 ಲಕ್ಷ ಕಾರಣಾನಾ?-ಕಹಳೆ ನ್ಯೂಸ್

ಬೆಂಗಳೂರು: ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್‌  ಮನೆ ಸೇರಿದಂತೆ 17 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಇಂದು (ಏ.20) ದಾಳಿ ನಡೆಸಿದ್ದಾರೆ. ಇದೀಗ ಇಡಿ ದಾಳಿಯ ಹಿಂದೆ 10 ಲಕ್ಷ ರೂ. ವಹಿವಾಟೊಂದರ ಶಂಕೆ ವ್ಯಕ್ತವಾಗಿದೆ. ಬಿಟ್‌ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಹ್ಯಾಕರ್ ಶ್ರೀಕಿ ಜೊತೆಯಲ್ಲಿ ಆರ್ಥಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಇಡಿ ದಾಳಿ ಮಾಡಿದೆ. ಶ್ರೀಕಿ ಜೊತೆ ನಲಪಾಡ್ ಆರ್ಥಿಕ ವ್ಯವಹಾರ ಇಟ್ಟುಕೊಂಡಿದ್ದರು. 2020 ರಲ್ಲಿ...
ದೆಹಲಿಸುದ್ದಿ

ಮಹಿಳಾ ಮೀಸಲಾತಿ ಸೋಲು ದ್ರೌಪದಿ ವಸ್ತ್ರಾಪಹರಣಕ್ಕೆ ಸಮ: ಯೋಗಿ ಆದಿತ್ಯನಾಥ್‌ -ಕಹಳೆ ನ್ಯೂಸ್

ಲಕ್ನೋ: ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದ್ದು, ದ್ರೌಪದಿ ವಸ್ತ್ರಾಪಹರಣಕ್ಕೆ ಸಮ ಎಂದು ಸಿಎಂ ಯೋಗಿ ಆದಿತ್ಯನಾಥ್‌ ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ. ಗುರುವಾರ ಸಂಸತ್ತಿನಲ್ಲಿ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರ ನಡವಳಿಕೆಯನ್ನು ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣಕ್ಕೆ ಹೋಲಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿದ್ದಾರೆ. ಕ್ಷೇತ್ರಗಳ ಪುನರ್ವಿಂಗಡಣೆಯ ನಂತರ ಮಹಿಳಾ ಕೋಟಾವನ್ನು ಜಾರಿಗೆ ತರಲು ಪ್ರಯತ್ನಿಸುವ ಮಸೂದೆಗೆ ಇಂಡಿಯಾ ಒಕ್ಕೂಟ ವಿರೋಧ ವ್ಯಕ್ತಪಡಿಸಿತು....
ಬೆಂಗಳೂರುರಾಜ್ಯಸುದ್ದಿ

ಲಾರಿ ಚಾಲಕನ ಅಜಾಗರೂಕತೆಯಿಂದ ಸರಣಿ ಅಪಘಾತ : ನಾಲ್ವರು ದುರ್ಮರಣ -ಕಹಳೆ ನ್ಯೂಸ್

ಬಳ್ಳಾರಿ: ಲಾರಿ (Lorry) ಚಾಲಕನ ಅಜಾಗರೂಕತೆಯಿಂದ ಸರಣಿ ಅಪಘಾತ (Serial Accident) ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಐದಾರು ಮಂದಿ ಗಾಯಗೊಂಡಿರುವ ಘಟನೆ ವಿಜಯನಗರ (Vijayanagar) ಜಿಲ್ಲೆಯ ಹೊಸಪೇಟೆ (Hospete) ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಬೆಳ್ಳುಳ್ಳಿ ಸಾಗಾಟ ಮಾಡುತ್ತಿದ್ದ ಲಾರಿ ಹೊಸಪೇಟೆ ಹೊರವಲಯದ ಟನಲ್‌ನಿಂದ ಡಣಾಪುರದವರೆಗೆ ಬೈಕ್, ಕಾರು ಹಾಗೂ ಬಸ್‌ಗೆ ಹೊಡೆದುಕೊಂಡು ಹೋಗಿದೆ. ಸದ್ಯಕ್ಕೆ ನಾಲ್ಕು ಜನರು ಸಾವನ್ನಪ್ಪಿರೋದರ ಕುರಿತು ಮಾಹಿತಿ ಲಭಿಸಿದೆ. ಅಪಘಾತದ ರಭಸಕ್ಕೆ...
1 16 17 18 19 20 345
Page 18 of 345