Thursday, June 25, 2026
ಮುಂಬೈರಾಜ್ಯಸುದ್ದಿ

ʻನನ್ನನ್ನು ಕ್ಷಮಿಸಿ ಬಿಡು ಅಮ್ಮʼ : ವಿಡಿಯೋ ಮಾಡಿಟ್ಟು ಬಾವಿಗೆ ಹಾರಿದ ನೀಟ್‌ ಆಕಾಂಕ್ಷಿ – ಕಹಳೆ ನ್ಯೂಸ್

ಮುಂಬೈ: ಮಹಾರಾಷ್ಟ್ರದ  ಹಿಂಗೋಲಿಯಲ್ಲಿ 18 ವರ್ಷದ ನೀಟ್  ಆಕಾಂಕ್ಷಿ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳುವ ಸ್ವಲ್ಪ ಸಮಯದ ಮುನ್ನ ವಿಡಿಯೋ ಮಾಡಿದ್ದು, ಅದರಲ್ಲಿ ಕೈಮುಗಿದು ʻಕ್ಷಮಿಸಿ, ಅಮ್ಮʼ ಎಂದು ಮನವಿ ಮಾಡಿದ್ದಾನೆ.

ಜಾಹೀರಾತು

ಸುಶೀಲ್ ಧಾಗೆ ಆತ್ಮಹತ್ಯೆಗೆ ಶರಣಾದ ಯುವಕ. ಈತ ಜೂ.21 ರಂದು NEET (UG) 2026 ಮರು ಪರೀಕ್ಷೆಗೆ ಹಾಜರಾಗಿದ್ದ. ಆತ್ಮಹತ್ಯೆಗೂ ಮುನ್ನ, 33 ಸೆಕೆಂಡುಗಳ ವಿಡಿಯೋ ಮಾಡಿ, ಕುಟುಂಬಸ್ಥರಿಗೆ ಕಳುಹಿಸಿದ್ದಾನೆ. ಆ ವಿಡಿಯೋದಲ್ಲಿ ತನ್ನ ತಾಯಿಗೆ ಭಾವನಾತ್ಮಕ ಸಂದೇಶ ರವಾನಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿಡಿಯೋದಲ್ಲಿ, ʻಅಮ್ಮ, ನಾನು ಇಂದು ನನ್ನ ಪ್ರಾಣವನ್ನೇ ಕಳೆದುಕೊಳ್ಳಲಿದ್ದೇನೆ. ದಯವಿಟ್ಟು ಚಿಂತಿಸಬೇಡಿ. ನನ್ನ ಮುಂದಿನ ಜನ್ಮದಲ್ಲಿ ಮತ್ತೆ ನಿಮ್ಮ ಮಗನಾಗಿಯೇ ಹುಟ್ಟುತ್ತೇನೆ. ನಿಮಗೆ ಈ ರೀತಿಯ ನೋವುಂಟುಮಾಡುವುದಿಲ್ಲ. ನೀವು ಸುಮೇಧ್ ಜೊತೆ ಚೆನ್ನಾಗಿರಿ. ನನ್ನ ಬಗ್ಗೆ ಚಿಂತಿಸಬೇಡಿ. ನನಗೆ ತೀವ್ರ ನೋವುಂಟಾಗಿದೆ. ನನಗೆ ಏನೂ ಮಾಡಲು ಸಾಧ್ಯವಿಲ್ಲ. ನನಗೆ ಏನೂ ಅರ್ಥವಾಗುತ್ತಿಲ್ಲ. ನನ್ನನ್ನು ಕ್ಷಮಿಸಿ ಎಂದು ಹೇಳಿಕೊಂಡಿದ್ದಾನೆ.

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET UG 2026) ಪರೀಕ್ಷೆಯನ್ನು ಮೇ 3 ರಂದು ನಡೆಸಲಾಗಿತ್ತು. ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದ ಬೆನ್ನಲ್ಲೇ ಮೇ 12 ರಂದು ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಬಳಿಕ ಜೂನ್ 21 ರಂದು ಮರು ಪರೀಕ್ಷೆ ನಡೆಸಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ನಡೆಸುತ್ತಿದೆ.