Monday, September 7, 2026
ಗೋವಾಜಿಲ್ಲೆಸುದ್ದಿ

ಗೋವಾದ ಬಾಗಾ ಬೀಚ್‌ನಲ್ಲಿ ಕೊಚ್ಚಿ ಹೋದ ಕನ್ನಡಿಗ : ಬಂಡೆ ಮೇಲೆ ಕುಳಿತಿದ್ದಾಗ ಅಲೆಗಳ ರಭಸಕ್ಕೆ ಮುಳುಗಿ ಸಾವು -ಕಹಳೆ ನ್ಯೂಸ್

ಪಣಜಿ: ಗೋವಾದ ಜನಪ್ರಿಯ ಬಾಗಾ ಬೀಚ್‌ನಲ್ಲಿ (Baga Beach) ಬಂಡೆಯ ಮೇಲೆ ಕುಳಿತಿದ್ದ ಕನ್ನಡಿಗನೋರ್ವ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ.
ಬಲಿಪಶುವನ್ನು ಕರ್ನಾಟಕದ  ವಿಜಯಪುರ ಜಿಲ್ಲೆಯ ನಿವಾಸಿ ಸಹಸ್ ಅಶ್ಪಕ್ ಮಸಳಿ (33) ಎಂದು ಗುರುತಿಸಲಾಗಿದೆ.

ಜಾಹೀರಾತು

ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತ ವ್ಯಕ್ತಿ ಸಮುದ್ರದ ತೀರದಲ್ಲಿದ್ದ ಬಂಡೆಯ ಮೇಲೆ ಕುಳಿತಿದ್ದರು. ಈ ವೇಳೆ ಏಕಾಏಕಿ ಬೀಸಿದ ಬಿರುಗಾಳಿಯಿಂದ ಬಲವಾದ ಅಲೆಗಳು ಅವರನ್ನು ಎಳೆದೊಯ್ದಿದೆ. ಕೂಡಲೇ ಶೋಧ ಕಾರ್ಯ ಆರಂಭಿಸಿದರೂ ಕೂಡ ವ್ಯಕ್ತಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವ್ಯಕ್ತಿ ಕೊಚ್ಚಿ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ವ್ಯಕ್ತಿಯು ಬಂಡೆ ಮೇಲೆ ಕುಳಿತಿದ್ದಾಗ ಬಲವಾದ ಅಲೆಗಳ ಹೊಡೆತ ಹೇಗಿತ್ತು. ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನ ಪಡುತ್ತಿರುವುದು ಕೂಡ ವಿಡಿಯೋದಲ್ಲಿ ಕಂಡುಬಂದಿದೆ.

ದುರಂತದ ನಂತರ ಅಧಿಕಾರಿಗಳು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದಾರೆ. ಆದಷ್ಟು ಸಮುದ್ರದ ಕಡಲ ತೀರದಲ್ಲಿರುವ ಬಂಡೆಗಳ ಸಮೀಪ ಹೋಗಬೇಡಿ. ಬಿರುಗಾಳಿ ಸಮಯದಲ್ಲಿ ಅಲೆಗಳು ಬಲವಾಗಿ ಅಪ್ಪಳಿಸುತ್ತವೆ. ಹೀಗಾಗಿ ಎಚ್ಚರದಿಂದಿರಿ ಎಂದು ತಿಳಿಸಿದ್ದಾರೆ.