Sunday, September 13, 2026
ಸುದ್ದಿ

ಜಾವಾ ಸಮುದ್ರದಲ್ಲಿ 240 ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಇಂಡೋನೇಷ್ಯಾ ಹಡಗು ಸಂಪರ್ಕ ಕಡಿತ – ಕಹಳೆ ನ್ಯೂಸ್

ಜಕಾರ್ತ: ಪೂರ್ವ ಜಾವಾದಿಂದ  ದಕ್ಷಿಣ ಕಲಿಮಂತನ್‌ ಪ್ರಾಂತ್ಯಕ್ಕೆ ಪ್ರಯಾಣಿಸುತ್ತಿದ್ದ 240 ಜನರಿದ್ದ ಹಡಗು ಜಾವಾ ಸಮುದ್ರದಲ್ಲಿ ಸಂಪರ್ಕ ಕಡಿತಗೊಂಡಿದೆ. ಇಂಡೋನೇಷ್ಯಾದ ರಕ್ಷಣಾ ಸಿಬ್ಬಂದಿ ಭಾನುವಾರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಜಾಹೀರಾತು

ಬೋರ್ನಿಯೋ ದ್ವೀಪದಲ್ಲಿರುವ ದಕ್ಷಿಣ ಕಲಿಮಂತನ್‌ನ ಬಂಜಾರ್‌ಮಾಸಿನ್ ನಗರದಲ್ಲಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಕಚೇರಿಯು, ಭಾನುವಾರ ರಾತ್ರಿ ಸುಮಾರು 2 ಗಂಟೆಗೆ ‘ವಿರ್ಗೊ ಟ್ರಾನ್ಸ್‌ಪೋರ್ಟ್ 8’ ಹಡಗಿನೊಂದಿಗಿನ ಸಂಪರ್ಕ ಕಡಿತಗೊಂಡ ಎರಡು ಗಂಟೆಗಳ ನಂತರ ತಮಗೆ ಈ ಕುರಿತು ಮಾಹಿತಿ ಲಭಿಸಿತು ಎಂದು ತಿಳಿಸಿದೆ. ಈ ಹಡಗು ಪೂರ್ವ ಜಾವಾ ಪ್ರಾಂತ್ಯದಲ್ಲಿರುವ ಇಂಡೋನೇಷ್ಯಾದ ಎರಡನೇ ಅತಿದೊಡ್ಡ ನಗರವಾದ ಸುರಾಬಾಯಾದಿಂದ ಬಂಜಾರ್‌ಮಾಸಿನ್‌ಗೆ ಪ್ರಯಾಣ ಬೆಳೆಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹಡಗು ಪ್ರತಿಕೂಲ ಹವಾಮಾನ ಪರಿಸ್ಥಿತಿಯನ್ನು ಎದುರಿಸಿದೆ ಎನ್ನಲಾಗಿದೆ. ಅದರ ನಿರ್ವಾಹಕರು ಈ ಘಟನೆಯ ಬಗ್ಗೆ ಅಧಿಕಾರಿಗಳಿಗೆ ವರದಿ ಮಾಡಿದರು ಎಂದು ಶೋಧ ಮತ್ತು ರಕ್ಷಣಾ ವಿಭಾಗದ ಮುಖ್ಯಸ್ಥ ಐ ಪುಟು ಸುದಯಾನ ತಿಳಿಸಿದ್ದಾರೆ.

ಆ ಹಡಗು ಕೊನೆಯದಾಗಿ ಬಂಜಾರ್‌ಮಾಸಿನ್‌ನ ಬಂದರು ಪ್ರದೇಶವೊಂದರಿಂದ ಸುಮಾರು 148 ಕಿಲೋಮೀಟರ್ (92 ಮೈಲಿ) ದೂರದಲ್ಲಿರುವ ಜಾವಾ ಸಮುದ್ರದಲ್ಲಿ ಪತ್ತೆಯಾಗಿತ್ತು. ಅದು 241 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ತಕ್ಷಣದ ವರದಿಗಳಿಲ್ಲ.

ನೌಕೆಯ ನಿರ್ವಾಹಕ ಪಿಟಿ ವಿರ್ಗೊ ಯೋಯೆಲ್ ರಿಹಿ ಅವರು ಸಂಪರ್ಕ ಕಡಿತಗೊಂಡಿರುವುದನ್ನು ವರದಿ ಮಾಡಿದ್ದು, ಆ ಹಡಗು ಶನಿವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 10:13ಕ್ಕೆ ಸುರಬಯಾದಿಂದ ಹೊರಟಿತ್ತು ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಬಂಜಾರ್‌ಮಾಸಿನ್‌ನ ಬಸಿರಿಹ್ ಶೋಧ ಮತ್ತು ರಕ್ಷಣಾ ಜೆಟ್ಟಿಗೆ ರಕ್ಷಣಾ ತಂಡವೊಂದನ್ನು ಕಳುಹಿಸಲಾಯಿತು. ‘ವರ್ಗೋ ಟ್ರಾನ್ಸ್‌ಪೋರ್ಟ್ 8’ ಹಡಗು ಕೊನೆಯದಾಗಿ ಪತ್ತೆಯಾಗಿದ್ದ ಅಂದಾಜು ಸ್ಥಳದತ್ತ ರಕ್ಷಣಾ ನೌಕೆಯೊಂದನ್ನು ರವಾನಿಸಲಾಯಿತು.