Sunday, September 6, 2026

ಸುದ್ದಿ

ಸುದ್ದಿ

ಫಿಲೋಮಿನಾ ಪ. ಪೂ ಕಾಲೇಜಿಗೆ ಮೈಟ್ ‘ಕಲ್ಚರಲ್ ಫಸ್ಟ್’ : ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ – ಕಹಳೆ ನ್ಯೂಸ್

ಪುತ್ತೂರು: ಮೈಟ್ ಟೆಕ್ನಿಕಲ್ ಅಂಡ್ ಪ್ರೊಫೆಷನಲ್ ಕಾಲೇಜು, ಮಂಗಳೂರು ಇದರ ಆಶ್ರಯದಲ್ಲಿ ಸೆ 2 ರಂದು ನಡೆದ 'ಕಲ್ಚರಲ್ ಫೆಸ್ಟ್' ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಪ್ರಥಮ ವಿಜ್ಞಾನ ವಿಭಾಗದ ಜೀತನ್ ಕೆ, ಪ್ರಗ್ಯಾನ್ ಡೆಲ್ವಿನ್ ಡಿಸೋಜಾ ಹಾಗೂ  ದ್ವಿತೀಯ ವಾಣಿಜ್ಯ ವಿಭಾಗದ ಧ್ಯಾನ್ ಬಿ ಟ್ರೆಶರ್ ಹಂಟ್ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ರಸಪ್ರಶ್ನೆ...
ಸುದ್ದಿ

ಯಕ್ಷಗಾನ ಕಲಾರಂಗದ 103ನೆಯ ಮನೆ ಹಸ್ತಾಂತರ – ಕಹಳೆ ನ್ಯೂಸ್

ಮುಂಡ್ಕೂರಿನ ಇಂದಿರಾ ನಗರದಲ್ಲಿ ಕಟಪಾಡಿ ರೋಟರಿ ಕ್ಲಬ್, ತನ್ನ ಬೆಳ್ಳಿಹಬ್ಬ ವರ್ಷಾಚರಣೆಯ ನೆನಪಿನಲ್ಲಿ ಯಕ್ಷಗಾನ ಕಲಾರಂಗದ ಮೂಲಕ ಸಾವಿತ್ರಿ ಇವರ ಬೌದ್ಧಿಕ ದೋಷವುಳ್ಳ ಪುತ್ರಿ ಶ್ರುತಿ ಇವರಿಗೆ ನಿರ್ಮಿಸಿದ ನೂತನ ಮನೆ ‘ಸಾವಿತ್ರಿ ಸದನ’ ಹಸ್ತಾಂತರಗೊಂಡಿತು. ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ರೋಟರಿ ಗವರ್ನರ್ ಬಿ. ಎಂ. ಭಟ್ ರೊಟರಿ ಸಂಸ್ಥೆ ಅಂತಾರಾಷ್ಟ್ರೀಯವಾಗಿ ಮಾಡುತ್ತಿರುವ ಕಾರ್ಯಕ್ರಮ ವಿವರಿಸಿ, ಯಕ್ಷಗಾನ ಕಲಾರಂಗ ಯಾವುದೆ ಪ್ರಚಾರ ಬಯಸದೆ ಸಮಾಜಪರವಾಗಿ ಮಾಡುತ್ತಿರುವ ಕೆಲಸ ಸಾಮಾಜಿಕ ಸಂಘಟನೆಗಳಿಗೆ...
ಸುದ್ದಿ

ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ತಂಡಕ್ಕೆ ಒಂದು ವಾರಗಳ ಕಾಲ ತರಬೇತಿ ಶಿಬಿರ  – ಕಹಳೆ ನ್ಯೂಸ್

ಪಟ್ಟೆ ಬಡಗನ್ನೂರು: ಕರ್ನಾಟಕ ರಾಜ್ಯ ಜೂನಿಯರ್ ಹುಡುಗರ ಮತ್ತು ಹುಡುಗಿಯರ ವಾಲಿಬಾಲ್ ತಂಡಗಳಿಗೆ ಒಂದು ವಾರದ ಕಾಲ ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಕ್ರೀಡಾಂಗಣದಲ್ಲಿ ತರಬೇತಿಯು ಆರಂಭವಾಯಿತು. ಈ ತರಬೇತಿಯಲ್ಲಿ ಬೆಂಗಳೂರು, ಮೈಸೂರು, ಉಡುಪಿ, ಕಾರ್ಕಳ, ಮಂಡ್ಯ, ಹಾಸನ ಮತ್ತು ದಕ್ಷಿಣ ಜಿಲ್ಲೆಯ ಆಯ್ದ ಆಟಗಾರರು ಭಾಗವಹಿಸುತ್ತ್ತಿದ್ದಾರೆ. ಸೆಪ್ಟೆಂಬರ್ 6 ರಿಂದ 10 ರ ವರೆಗೆ ಉತ್ತರಪ್ರದೇಶದ ನಾಸಿಕ್ ನಲ್ಲಿ ನಡೆಯುವ 'ರಾಷ್ಟ್ರೀಯ 3A ವಾಲಿಬಾಲ್ ಅಸೋಸಿಯೇಶನ್ 'ಪಂದ್ಯಾಟದಲ್ಲಿ ಭಾಗವಹಿಸಲು...
ಸುದ್ದಿ

ಹಿಂಜಾವೇ ಮುಖಂಡ ದಿನೇಶ್ ಪಂಜಿಗಗೆ ಜಾಮೀನು ಮಂಜೂರು-ಕಹಳೆ ನ್ಯೂಸ್

ಪುತ್ತೂರು ದರ್ಬೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವೈಮನಸ್ಸು ಉಂಟುಮಾಡುವ ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯ ಸಂದೇಶ ಪ್ರಸಾರ ಮಾಡಿ ಬಂದ್‌ಗೆ ಕರೆ ನೀಡಿದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ದಿನೇಶ್ ಪಂಜಿಗ ಅವರಿಗೆ ಇದೀಗ ಪುತ್ತೂರು ನ್ಯಾಯಾಲಯದಿಂದ ನಿರೀಕ್ಷಣ ಜಾಮೀನು ಮಂಜೂರಾಗಿದೆ. ವಾಟ್ಸಾಪ್ ಮೂಲಕ ಸಂದೇಶ ಪ್ರಸಾರ ಮಾಡಿದ ಆರೋಪದಡಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಿನೇಶ್ ಪಂಜಿಗ ವಿರುದ್ಧ ಭಾರತೀಯ ನ್ಯಾಯ...
ಬೆಂಗಳೂರುಸುದ್ದಿ

ಸೆ.21ರಿಂದ ಮೂರು ದಿನಗಳ ಕಾಲ ವಿಶೇಷ ಅಧಿವೇಶನ – ಕಹಳೆ ನ್ಯೂಸ್

ಬೆಂಗಳೂರು: ಸೆ.21ರಿಂದ ಮತ್ತೆ ಮೂರು ದಿನಗಳ ಕಾಲ ವಿಶೇಷ ಅಧಿವೇಶನ (Special Session) ನಡೆಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಸಿಎಂ ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಶೇಷ ಅಧಿವೇಶನಕ್ಕೆ ಒಪ್ಪಿಗೆ ನೀಡಲಾಗಿದೆ. ಸೆಪ್ಟೆಂಬರ್ 21ರಿಂದ ಸೆಪ್ಟೆಂಬರ್ 23ರವರೆಗೆ ಒಟ್ಟು ಮೂರು ದಿನಗಳ ಕಾಲ ವಿಶೇಷ ಅಧಿವೇಶನ ನಡೆಯಲಿದೆ. ಈ ಮೊದಲು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ...
ಸುದ್ದಿ

ಸೆ. 04ರಂದು ಸಾಜ ಶ್ರೀ ದುರ್ಗಾ-ವೆಂಕಟ್ರಮಣ ಭಜನಾ ಮಂದಿರದಲ್ಲಿ 19ನೇವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ಹಾಗೂ ವಿವಿಧ ಆಟೋಟ ಸ್ಪರ್ಧೆ – ಕಹಳೆ ನ್ಯೂಸ್

ಪುತ್ತೂರು : ವಿಶ್ವ ಹಿಂದೂ ಪರಿಷದ್ ಸಾಜ ಇದರ ನೇತೃತ್ವದಲ್ಲಿ ಶ್ರೀ ದುರ್ಗಾ-ವೆಂಕಟ್ರಮಣ ಭಜನಾ ಮಂದಿರ (ರಿ.) ಸಾಜ, ಬಲ್ನಾಡು ಇದರ ಸಹಯೋಗದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿ ಸಾಜ ಇವರ ಸಂಯುಕ್ತ ಆಶ್ರಯದಲ್ಲಿ 19ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಸೆ. 04ರಂದು ಶ್ರೀ ದುರ್ಗಾ-ವೆಂಕಟ್ರಮಣ ಭಜನಾ ಮಂದಿರ, ಸಾಜದಲ್ಲಿ ನಡೆಯಲಿದೆ. ಈ ಪ್ರಯುಕ್ತ ಸೆ. 04ರಂದು ಸಾಜದ ಶ್ರೀ ದುರ್ಗಾ-ವೆಂಕಟ್ರಮಣ ಭಜನಾ ಮಂದಿರದಲ್ಲಿ ಆಟೋಟ ಸ್ಪರ್ಧೆಗಳು...
ಶಿವಮೊಗ್ಗಸುದ್ದಿ

ಪೊಲೀಸರಿಂದ ತಪ್ಪಿಸಿಕೊಳ್ಳಲು ಕೊಳದಲ್ಲಿ ಮುಳುಗಿ ಕುಳಿತಿದ್ದ ರೌಡಿಶೀಟರ್! – ಕಹಳೆ ನ್ಯೂಸ್

ಶಿವಮೊಗ್ಗ:‌ ಮಹಾಭಾರತ ಯುದ್ದದ ಕೊನೆಯ ದಿನ ಪಾಂಡವರಿಂದ ತಪ್ಪಿಸಿಕೊಳ್ಳಲು ದುರ್ಯೋಧನ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಿದ್ದ ಕಥೆ ಎಲ್ಲರಿಗೂ ಗೊತ್ತಿದೆ. ಅದೇ ರೀತಿ ಪೊಲೀಸರಿಂದ  ತಪ್ಪಿಸಿಕೊಳ್ಳಲು ರೌಡಿಶಿಟರ್‌ ಒಬ್ಬ ಕೊಳದ ನೀರಲ್ಲಿ ಅರ್ಧಗಂಟೆ ಮುಳುಗಿ ಕುಳಿತ ಘಟನೆ ಭದ್ರಾವತಿಯಲ್ಲಿ  ನಡೆದಿದೆ. ಭದ್ರಾವತಿಯ ರೌಡಿಶೀಟರ್‌ ದಿಲೀಪ್‌ ಅಲಿಯಾಸ್‌ ಕರಿಯಾ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಳ್ಳದ ನೀರಿನಲ್ಲಿ ಅಡಗಿದ್ದ. ಈತನ ವಿರುದ್ಧ ಕಳ್ಳತನ, ಕೊಲೆ ಯತ್ನ ಸೇರಿ 16 ಪ್ರಕರಣಗಳಿವೆ. ಪ್ರಕರಣ ಒಂದರಲ್ಲಿ ಈತನ ವಿರುದ್ಧ...
ಸುದ್ದಿ

ಮುಂಬೈನಲ್ಲಿ ಪ್ರಪ್ರಥಮ ಪ್ರತಿಬಿಂಬ ಕಾರ್ಯಕ್ರಮ :ಶ್ರೀ ಅಖಿಲ ಹವ್ಯಕ ಮಹಾಸಭಾ ಆಯೋಜನೆಯ ಸ್ಪರ್ಧಾ ಸಂಭ್ರಮ – ಕಹಳೆ ನ್ಯೂಸ್

ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ, ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವುದಕ್ಕಾಗಿ, ಕಲೆ-ಸಂಸ್ಕೃತಿಯ ಉಳಿವಿಗಾಗಿ ಕಳೆದ 30 ವರ್ಷಗಳಿಂದ ಶ್ರೀ ಅಖಿಲ ಹವ್ಯಕ ಮಹಾಸಭಾ ಪ್ರತಿಬಿಂಬ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಇದೇ ಮೊಟ್ಟಮೊದಲ ಬಾರಿಗೆ ಮುಂಬೈ ಪ್ರಾಂತ್ಯದ ಪ್ರತಿಬಿಂಬ ಕಾರ್ಯಕ್ರಮ ಆಗಸ್ಟ್ 30ರಂದು ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬೈ ಸಹಯೋಗದೊಂದಿಗೆ ಅದ್ದೂರಿಯಾಗಿ ಸಂಪನ್ನವಾಯಿತು. ಮುಂಬೈ ಪ್ರತಿಬಿಂಬ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ್ದ ಡಾ. ಎನ್. ಜಿ. ಹೆಗಡೆ ಪುಣೆ ಮಕ್ಕಳನ್ನ ಸಂಸ್ಕಾರವಂತರನ್ನಾಗಿ ಬೆಳೆಸುವ ಜವಾಬ್ದಾರಿಗಳ ಕುರಿತಾಗಿ...
1 3 4 5 6 7 3,531
Page 5 of 3531