Friday, September 4, 2026
ಸುದ್ದಿ

ಸೆ. 04ರಂದು ಸಾಜ ಶ್ರೀ ದುರ್ಗಾ-ವೆಂಕಟ್ರಮಣ ಭಜನಾ ಮಂದಿರದಲ್ಲಿ 19ನೇವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ಹಾಗೂ ವಿವಿಧ ಆಟೋಟ ಸ್ಪರ್ಧೆ – ಕಹಳೆ ನ್ಯೂಸ್

ಪುತ್ತೂರು : ವಿಶ್ವ ಹಿಂದೂ ಪರಿಷದ್ ಸಾಜ ಇದರ ನೇತೃತ್ವದಲ್ಲಿ ಶ್ರೀ ದುರ್ಗಾ-ವೆಂಕಟ್ರಮಣ ಭಜನಾ ಮಂದಿರ (ರಿ.) ಸಾಜ, ಬಲ್ನಾಡು ಇದರ ಸಹಯೋಗದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿ ಸಾಜ ಇವರ ಸಂಯುಕ್ತ ಆಶ್ರಯದಲ್ಲಿ 19ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಸೆ. 04ರಂದು ಶ್ರೀ ದುರ್ಗಾ-ವೆಂಕಟ್ರಮಣ ಭಜನಾ ಮಂದಿರ, ಸಾಜದಲ್ಲಿ ನಡೆಯಲಿದೆ.

ಜಾಹೀರಾತು

ಈ ಪ್ರಯುಕ್ತ ಸೆ. 04ರಂದು ಸಾಜದ ಶ್ರೀ ದುರ್ಗಾ-ವೆಂಕಟ್ರಮಣ ಭಜನಾ ಮಂದಿರದಲ್ಲಿ ಆಟೋಟ ಸ್ಪರ್ಧೆಗಳು ನಡೆಯಲಿದೆ. ಬೆಳಗ್ಗೆ ಪುಟಾಣಿ ಮಕ್ಕಳಿಂದ ಸ್ಪರ್ಧೆಗಳ ಉದ್ಘಾಟನೆ ನಡೆಯಲಿದ್ದು, ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನದ ಅನ್ನಸಂತರ್ಪಣೆಯ ಬಳಿಕ ಸಂಜೆ ಸಮಾರೋಪ ಸಮಾರಂಭ ಮತ್ತು ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಾಜಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿಯ ಅಧ್ಯಕ್ಷ ಧನಂಜಯ ಕೆ. ಕೂಟೇಲು ವಹಿಸಲಿದ್ದು, ಸರಕಾರಿ ಹಿರಿಯ ಪದವಿ ಪೂರ್ವ ಕಾಲೇಜು, ವೆಂಕಟನಗರ, ಬೆಳಿಯೂರುಕಟ್ಟೆ ಇಲ್ಲಿನ ಇತಿಹಾಸ ಉಪನ್ಯಾಸಕಿ ಶ್ರೀಮತಿ ಇಂದಿರಾ ಭಂಡಾರಿ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಬಲ್ನಾಡು ಇದರ ನಿರ್ದೇಶಕ ಚಂದ್ರಪ್ಪ ಪೂಜಾರಿ ಕಾಡ್ಲ, ಮಾತೃಶ್ರೀ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಕುಸುಮ ಮುರುಂಗಿ, ಶ್ರೀದುರ್ಗಾ-ವೆಂಕಟ್ರಮಣ ಭಜನಾ ಮಂದಿರ(ರಿ) ಸಾಜ, ಬಲ್ನಾಡು ಇದರ ಅಧ್ಯಕ್ಷ ಬಾಲಕೃಷ್ಣ ಮುರುಂಗಿ, ಗ್ರಾಮ ಅಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿ ಶ್ರೀಮತಿ ಪ್ರಮೀಳಾ, ಹಾಗೂ ಜಯ ಇಲೆಕ್ಟ್ರಾನಿಕ್ಸ್ ಕಡಬ ಇದರ ಮಾಲಕ ಜಯಂತ ಸರೋಳಿಕಾನ ಭಾಗವಹಿಸಲಿದ್ದಾರೆ.