ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ತಂಡಕ್ಕೆ ಒಂದು ವಾರಗಳ ಕಾಲ ತರಬೇತಿ ಶಿಬಿರ – ಕಹಳೆ ನ್ಯೂಸ್

ಪಟ್ಟೆ ಬಡಗನ್ನೂರು: ಕರ್ನಾಟಕ ರಾಜ್ಯ ಜೂನಿಯರ್ ಹುಡುಗರ ಮತ್ತು ಹುಡುಗಿಯರ ವಾಲಿಬಾಲ್ ತಂಡಗಳಿಗೆ ಒಂದು ವಾರದ ಕಾಲ ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಕ್ರೀಡಾಂಗಣದಲ್ಲಿ ತರಬೇತಿಯು ಆರಂಭವಾಯಿತು.
ಈ ತರಬೇತಿಯಲ್ಲಿ ಬೆಂಗಳೂರು, ಮೈಸೂರು, ಉಡುಪಿ, ಕಾರ್ಕಳ, ಮಂಡ್ಯ, ಹಾಸನ ಮತ್ತು ದಕ್ಷಿಣ ಜಿಲ್ಲೆಯ ಆಯ್ದ ಆಟಗಾರರು ಭಾಗವಹಿಸುತ್ತ್ತಿದ್ದಾರೆ. ಸೆಪ್ಟೆಂಬರ್ 6 ರಿಂದ 10 ರ ವರೆಗೆ ಉತ್ತರಪ್ರದೇಶದ ನಾಸಿಕ್ ನಲ್ಲಿ ನಡೆಯುವ ‘ರಾಷ್ಟ್ರೀಯ 3A ವಾಲಿಬಾಲ್ ಅಸೋಸಿಯೇಶನ್ ‘ಪಂದ್ಯಾಟದಲ್ಲಿ ಭಾಗವಹಿಸಲು ತೆರಳುತ್ತಿರುವ ರಾಜ್ಯ ತಂಡಕ್ಕೆ ತರಬೇತಿದಾರರಾಗಿ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಮೋನಪ್ಪ ಎಮ್, ಶ್ರೀಯುತ ಗೋಪೀನಾಥ್, ಅಮೆಮ್ಸ್ ಮೂಡಡ್ಕದ ದೈಹಿಕ ಶಿಕ್ಷಣ ಶಿಕ್ಷಕರಾದ ರಫೀಕ್ ಆತೂರು ಭಾಗವಹಿಸಿರುತ್ತಾರೆ. ಈ ತರಬೇತಿಯು ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ ಭಟ್ ಇವರ ನೇತೃತ್ವದಲ್ಲಿ ನಡೆಯಿತು.











