Friday, September 4, 2026
ಸುದ್ದಿ

ಹಿಂಜಾವೇ ಮುಖಂಡ ದಿನೇಶ್ ಪಂಜಿಗಗೆ ಜಾಮೀನು ಮಂಜೂರು-ಕಹಳೆ ನ್ಯೂಸ್

ಪುತ್ತೂರು ದರ್ಬೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವೈಮನಸ್ಸು ಉಂಟುಮಾಡುವ ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯ ಸಂದೇಶ ಪ್ರಸಾರ ಮಾಡಿ ಬಂದ್‌ಗೆ ಕರೆ ನೀಡಿದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ದಿನೇಶ್ ಪಂಜಿಗ ಅವರಿಗೆ ಇದೀಗ ಪುತ್ತೂರು ನ್ಯಾಯಾಲಯದಿಂದ ನಿರೀಕ್ಷಣ ಜಾಮೀನು ಮಂಜೂರಾಗಿದೆ.

ಜಾಹೀರಾತು

ವಾಟ್ಸಾಪ್ ಮೂಲಕ ಸಂದೇಶ ಪ್ರಸಾರ ಮಾಡಿದ ಆರೋಪದಡಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಿನೇಶ್ ಪಂಜಿಗ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 353(2), 57 ಹಾಗೂ 189ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಹೈಕೋರ್ಟ್, ದಿನೇಶ್ ಪಂಜಿಗ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿತ್ತು.

ಹೈಕೋರ್ಟ್‌ನಲ್ಲಿ ದಿನೇಶ್ ಪಂಜಿಗ ಪರವಾಗಿ ಖ್ಯಾತ ನ್ಯಾಯವಾದಿ ಡಾ. ಅರುಣ್ ಶ್ಯಾಮ್ ವಾದ ಮಂಡಿಸಿದ್ದರು. ಸುಯೋಗ್ ಹೇರಳೆ ವಕಾಲತ್ತು ವಹಿಸಿದ್ದರು.

ಇದೀಗ ಪುತ್ತೂರು ನ್ಯಾಯಾಲಯದಲ್ಲಿಯೂ ದಿನೇಶ್ ಪಂಜಿಗ ಅವರಿಗೆ ನಿರೀಕ್ಷಣ ಜಾಮೀನು ಮಂಜೂರಾಗಿದ್ದು, ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆ ಮುಂದುವರಿಯಲಿದೆ.

ಪುತ್ತೂರು ನ್ಯಾಯಾಲಯದಲ್ಲಿ ದಿನೇಶ್ ಪಂಜಿಗ ಪರವಾಗಿ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ವಾದ ಮಂಡಿಸಿದರು.