ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಹೂವಿನಿಂದ ಕಂಗೊಳಿಸಿದ ಕೃಷ್ಣ ಮಠ – ಕಹಳೆ ನ್ಯೂಸ್
ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಕೃಷ್ಣನ ನಾಡು ಉಡುಪಿಯಲ್ಲಿ ಅಷ್ಟಮಿ ಸಂಭ್ರಮ ಜೋರಾಗಿತ್ತು. ಹಗಲೆಲ್ಲ ಉಪವಾಸವಿದ್ದು ಕೃಷ್ಣದೇವರ ಆರಾಧನೆಯಲ್ಲಿ ಭಕ್ತರು ತೊಡಗಿಸಿಕೊಂಡಿದ್ದರು. ನಗರದಾದ್ಯಂತ ವಿವಿಧ ವೇಷಗಳ ಕಲರವ ಕಂಡುಬಂತು. ಕೃಷ್ಣದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಜ್ಯದ ವಿವಿಧೆಡೆಯಿಂದ ಭಕ್ತರು ಉಡುಪಿಗೆ ಆಗಮಿಸಿ ಕೃಷ್ಣ ದೇವರ ದರ್ಶನ ಪಡೆದರು. ಮಧ್ಯರಾತ್ರಿ 12 ಗಂಟೆ 12 ನಿಮಿಷಕ್ಕೆ ಕೃಷ್ಣದೇವರಿಗೆ ಅರ್ಘ್ಯ ಸಮರ್ಪಣೆ ನಡೆಯಲಿದೆ. ಕೃಷ್ಣ ಮಠದಲ್ಲಿ ಮುದ್ದುಕೃಷ್ಣ ಸ್ಪರ್ಧೆ ಸೇರಿದಂತೆ ವಿವಿಧ ಧಾರ್ಮಿಕ...







