
ಧಾರವಾಡ: ಕರ್ತವ್ಯದ ಮೇಲಿದ್ದಾಗಲೇ ಹೃದಯಾಘಾತದಿಂದ ಶಾಲಾ ಮುಖ್ಯ ಶಿಕ್ಷಕ ಸಾವನ್ನಪ್ಪಿದ ಘಟನೆ ಧಾರವಾಡ ನಗರದ ಮಾಳಮಡ್ಡಿಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಐಐ ಮುಲ್ಲಾನವರ್ (59) ಹೃದಯಾಘಾತದಿಂದ ಸಾವನ್ನಪ್ಪಿದ ಮುಖ್ಯ ಶಿಕ್ಷಕ. ಕಳೆದ ಎರಡು ದಿನಗಳ ಹಿಂದೆ ಶುಕ್ರವಾರ ಶಾಲೆಯಲ್ಲಿ ಇದ್ದಾಗಲೇ ಹೃದಯಾಘಾತವಾಗಿತ್ತು. ಈ ವೇಳೆ ಶಾಲೆಯಲ್ಲಿ ಇದ್ದ ಶಿಕ್ಷಕರು ಮುಖ್ಯ ಶಿಕ್ಷಕ ಮುಲ್ಲಾನವರನ್ನು ಆಸ್ಪತ್ರೆಗೆ ರವಾನೆ ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮುಖ್ಯ ಶಿಕ್ಷಕ ಸಾವನ್ನಪ್ಪಿದ್ದಾರೆ.
ಶುಕ್ರವಾರ ಸಂಜೆ ಮುಖ್ಯ ಶಿಕ್ಷಕ ಸಾವನ್ನಪ್ಪಿದ ಹಿನ್ನೆಲೆ ಶಿಕ್ಷಕರ ದಿನಾಚರಣೆ ದಿನವೇ ಮುಲ್ಲಾನವರ ಕುಟುಂಬದವರು ಅವರ ಅಂತ್ಯಕ್ರಿಯೆ ಮಾಡಿದ್ದಾರೆ.











