ಪಿಜಿಯಲ್ಲಿ ಸಿಲಿಂಡರ್ ಬ್ಲಾಸ್ಟ್ : 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ – ಕಹಳೆ ನ್ಯೂಸ್
ಬೆಂಗಳೂರು: ಪಿಜಿಯಲ್ಲಿ (PG) ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 10ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಬೊಮ್ಮಸಂದ್ರದಲ್ಲಿ ನಡೆದಿದೆ. ಇಂದು ಮುಂಜಾನೆ 6 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಬೊಮ್ಮಸಂದ್ರದ ನಾಗರಾಜ್ ರೆಡ್ಡಿ ಎಂಬವರಿಗೆ ಸೇರಿದ ಪಿಜಿ ಇದಾಗಿದ್ದು, ಲಿಂಗರಾಜು ಎಂಬವರಿಗೆ ಲೀಸ್ಗೆ ನೀಡಿದ್ದರು. ಈ ಕಟ್ಟಡ 18 ಕೊಠಡಿಗಳನ್ನು ಒಳಗೊಂಡಿದ್ದು, 10ಕ್ಕೂ ಹೆಚ್ಚು ಅನ್ಯರಾಜ್ಯದವರು ವಾಸವಾಗಿದ್ದರು. ಉತ್ತರ ಭಾರತದ ಕಾರ್ಮಿಕರು ಈ ಪಿಜಿಯಲ್ಲಿ ವಾಸಿಸುತ್ತಿದ್ದರು. ಇಂದು...






