Monday, September 14, 2026
ದೆಹಲಿಸುದ್ದಿ

ಹಾಕಿ ಇಂಡಿಯಾದ ಹೊಸ ಜೆರ್ಸಿಗೆ ಟೀಕೆ – ನೀಲಿ ಬದಲು ಕೇಸರಿ ಬಣ್ಣಕ್ಕೆ ಹೋಗಿದ್ದು ಯಾಕೆ? – ಕಹಳೆ ನ್ಯೂಸ್

ನವದೆಹಲಿ: ಮುಂಬರುವ ಹಾಕಿ ವಿಶ್ವಕಪ್‌ಗಾಗಿ ಹಾಕಿ ಇಂಡಿಯಾ  ರಾಷ್ಟ್ರೀಯ ಪುರುಷ ಮತ್ತು ಮಹಿಳಾ ತಂಡಗಳ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ಬಾರಿ ತಂಡದ ಸಾಂಪ್ರದಾಯಿಕ ನೀಲಿ ಬಣ್ಣವನ್ನು ಬದಲಾಯಿಸಿ ಕೇಸರಿ ಬಣ್ಣದ ಜೆರ್ಸಿಯನ್ನು ಪರಿಚಯಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಜಾಹೀರಾತು

ಕೇಸರಿ ಬಣ್ಣದ ಜೊತೆಗೆ ಭಾರತೀಯ ತಂಡಗಳು ಇದೇ ಹೊಸ ವಿನ್ಯಾಸವನ್ನು ಹೊಂದಿರುವ ಬಿಳಿ ಬಣ್ಣದ ಜೆರ್ಸಿಗಳನ್ನು ಸಹ ತಮ್ಮ ಕಿಟ್‌ನಲ್ಲಿ ಹೊಂದಿರಲಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪುರುಷರ ವಿಶ್ವಕಪ್ ಪಂದ್ಯಾವಳಿಯು ಆಗಸ್ಟ್ 14 ರಿಂದ 30 ರವರೆಗೆ ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ನಡೆಯಲಿದ್ದರೆ, ಮಹಿಳೆಯರ ಸ್ಪರ್ಧೆಯು ಆಗಸ್ಟ್ 15 ರಿಂದ 30 ರವರೆಗೆ ನಡೆಯಲಿದೆ.

ಜೆರ್ಸಿಯ ಬಣ್ಣ ಬದಲಾವಣೆ ಮಾಡಿದ್ದಕ್ಕೆ ಭಾರತ ಹಾಕಿ ತಂಡದ ಮಾಜಿ ನಾಯಕ ವೀರೇನ್ ರಸ್ಕಿನ್ಹಾ ಅಸಮಾಧಾನ ಹೊರಹಾಕಿದ್ದಾರೆ. ಭಾರತೀಯ ಹಾಕಿ ತಂಡದ ಗುರುತು ಮತ್ತು ಪರಂಪರೆಯು ಯಾವಾಗಲೂ ‘ನೀಲಿ’ ಬಣ್ಣದೊಂದಿಗೆ ಬೆಸೆದುಕೊಂಡಿದೆ ಎಂದು ಅವರು ನೆನಪಿಸಿದ್ದಾರೆ.

ಸಾಮಾಜಿಕ ಜಾಲತಾಣ ‘X’ ನಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ವೀರೇನ್, ಹಾಕಿ ಇಂಡಿಯಾ ಭಾರತೀಯ ಹಾಕಿಗಾಗಿ ಹಲವು ಉತ್ತಮ ಕೆಲಸಗಳನ್ನು ಮಾಡಿದೆ. ಆದರೆ ಈ ನಿರ್ಧಾರ ಮುಜುಗರ ತಂದಿದೆ. ಭಾರತ ತಂಡದ ಪರಂಪರೆ ಮತ್ತು ಗುರುತು ಯಾವಾಗಲೂ ನೀಲಿ ಬಣ್ಣವೇ ಆಗಿದೆ. ನಾನು ವರ್ಷಗಳ ಕಾಲ ನೀಲಿ ಜೆರ್ಸಿಯನ್ನು ಹೆಮ್ಮೆಯಿಂದ ಧರಿಸಿದ್ದೇನೆ. ಅಭಿಮಾನಿಗಳು ಸಹ ನಮ್ಮ ತಂಡವನ್ನು ನೀಲಿ ಬಣ್ಣದಲ್ಲೇ ನೋಡಲು ಬಯಸುತ್ತಾರೆ. ಇದ್ದಕ್ಕಿದ್ದಂತೆ ಕೇಸರಿ ಬಣ್ಣಕ್ಕೆ ಬದಲಾಯಿಸಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ಹಾಕಿ ಇಂಡಿಯಾ ಹೇಳಿದ್ದೇನು?
ತಂಡದ ಸಿಬ್ಬಂದಿ ಮತ್ತು ಆಟಗಾರರ ಶಿಫಾರಸುಗಳು ಹಾಗೂ ಅವರೊಂದಿಗಿನ ವಿವರವಾದ ಸಮಾಲೋಚನೆಯ ಆಧಾರದ ಮೇಲೆ ಸಮವಸ್ತ್ರದ ಬಣ್ಣವನ್ನು ಬದಲಾಯಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ತಾಂತ್ರಿಕ ಕಾರಣವೇ ಈ ನಿರ್ಧಾರಕ್ಕೆ ಪ್ರಮುಖ ಆದ್ಯತೆಯಾಗಿದೆ. ಪ್ರಸ್ತುತ ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳ ಮೈದಾನಗಳು (ಟರ್ಫ್) ನೀಲಿ ಬಣ್ಣದಲ್ಲೇ ಇರುವುದರಿಂದ, ನಮ್ಮ ನೀಲಿ ಬಣ್ಣದ ಸಮವಸ್ತ್ರವು ಮೈದಾನದ ಬಣ್ಣದೊಂದಿಗೆ ಬೆರೆತುಹೋಗುತ್ತಿರುವುದು ಗಮನಕ್ಕೆ ಬಂದಿತ್ತು. ಈ ದೃಶ್ಯ ಸಾಮ್ಯತೆಯು ಮೈದಾನದಲ್ಲಿ ಆಟಗಾರರ ಸ್ಪಷ್ಟತೆ ಮತ್ತು ಗೋಚರತೆಯ ಮೇಲೆ ಪರಿಣಾಮ ಬೀರುತ್ತಿತ್ತು.

ಮೇಲಿನ ಕಾರಣಗಳನ್ನು ಪರಿಗಣಿಸಿ ಕೋಚ್‌ಗಳು ಮತ್ತು ಆಟಗಾರರು ಹಳದಿ ಅಥವಾ ಕೇಸರಿಯಂತಹ ಪರ್ಯಾಯ ಬಣ್ಣಗಳನ್ನು ಸೂಚಿಸಿದರು. ಸುದೀರ್ಘ ಪರಿಶೀಲನೆಯ ನಂತರ ಕೇಸರಿ ಬಣ್ಣವನ್ನು ಅಂತಿಮಗೊಳಿಸಲಾಯಿತು. ತಾಂತ್ರಿಕ ಅಗತ್ಯವನ್ನು ಪೂರೈಸುವುದರ ಜೊತೆಗೆ ಕೇಸರಿ ಬಣ್ಣವು ನಮ್ಮ ರಾಷ್ಟ್ರಧ್ವಜದ ಪ್ರಮುಖ ಬಣ್ಣಗಳಲ್ಲಿ ಒಂದಾಗಿದ್ದು, ಧೈರ್ಯ, ತ್ಯಾಗ ಮತ್ತು ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಹಾಕಿ ಇಂಡಿಯಾ ತನ್ನ ಜೆರ್ಸಿ ಬದಲಾವಣೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.