Monday, September 14, 2026
ಬೆಂಗಳೂರುರಾಜ್ಯಸುದ್ದಿ

ಸೋಷಿಯಲ್ ಮೀಡಿಯಾ ಕಿರುಕುಳಕ್ಕೆ ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರಿದ ಐಶ್ವರ್ಯಾ ಸಿಂಧೋಗಿ -ಕಹಳೆ ನ್ಯೂಸ್

ನಟಿಯರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕಿರುಕುಳ ನೀಡುವ ಘಟನೆಗಳು ಒಂದರ ಹಿಂದೆ ಒಂದರಂತೆ ಬೆಳಕಿಗೆ ಬರುತ್ತಿವೆ. ಇದೀಗ ಸೀರಿಯಲ್ ನಟಿ ಹಾಗೂ ಬಿಗ್‌ಬಾಸ್  ಖ್ಯಾತಿಯ ಐಶ್ವರ್ಯಾ ಸಿಂಧೋಗಿ ಕೂಡ ಅಪರಿಚಿತ ವ್ಯಕ್ತಿಯಿಂದ ನಿರಂತರ ಕಿರುಕುಳವಾಗುತ್ತಿದೆ ಎಂದು ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜಾಹೀರಾತು

ಕಳೆದ ಎರಡು ತಿಂಗಳಿಂದ ಫೇಕ್‌ ಅಕೌಂಟ್‌ಗಳ ಮೂಲಕ ಅವಹೇಳನಕಾರಿ ಕಾಮೆಂಟ್‌, ಮಾನಹಾನಿಯಾಗುವಂತಹ ಮೆಸೇಜ್‌ಗಳು ಮತ್ತು ನಿಂದನಾತ್ಮಕ ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ ಎಂದು ಐಶ್ವರ್ಯಾ ದೂರಿನಲ್ಲಿ ಆರೋಪಿಸಿದ್ದಾರೆ. ಇದರಿಂದ ತಮ್ಮ ಗೌರವಕ್ಕೆ ಧಕ್ಕೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೂ ಮೊದಲು 2022ರಲ್ಲೂ ಇದೇ ರೀತಿಯ ಕಿರುಕುಳ ಎದುರಿಸಿದ್ದಾಗಿ ಐಶ್ವರ್ಯಾ ಹೇಳಿದ್ದಾರೆ. ಆಗಲೂ ಕರೆ ಮಾಡುವುದು, ಹಿಂಬಾಲಿಸುವುದು ಸೇರಿದಂತೆ ಹಲವು ರೀತಿಯಲ್ಲಿ ತೊಂದರೆ ನೀಡಲಾಗಿತ್ತು. ಆ ಪ್ರಕರಣದಲ್ಲೂ ಸಂಜಯನಗರ ಠಾಣೆಗೆ ದೂರು ದಾಖಲಾಗಿತ್ತು ಎನ್ನಲಾಗಿದೆ.