
ಪುತ್ತೂರು: ಇತಿಹಾಸದ ಅಧ್ಯಯನ ಮತ್ತು ಪ್ರಾಚೀನ ವಸ್ತುಗಳನ್ನು ಬಳಕೆಯ ಹಿನ್ನೆಲೆಯನ್ನು ತಿಳಿಯಲು ಹೆರಿಟೇಜ್ ಕ್ಲಬ್ ಸಹಕಾರಿ. ಕರ್ನಾಟಕದಲ್ಲಿ ದೊರೆತ ಅನೇಕ ಶಾಸನಗಳು ಅಥವಾ ಐತಿಹಾಸಿಕ ಹಿನ್ನೆಲೆಗಳಿರುವ ಹಂಪಿ, ಬೇಲೂರು ಪಟ್ಟದಕಲ್ಲುಗಳಂತಹ ಸ್ಥಳಗಳನ್ನು ಗಮನಿಸಿದಾಗ ಇದು ಅರಿವಾಗುತ್ತದೆ. ಕರ್ನಾಟಕದಲ್ಲಿ ಪಾರಂಪರಿಕ ಜ್ಞಾನವಿದೆ. ಅದರೊಂದಿಗೆ ಇನ್ನಷ್ಟು ಸಂಶೋಧನಾತ್ಮಕತೆಯ ಅಗತ್ಯತೆಯೂ ಇವೆ ಎಂದು ಸಂಗ್ರಹಾಲಯ ಮತ್ತು ಹೆರಿಟೇಜ್ ಇಲಾಖೆಯ ಪುರಾತತ್ವ ವಿಭಾಗ ನಿರ್ದೇಶಕ ಡಾ.ಆರ್.ಶೇಜೇಶ್ವರ
ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ ಪುತ್ತೂರು ಇಲ್ಲಿನ ಇತಿಹಾಸ ವಿಭಾಗ ಮತ್ತು ಹೇರಿಟೇಜ್ ಕ್ಲಬ್‌ನ ಸಹಯೋಗದಲ್ಲಿ ನಡೆದ 2026-27ನೇ ಶೈಕ್ಷಣಿಕ ವರ್ಷದ ಹೆರಿಟೇಜ್ ಕ್ಲಬ್‌ನ ಉದ್ಘಾಟನೆ ಹಾಗೂ ಇತಿಹಾಸ ರಚನೆಯಲ್ಲಿ ಪ್ರಾಚ್ಯಾವಶೇಷಗಳ ಪಾತ್ರ ವಿಷಯದ ಕುರಿತು ವಿಶೇಷ ಕಾರ್ಯಗಾವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ ಎನ್. ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಗಳನ್ನಾಡುತ್ತಾ, ಇತಿಹಾಸದ ಕುರಿತು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಸ್ಫೂರ್ತಿದಾಯಕವಾಗಿದ್ದು, ಇವರು ಸಮಾಜವನ್ನು ನಡೆಸುವವರಾಗಿದ್ದಾರೆ ಆದ್ದರಿಂದ ಸೃಜನತ್ಮಾಕ ಯೋಚನೆ ಮಾಡುತ್ತಾ ಮುಂದಿನ ಗುರಿಯತ್ತ ಗಮನಹರಿಸಬೇಕು ಹಾಗೂ ರಾಷ್ಟç ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದು ಹೇಳಿದರು.
ಪ್ರತಿಭೆಗಳು ಹುಟ್ಟುತ್ತಲೇ ಬರುವುದಿಲ್ಲ. ಕೆಲವನ್ನು ಕೇಳಿ, ಇನ್ನು ಕೆಲವನ್ನು ನೋಡಿ ಆರಿತುಕೊಂಡಾಗ ಮಾತ್ರ ಪ್ರತಿಭೆಗಳು ಹುಟ್ಟಲು ಸಾಧ್ಯ ಎಂದು ಕಾಲೇಜು ಪ್ರಾಂಶುಪಾಲ ಪ್ರೊ ಶ್ರೀಕೃಷ್ಣ ಗಣರಾಜ ಭಟ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಹೆರಿಟೇಜ್ ಕ್ಲಬ್ ಸಂಯೋಜಕ ಡಾ.ಪ್ರಮೋದ್ ಎಮ್. ಜಿ ಪ್ರಾಸ್ತವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಸುಕುಮಾರ್ ರಾವ್ ಎನ್.ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಹಾಗೂ ಹೆರಿಟೇಜ್ ಕ್ಲಬ್‌ನ ಉಪಾಧ್ಯಕ್ಷೆ ಸೌಮ್ಯ ಸ್ವಾಗತಿಸಿ, ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ಹೆರಿಟೇಜ್ ಕ್ಲಬ್‌ನ ಅಧ್ಯಕ್ಷ ಚಂದನ್ ವಂದಿಸಿ, ಕಲಾ ವಿಭಾಗದ ವಿದ್ಯಾರ್ಥಿನಿ ಕೆ. ಕೃತಿಕಾ ನಿರೂಪಿಸಿದರು.











