Tuesday, August 11, 2026
ಸುದ್ದಿ

ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ನಾಟಾ  ಕೋಚಿಂಗ್ ತರಗತಿಗೆ ಚಾಲನೆ- ಕಹಳೆ ನ್ಯೂಸ್

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ  ನಾಟಾ ಕೋಚಿಂಗ್ ತರಗತಿಯ ಉದ್ಘಾಟನೆ ನಡೆಯಿತು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀಮತಿ ರಾಜಶ್ರೀ ಎಸ್. ನಟ್ಟೋಜ ತರಗತಿಗಳಿಗೆ ಚಾಲನೆ ನೀಡಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿಕೊಂಡು, ಅದನ್ನು ಸಾಧಿಸಲು ಅಗತ್ಯವಿರುವ ಹಂತಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ಒಂದು ನೀಲ ನಕ್ಷೆ ಸಿದ್ಧಪಡಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಸಮಯದ ಸದುಪಯೋಗ ಅತ್ಯಂತ ಮುಖ್ಯವಾದ ವಿಚಾರ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಆಸಕ್ತಿಯನ್ನು ಸ್ಪಷ್ಟವಾಗಿ ಗುರುತಿಸಿಕೊಂಡು ಭವಿಷ್ಯದ ಶಿಕ್ಷಣ ಹಾಗೂ
ವೃತ್ತಿಜೀವನದ ಬಗ್ಗೆ ಯಥಾಶೀಘ್ರ ಯೋಜನೆ ರೂಪಿಸಿಕೊಳ್ಳಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಕಲಾ ವಿಷನ್ ಡಿಸೈನ್ ಆಪ್ಟಿಟ್ಯೂಡ್ ಸ್ಟಡಿ ಸೆಂಟರ್‌ನ ನಿರ್ದೇಶಕ ಸುನಿಲ್ ಅಬ್ರಹಾಂ ಭಾಗವಹಿಸಿ ವಿದ್ಯಾರ್ಥಿಗಳಿಗೆ
ಮಾರ್ಗದರ್ಶನ ನೀಡಿದರು. ನಾಟಾ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಮಯ ನಿರ್ವಹಣೆ, ನಿರಂತರ ಅಭ್ಯಾಸ ಹಾಗೂ ಮೂಲಭೂತ ವಿನ್ಯಾಸ ಕೌಶಲ್ಯಗಳ ಅಭಿವೃದ್ಧಿ ಅತ್ಯಂತ
ಅಗತ್ಯವಾಗಿದೆ ಎಂದರಲ್ಲದೆ ತಾಂತ್ರಿಕ ರೇಖಾಚಿತ್ರ, ದೃಶ್ಯ ಕಲ್ಪನೆ, ರೂಪ-ರಚನೆ, ಅನುಪಾತ, ವೀಕ್ಷಣಾ ಕೌಶಲ್ಯ ಮತ್ತು ಕಲಾತ್ಮಕ ಅಭಿವ್ಯಕ್ತಿಯಂತಹ ವಿವಿಧ ಅಂಶಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ವಿವರಿಸಿದರು. ಪರೀಕ್ಷೆಯ ಸ್ವರೂಪ ಹಾಗೂ ಅದರಲ್ಲಿನ ಪ್ರಶ್ನೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ವಿಧಾನಗಳ ಬಗ್ಗೆಯೂ ಮಾರ್ಗದರ್ಶನ ನೀಡಿದರು.
ನಾಟಾ ಪರೀಕ್ಷೆಯ ದೃಷ್ಟಿಯಿಂದ ಪ್ರಸ್ತುತ ಮಾಹಿತಿಗಳ ಅರಿವು, ಕ್ರಿಟಿಕಲ್ ಥಿಂಕಿAಗ್, ಸರಿಯಾದ ಮಾರ್ಗದ ಆಯ್ಕೆ, ತಾಂತ್ರಿಕ, ವಾಸ್ತುಶಿಲ್ಪ ಹಾಗೂ ಕಲಾತ್ಮಕ ಚಿತ್ರಕಲೆಯ ಕುರಿತು ಅವರು ಉಪಯುಕ್ತ ಮಾಹಿತಿಗಳನ್ನು ಹಂಚಿಕೊAಡರು. ವೇದಿಕೆಯಲ್ಲಿ ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ ಎಸ್, ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕುಮಾರಿ ಮನ್ವಿತಾ ಎಂ. ಕಾರ್ಯಕ್ರಮ ನಿರೂಪಿಸಿದರು. ಧನ್ಯಶ್ರೀ ಹಾಗೂ ಥಾನ್ಯ ಕೆ. ಗೋಳ್ವರ್ಕರ್ ಪ್ರಾರ್ಥಿಸಿ, ಸ್ವಾಗತಿಸಿದರು. ವಿದ್ಯಾರ್ಥಿನಿ ಹಿತೈಷಿಣಿ ಎಸ್. ವಂದನಾರ್ಪಣೆ ಸಲ್ಲಿಸಿದರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು