Tuesday, August 11, 2026
ಸುದ್ದಿ

ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಭವಿಷ್ ಘಟಕದ ಉದ್ಘಾಟನಾ ಕಾರ್ಯಕ್ರಮ- ಕಹಳೆ ನ್ಯೂಸ್

ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಭವಿಷ್ ಘಟಕದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಭವಿಷ್ಯದಲ್ಲಿ ಶಿಕ್ಷಕ ವೃತ್ತಿಯನ್ನು ಆರಿಸಿಕೊಳ್ಳಲು ಆಸಕ್ತಿ ಹೊಂದಿರುವ ಪದವಿ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗಾಗಿ ಈ ಘಟಕವನ್ನು ಆಯೋಜಿಸಲಾಗಿದೆ. ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಎಲ್ಲಾ ಕಡೆಗಳಲ್ಲೂ, ಎಲ್ಲಾ ಸಮಯಗಳಲ್ಲೂ ಗೌರವವನ್ನು ಪಡೆಯುವ ಅತಿಶ್ರೇಷ್ಠವಾದ ವೃತ್ತಿಯೇ ಶಿಕ್ಷಕ ವೃತ್ತಿ ಎಂದರು.  ಶಿಕ್ಷಕಿಯಾಗಿದ್ದ, ಪ್ರಸ್ತುತ ಸುರತ್ಕಲ್‍ನ ಅರಳು ಆಪ್ತ ಸಮಾಲೋಚನಾ ಕೇಂದ್ರದ ಖ್ಯಾತ ಆಪ್ತ ಸಮಾಲೋಚಕಿ  ಶ್ರೀಮತಿ ತೇಜಾಕ್ಷಿ ವಿ ಶೆಟ್ಟಿ ಇವರು  ಭವಿಷ್ ಘಟಕವನ್ನು ಗ್ರಂಥಪೂಜನ ಮಾಡುವ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನಾಡುತ್ತಾ ಶಿಕ್ಷಕ ವೃತ್ತಿಯ ಶ್ರೇಷ್ಠತೆ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಿದರು. ಶಿಕ್ಷಕರು ಮುಖ್ಯವಾಗಿ ಪ್ರೀತಿಸಬೇಕಾದ ಸರ್ವಿಸ್, ಸಬ್ಜೆಕ್ಟ್, ಸ್ಕೂಲ್ ಹಾಗೂ ಸ್ಟುಡೆಂಟ್ ಗಳೆಂಬ  ಗಳ ಬಗ್ಗೆ ತಿಳಿಸಿದರು. ಹಾಗೂ ಶಿಕ್ಷಕ ವೃತ್ತಿಯ ಮುಖ್ಯ ಉದ್ದೇಶವೇ ವಿದ್ಯಾರ್ಥಿಗಳಲ್ಲಿ ಉತ್ತಮ ಪರಿವರ್ತನೆಯನ್ನು ತರುವ ಮೂಲಕ ದೇಶವನ್ನು ವಿಶ್ವಗುರು ಮಾಡುವ ನಿಟ್ಟಿನಲ್ಲಿ ಪ್ರಯತ್ನ ಪಡುವುದು ಎಂದರು. ಪದವಿ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರಕಟ್ಟೆ ಹಾಗೂ ಭವಿಷ್ ನಿರ್ದೇಶಕಿ ಶ್ರೀಮತಿ ಆಶಾಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಶಾಲತಾ ಪ್ರಾಸ್ತಾವಿಕ ಮಾತನಾಡಿದರು. ಭವಿಷ್ ಸಹ ನಿರ್ದೇಶಕಿ ಶ್ರೀಮತಿ ಬಬಿತಾ ಸ್ವಾಗತಿಸಿ, ಸಂಸ್ಕೃತ ಉಪನ್ಯಾಸಕಿ ಶ್ರೀಮತಿ ಪ್ರಸನ್ನಾ ವಂದಿಸಿ ಬಿಎ ವಿದ್ಯಾರ್ಥಿನಿ ಕು. ಸ್ತುತಿ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು