Tuesday, August 11, 2026
ಸುದ್ದಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬರಿಮಾರು ನಲ್ಲಿ ಆಟಿಡೊಂಜಿ ದಿನದ ಕಾರ್ಯಕ್ರಮ- ಕಹಳೆ ನ್ಯೂಸ್

ಕಲ್ಲಡ್ಕ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬರಿಮಾರು ಇಲ್ಲಿ ಹಿರಿಯರಾದ ಚನ್ನಪ್ಪ ಸಪಲ್ಯ ರವರ ಅಧ್ಯಕ್ಷತೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಜರಗಿತು.

ಜಾಹೀರಾತು

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಔಷದ ಗಿಡಗಳ ಪರಿಚಯ, ತುಳು ಒಗಟು, ಆಟಿ ದಿನದ ಮಹತ್ವದ ಬಗ್ಗೆ ಹಾಗೂ ಆಟಿಡೊಂಜಿ ದಿನದ ನೃತ್ಯ ಪ್ರದರ್ಶಿಸಿದರು. ಕೇಶವ ಆಳ್ವ, ಹಾಗೂ ರಮೇಶ್ ಸಾಲಿಯಾನ್ ಆಟಿಡೊಂಜಿ ದಿನದ ವಿಶೇಷತೆ ಹಾಗೂ ತುಳುನಾಡಿನಲ್ಲಿರುವ ಹಿಂದೆ ಬಳಕೆಯಾಗುತ್ತಿದ್ದ ವಸ್ತುಗಳನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಶ್ರೀ ಸುವರ್ಣ ನಾಗ ಟೆಂಪಲ್ ಮುಂಬೈ ಇದರ ಸಹಕಾರದಿಂದ ಮೇಲ್ವಿಚಾರಕರಾದ ಪುರಂದರ ಗಾಣದಪಾಲು ಬರಿಮಾರು ಇವರು ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಿದ ಸಮವಸ್ತ್ರವನ್ನು ವಸಂತಿ ಹಾಗೂ ಅವರ ಸಹೋದರರಾದ ಪುರುಷೋತ್ತಮ ರವರು ಮಕ್ಕಳಿಗೆ ಹಸ್ತಾಂತರಿಸಿದರು ಆಟಿ ತಿಂಗಳಲ್ಲಿ ಬಳಸುವ ವಿವಿಧ ಆಹಾರ ಖಾದ್ಯಗಳನ್ನು ಆಗಮಿಸಿದ ಎಲ್ಲರಿಗೂ ಸಹ ಭೋಜನದ ಮೂಲಕ ನೀಡಲಾಯಿತು .
ಸಮಿತಿಯ ಅಧ್ಯಕ್ಷರಾದ ರೋಹಿಣಿ, ಉಪಾಧ್ಯಕ್ಷರಾದ ಕೇಶವ ಆಳ್ವ, ಸದಸ್ಯರುಗಳಾದ ಚೈತ್ರ, ಸುನೀತಾ, ಮಮತಾ, ಲಾವಣ್ಯ,ರಂಮ್ಲತ್, ಅಶೋಕ್, ರಮೇಶ್, ವಿದ್ಯಾ ವರ್ಧಕ ಸಂಘದ ಸದಸ್ಯರಾದ ವಾಸಪ್ಪ ಮೂಲ್ಯ, ದಾನಿಗಳಾದ ವಸಂತಿ ಹಾಗೂ ಪುರುಷೋತ್ತಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಾಲಾ ಮುಖ್ಯ ಶಿಕ್ಷಕ ಉದಯಕುಮಾರ್ ಸ್ವಾಗತಿಸಿದರು,ಶಿಕ್ಷಕಿ ವಿಜೇತ ವಂದಿಸಿದರು. ಶಿಕ್ಷಕಿ ಶಶಿಕಲಾ ಕಾರ್ಯಕ್ರಮದ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು