Tuesday, August 11, 2026
ಸುದ್ದಿ

ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಟಿ ಸಿರಿ ಸಂಭ್ರಮ – 2026  : ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಸಾಂಪ್ರದಾಯಿಕ ಆಟಗಳೊಂದಿಗೆ ಸಂಭ್ರಮಿಸಿದ ಮಾಣಿ ಯುವವಾಹಿನಿ ಘಟಕ- ಕಹಳೆ ನ್ಯೂಸ್

ಮಾಣಿ : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಜಾನಕಿ ದರ್ಖಾ ಸು ಪೆರ್ನೆ ಅವರ ಮನೆಯಲ್ಲಿ ಆಯೋಜಿಸಲಾದ “ಆಟಿ ಸಿರಿ ಸಂಭ್ರಮ – 2026” ಕಾರ್ಯಕ್ರಮವು ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಸಾಂಪ್ರದಾಯಿಕ ಆಟಗಳ ಸೊಗಡಿನೊಂದಿಗೆ ಅತ್ಯಂತ ಸಂಭ್ರಮದಿಂದ ನಡೆಯಿತು.
ಬೆಳಗಿನ ಉದ್ಘಾಟನಾ ಸಮಾರಂಭವನ್ನು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪೆರ್ನೆ–ಬಿಳಿಯೂರು ಇದರ ಮಾಜಿ ಅಧ್ಯಕ್ಷರಾದ ಚಂದಪ್ಪ ಪೂಜಾರಿ ಅವರು ಉದ್ಘಾಟಿಸಿ ಮಾತನಾಡಿ “ಆಟಿ ತಿಂಗಳು ತುಳುನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕ. ಹಿಂದಿನ ಕಾಲದ ಆಟಿ ಆಚರಣೆ, ಆಹಾರ ಪದ್ಧತಿ ಹಾಗೂ ಸಾಂಪ್ರದಾಯಿಕ ಆಟಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಯುವವಾಹಿನಿ ಮಾಣಿ ಘಟಕದ ‘ಆಟಿ ಸಿರಿ ಸಂಭ್ರಮ’ ಅರ್ಥಪೂರ್ಣ ಕಾರ್ಯಕ್ರಮವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಪೂಜಾರಿ ಕೊಡಾಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಾನಕಿ ದರ್ಕಾಸು ಪೆರ್ನೆ, ನವೀನ್ ಕುಮಾರ್ ಪದಬರಿ ಹಾಗೂ ಉಮೇಶ್ ಬಾಕಿಮಾರು ಉಪಸ್ಥಿತರಿದ್ದರು.
ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಸ್ವಾಗತಿಸಿದರು. ಕುಮಾರಿ ಸ್ವಾತಿ ವಂದಿಸಿದರು.

ಜಾಹೀರಾತು

ಉದ್ಘಾಟನಾ ಸಮಾರಂಭದ ಬಳಿಕ ಆಟಿ ಕೂಟದ ಸ್ಪರ್ಧೋತ್ಸವ ನಡೆಯಿತು. ಚೆನ್ನಮನೆ ಆಟ, ತೆಂಗಿನಕಾಯಿ ಕುಟ್ಟುವ ಸ್ಪರ್ಧೆ, ನಿಧಿ ಶೋಧ, ಅಡುಗೆ ತಯಾರಿಕೆ, ಮಕ್ಕಳ ವಿವಿಧ ಆಟಗಳು ಹಿಡಿಸುಡಿ ತಟ್ಟಿ ಹೆಣೆಯುವುದು ನಿಧಿ ಶೋಧ ರೀಲ್ಸ್ ಸ್ಪರ್ಧೆ ಮಾಜಿ ಅಧ್ಯಕ್ಷರಿಗೆ ವಿಭಿನ್ನ ಸ್ಪರ್ಧೆ ಹೀಗೆ ಹಲವು ಸಾಂಪ್ರದಾಯಿಕ ಮತ್ತು ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಊರಿನ ಹಿರಿಯರು, ಯುವಕರು, ಮಕ್ಕಳು ಹಾಗೂ ಯುವವಾಹಿನಿಯ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡರು. ಗೆಲುವಿಗಿಂತಲೂ ಎಲ್ಲರೂ ಒಂದಾಗಿ ಸೇರಿ ಭಾಗವಹಿಸಿ ಸಂಭ್ರಮಿಸುವುದೇ ಈ ಆಟಿ ಕೂಟದ ವಿಶೇಷತೆಯಾಗಿತ್ತು.
ಸಾಂಪ್ರದಾಯಿಕ ಆಟಗಳ ಮೂಲಕ ಹಿರಿಯರು ತಮ್ಮ ಬಾಲ್ಯದ ಸವಿನೆನಪುಗಳನ್ನು ಮೆಲುಕು ಹಾಕಿದರೆ, ಮಕ್ಕಳು ಮತ್ತು ಯುವಕರು ಹಿಂದಿನ ಕಾಲದ ಆಟಗಳ ಪರಿಚಯ ಪಡೆದುಕೊಂಡರು. ಹಿರಿಯರ ನೆನಪು ಮತ್ತು ಯುವ ಪೀಳಿಗೆಯ ಉತ್ಸಾಹದೊಂದಿಗೆ ಆಟಿ ಕೂಟವು ಸಂಭ್ರಮದಿಂದ ನಡೆಯಿತು.ಸಮಾರೋಪ ಸಮಾರಂಭದಲ್ಲಿ ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ತನಿಯಪ್ಪ ಪೂಜಾರಿ ಅವರು “ಆಟಿ ಸೊಗಡು – ಮಾತಿನ ಸೊಗಡು” ಕಾರ್ಯಕ್ರಮದಲ್ಲಿ ಮಾತನಾಡಿ ಆಟಿ ತಿಂಗಳು ಹಿಂದಿನ ತಲೆಮಾರಿನ ಬದುಕಿನ ಅವಿಭಾಜ್ಯ ಭಾಗವಾಗಿದ್ದು, ಅಂದಿನ ಸರಳ ಜೀವನಶೈಲಿ, ಸ್ಥಳೀಯ ಆಹಾರ ಪದ್ಧತಿ ಹಾಗೂ ಸಾಂಪ್ರದಾಯಿಕ ಆಟಗಳು ಇಂದಿಗೂ ಸ್ಮರಣೀಯವಾಗಿವೆ. ಇಂತಹ ಕಾರ್ಯಕ್ರಮಗಳ ಮೂಲಕ ಆ ದಿನಗಳ ನೆನಪುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಆತಿಥ್ಯ ನೀಡಿ ಸಹಕರಿಸಿದ ಜಾನಕಿ ದರ್ಕಾಸು ಪೆರ್ನೆ ಅವರನ್ನು ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ಸ್ಪರ್ಧೋತ್ಸವದ ಬಳಿಕ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಪೂಜಾರಿ ಕೊಡಾಜೆ ವಹಿಸಿದ್ದರು.
ಕೇಶವ ಪೂಜಾರಿ ಸುಣ್ಣಾನ ನಾರಾಯಣ ಸಾಲ್ಯಾನ್ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪುಮಮಣಿ ಯುವ ವಾಹಿನಿ ಘಟಕದ ಸಲಹೆಗಾರರಾದ ಲೋಕನಾಥ ತಿಮ್ಮರಾಜೆ ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಸಂಚಾಲಕರಾದ ವಿಕ್ರಂ ಬಿಳಿಯೂರು ಹಾಗೂ ಶುಭಾ ಪೆರ್ನೆ ಅಮಿತಾ ಪರ್ನೆ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯದರ್ಶಿ ಶವಿಶ್ವನಾಥ ಪೂಜಾರಿ ವಂದಿಸಿದರು,ರಾಜೇಶ್ ಪಲ್ಯ ಪ್ರಜ್ಞಾ ಭವಿಷ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

ತುಳುನಾಡಿನ ಆಟಿ ಸಂಸ್ಕೃತಿಯ ಸೊಗಡು, ಹಿರಿಯರ ಸವಿನೆನಪು, ಯುವಕರ ಉತ್ಸಾಹ ಮತ್ತು ಮಕ್ಕಳ ಸಂಭ್ರಮವನ್ನು ಒಂದೇ ವೇದಿಕೆಯಲ್ಲಿ ಕಟ್ಟಿಕೊಟ್ಟ “ಆಟಿ ಸಿರಿ ಸಂಭ್ರಮ – 2026” ಮಾಣಿ ಯುವವಾಹಿನಿ ಘಟಕದ ಒಗ್ಗಟ್ಟು ಮತ್ತು ಸಂಘಟನಾ ಶಕ್ತಿಗೆ ಸಾಕ್ಷಿಯಾಯಿತು.