Tuesday, August 11, 2026
ಸುದ್ದಿ

ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ತ್ರಿಶಾ ಸಂಸ್ಥೆ ಸದಾ ಬೆನ್ನೆಲುಬು: ಸಿ.ಎ. ಗೋಪಾಲಕೃಷ್ಣ ಭಟ್- ಕಹಳೆ ನ್ಯೂಸ್

ಕಟಪಾಡಿ: “ಭವಿಷ್ಯದ ಕನಸುಗಳ ಹಸಿವು ಮತ್ತು ಬಾಯಾರಿಕೆಯೊಂದಿಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ತ್ರಿಶಾ ಸಮೂಹ ಶಿಕ್ಷಣ ಸಂಸ್ಥೆಯು ಬೆನ್ನೆಲುಬಾಗಿ ನಿಲ್ಲುತ್ತದೆ” ಎಂದು ತ್ರಿಶಾ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ಸಿ.ಎ. ಗೋಪಾಲಕೃಷ್ಣ ಭಟ್ ಹೇಳಿದರು.

ಜಾಹೀರಾತು

ಕಟಪಾಡಿಯ ಶ್ರೀ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತ್ರಿಶಾ ಸಮೂಹ ಶಿಕ್ಷಣ ಸಂಸ್ಥೆಯ 28ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

“ರಸ್ತೆ, ವಿದ್ಯುತ್ ಸೌಲಭ್ಯಗಳಿಲ್ಲದ ಹಳ್ಳಿಯ ಕೃಷಿಕನ ಮನೆಯಲ್ಲಿ, ಯಾವುದೇ ದೊಡ್ಡ ಹಿನ್ನೆಲೆಯೂ ಇಲ್ಲದೆ ಕೇವಲ ಐದು ವಿದ್ಯಾರ್ಥಿಗಳಿಗೆ ಪಾಠ ಪ್ರಾರಂಭಿಸಿದ ಸಂಸ್ಥೆಯು, ಇಂದು 28 ವರ್ಷಗಳಲ್ಲಿ 80 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಮಿಸಿದೆ. ಈ ಸಾರ್ಥಕ ಪಯಣದ ಹಿಂದಿರುವ ಕೀರ್ತಿ ಸಂಸ್ಥೆಯ ಒಗ್ಗಟ್ಟಿನ ‘ಟೀಮ್ ವರ್ಕ್’ಗೆ ಸಲ್ಲುತ್ತದೆ. ವಿದ್ಯಾರ್ಥಿಗಳು ಉನ್ನತ ಕನಸುಗಳೊಂದಿಗೆ ಬಂದರೆ ಸಂಸ್ಥೆಯು ಸೂಕ್ತ ಮಾರ್ಗದರ್ಶನ ನೀಡಲಿದೆ” ಎಂದು ಅವರು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿಟ್ಟೆಯ ಜಸ್ಟಿಸ್ ಕೆ. ಎಸ್. ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕರಾದ ಡಾ. ಸುಧೀರ್ ಎಂ. ಭಾಗವಹಿಸಿದ್ದರು.

**ಸಾಧಕರಿಗೆ ಸನ್ಮಾನ:**
28ನೇ ಸಂಭ್ರಮಾಚರಣೆಯ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಕೆ. ಪಿ. ರಾವ್, ಮುಕುಂದ, ಸೂರಿ ಶೆಟ್ಟಿ ಕಾಪು, ‘ನಮ್ಮ ಮನೆ ನಮ್ಮ ಮರ’ ಅಭಿಯಾನದ ಅವಿನಾಶ್ ಕಾಮತ್, ಡಾ. ಪಿ. ವಿ. ಭಂಡಾರಿ, ಸತ್ಯೇಂದ್ರ ಪೈ, ರವಿ ಮಟ್ಟು, ಯಕ್ಷಗಾನ ಕಲಾಕೇಂದ್ರದ ಮುರಳಿ ಕಡೆಕಾರ್, ಹೋಂಗಾರ್ಡ್ ಪುಷ್ಪಾ ಹಾಗೂ ಸಂಪತ್ ಶೆಟ್ಟಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಟಪಾಡಿ TVCCM ಪ್ರಾಂಶುಪಾಲರಾದ ಪ್ರೊ. ವಿಘ್ನೇಶ್ ಶೇಣೈ, TVEC ಪ್ರಾಂಶುಪಾಲರಾದ ಡಾ. ಕುಲದೀಪ್ Y. U., ತ್ರಿಷಾ ವಿದ್ಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹರಿಪ್ರಸಾದ್ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಧೀರಜ್ ಬೆಳ್ಳಾರೆ ಕಾರ್ಯಕ್ರಮವನ್ನು ನಿರೂಪಿಸಿದರು.