Recent Posts

Sunday, April 26, 2026

ಸುದ್ದಿ

ಸುದ್ದಿ

ಕುಕ್ಕೆ ಕ್ಷೇತ್ರದಲ್ಲಿ ಚಂಪಾಷಷ್ಠಿಯ ಸಂಭ್ರಮ | ಕಹಳೆ ನ್ಯೂಸ್

ಸುಳ್ಯ: ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿಯ ಸಂಭ್ರಮ ಜೋರಾಗಿದೆ. ಪಂಚಮಿಯ ಹಿನ್ನಲೆಯಲ್ಲಿ ಮಧ್ಯಾಹ್ನ ಕ್ಷೇತ್ರದಲ್ಲಿ ಎಡೆ ಮಡಸ್ನಾನ ನಡೆಯಲಿದೆ. ಮಧ್ಯಾಹ್ನ ವೇಳೆಗೆ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಬಳಿಕ ಎಡೆ ಮಡಸ್ನಾನ ನಡೆಯಿತು. ಇನ್ನೂರಕ್ಕಿಂತ ಹೆಚ್ಚು ಭಕ್ತರು ಎಡೆ ಮಡಸ್ನಾನ ಸೇವೆಯಲ್ಲಿ ಪಾಲ್ಗೊಂಡರು. ದೇವರ ನೈವೇದ್ಯದಲ್ಲಿ ಭಕ್ತರು ಉರುಳು ಸೇವೆ ನಡೆಸಿದ್ದು, ಯಾವುದೇ ಗೊಂದಲವಾಗದಂತೆ ಕ್ಷೇತ್ರದ ಆಡಳಿತ ಮಂಡಳಿ ಕ್ರಮ ಕೈಗೊಂಡಿತ್ತು. ಚಂಪಾಷಷ್ಠಿಯ ಹಿನ್ನಲೆಯಲ್ಲಿ ಕುಮಾರಾಧಾರ ನದಿ ದಡದಿಂದ...
ಸುದ್ದಿ

ಅಪುಲ್ ಆಳ್ವ ಇರಾಗೆ ಯಕ್ಷಸೇನಾ ಸಾಧಕ ಪ್ರಶಸ್ತಿ

ಮಂಗಳೂರು : ಛಾಯಾಗ್ರಹಣದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕವನ್ನು ಗಳಿಸಿದ ಅಪುಲ್ ಆಳ್ವಾ ಇರಾರಿಗೆ ಯಕ್ಷಸೇನಾ ಮುಂಬಯಿ ಸಂಸ್ಥೆಯು ಕೊಡಮಾಡುವ ಯಕ್ಷಸೇನಾ ಸಾಧಕ ಪ್ರಶಸ್ತಿ ಲಭಿಸಿದೆ. ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ಯಕ್ಷಸೇನೆ ಮುಂಬಯಿ ಇದರ ಯಕ್ಷಮಹೋತ್ಸವ ೧೦೧೭ ಕಾರ್ಯಕ್ರಮವು ಡಿ.೨೫ ರಂದು ಮುಂಬಯಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕಾರ್ಯಕ್ರಮದ ವ್ಯವಸ್ಥಾಪಕರಾದ ಯುವರಾಜ್ ಶೆಟ್ಟಿ ಹೆರಂಜೆ, ವೇಣುಗೋಪಾಲ್ ಶೆಟ್ಟಿ ತಿಳಿಸಿದ್ದಾರೆ....
ಸುದ್ದಿ

ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಮನೆಗಳ ಹಸ್ತಾಂತರ | ಮೂರು ಬಡಕುಟುಂಬಗಳಿಗೆ ಬೆಳಕಾದ ಅಶೋಕ್ ರೈ

ಪುತ್ತೂರು : ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಿ.ಜೆ ಪಿ. ಮುಖಂಡ ಪುತ್ತೂರಿನ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ನೇತ್ರತ್ವದಲ್ಲಿ ಮುಂಡೂರಿನಲ್ಲಿ ನಿರ್ಮಾಣಗೊಂಡ ಮೂರು ಮನೆಗಳ ಹಸ್ತಾಂತರ ಕಾರ್ಯಕ್ರಮವು ಇಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ವಹಿಸಿದ್ದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜಿ.ಪಂ ಅದ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ತಾ.ಪಂ ಅದ್ಯಕ್ಷೆ ಭವಾನಿ ಚಿದಾನಂದ,ತಾ.ಪಂ ಸದಸ್ಯರಾದ ಶಿವರಂಜನ್ ಮೀನಾಕ್ಷಿ ಮಂಜುನಾಥ ,ಎಪಿಎಂಸಿ...
ಸುದ್ದಿ

ಐತಿಹಾಸಿಕ ಧರ್ಮ ಸಂಸದ್ ಗೆ ಸಕಲ ಸಿದ್ಧತೆ | ಉಡುಪಿಯತ್ತ ದಿಗ್ಗಜರ ಹೆಜ್ಜೆ.

ಉಡುಪಿ: ಉಡುಪಿಯ ಧರ್ಮ ಸಂಸದ್‌ ಅಧಿವೇಶನಕ್ಕಾಗಿ ಸಂತರ ಆಗಮನ ಆರಂಭವಾಗುತ್ತಿದ್ದಂತೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ವಿಶ್ವ ಹಿಂದೂ ಪರಿಷದ್‌ ನಾಯಕರ ಆಗಮನವೂ ಆರಂಭವಾಗಿದೆ. ಜೀವೇಶ್ವರ ಮಿಶ್ರಾ, ಅಶೋಕ್‌ ತಿವಾರಿ, ಕೋಟೇಶ್ವರ ಶರ್ಮ ಸೋಮವಾರವೇ ಉಡುಪಿಗೆ ಆಗಮಿಸಿ ತಯಾರಿಯ ಪರಿಶೀಲನೆ ನಡೆಸುತ್ತಿದ್ದಾರೆ. ಉತ್ತರ ಭಾರತದವರಾದ ಗುಜರಾತ್‌ನ ಅವಿಚಲಾನಂದದಾಸ್‌, ಹರಿದ್ವಾರದ ಚಿನ್ಮಯಾನಂದ ಸ್ವಾಮೀಜಿ, ರಾಮಾನಂದಾಚಾರ್ಯ, ಮಹಾರಾಷ್ಟ್ರದ ಗೋವಿಂದಗಿರಿ, ಕರ್ನಾಟಕದ ಆದಿಚುಂಚನಗಿರಿ ಮಠಾಧೀಶರು, ಶ್ರೀಶೈಲಂ ಮಠಾಧೀಶರು, ತುಮಕೂರು ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ, ಬೇಲಿ...
ಸುದ್ದಿ

ಧರ್ಮ ಸಂಸದ್ ಭಾರಿ ಬಿಗಿ ಭದ್ರತೆ | ” ಕೇಸರಿ ರಕ್ಷಕ್‌ ಪಡೆ ” ನಿರ್ವಹಿಸಲಿದೆ ಸಂಪೂರ್ಣ ಹೊಣೆ

ಉಡುಪಿ: ಧರ್ಮ ಸಂಸದ್‌ಗೆ ದೇಶದೆಲ್ಲೆಡೆಯಿಂದ ಆಗಮಿಸುವ ಸರಿಸುಮಾರು 2,000 ಸಂತರು, ಸ್ವಾಮೀಜಿಗಳ ಭದ್ರತೆಗೆ ಒಂದು ಕಡೆಯಲ್ಲಿ ಪೊಲೀಸರು ಅವರದ್ದೇ ರೀತಿಯಲ್ಲಿ ಭದ್ರತೆಯನ್ನು ಆಯೋಜಿಸಲು ರೂಪರೇಖೆ ಸಿದ್ಧಪಡಿಸಿಕೊಳ್ಳುತ್ತಿದ್ದರೆ, ಇತ್ತ ಆಯೋಜಕರು ಅವರದ್ದೇ ಆದ ರೀತಿಯಲ್ಲಿ "ಕೇಸರಿ ರಕ್ಷಕ್‌ ಪಡೆ'ಯನ್ನು ಸಿದ್ಧಗೊಳಿಸುತ್ತಿದ್ದಾರೆ. ಸಂತರು, ಸ್ವಾಮೀಜಿಗಳು ಉಳಿದುಕೊಳ್ಳುವ ವಸತಿ ಯಿಂದ ಹಿಡಿದು, ಊಟ, ಸಾರಿಗೆ, ಕಾರ್ಯಕ್ರಮ ನಡೆಯುವ ಸ್ಥಳ, ಪ್ರದರ್ಶಿನಿ, ಭೋಜನ ಶಾಲೆ ಮತ್ತು ಪಾಕಶಾಲೆಯ ಸಮೀಪದಲ್ಲಿ ಧರ್ಮ ಸಂಸದ್‌ನ ಅಧಿಕೃತ ಸ್ವಯಂಸೇವಕ ಭದ್ರತಾ...
ಸುದ್ದಿ

ಎರಡನೇ ಹಂತದ ‘ಸ್ವಚ್ಛ ಪುತ್ತೂರು’ ಅಭಿಯಾನದ ಪೂರ್ವಭಾವಿ ಸಭೆ | ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ಭಾಗಿ

ಪುತ್ತೂರು : ರಾಮಕೃಷ್ಣ ಮಿಷನ್ ಮಂಗಳೂರು ಇದರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಕಳೆದ ವರ್ಷ ಯಶಸ್ವಿಯಾಗಿ ಸ್ವಚ್ಛ ಪುತ್ತೂರು ಅಭಿನಾಯನವು ನಡೆದಿತ್ತು. ಈಗ ಎರಡನೇ ವರ್ಷದ ಸ್ವಚ್ಛ ಪುತ್ತೂರು ಅಭಿಯಾನದ ಪೂರ್ವಭಾವಿ ಸಭೆಯು ಇಂದು ಕಲ್ಲಾರೆ ರಾಘವೇಂದ್ರ ಮಠದಲ್ಲಿ ರಾಮಕೃಷ್ಣ ಮಠದ ಪೂಜ್ಯ ಏಕಗಮ್ಯಾನಂದಜೀ ಮಹರಾಜ್ ಅವರ ನೇತೃತ್ವದಲ್ಲಿ ನಡೆಯಿತು. ಸ್ವಚ್ಛ ಮನಸು, ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳ ಪ್ರಾಮುಖ್ಯತೆ, ಅಭಿಯಾನದ ಸ್ವರೂಪ, ಕಾರ್ಯಯೋಜನೆಗಳ ಕುರಿತು ಏಕಗಮ್ಯಾನಂದ ಜೀ ಮಾರ್ಗದರ್ಶನ ಮಾಡಿದರು. ಡಿ....
ಸುದ್ದಿ

ನಂ.22ರಂದು ‘ಸ್ವಚ್ಛ ಪುತ್ತೂರು’ ಅಭಿಯಾನದ ಎರಡನೆಯ ವರುಷದ ಕೆಲಸಗಳ ಪೂರ್ವಭಾವಿ ಸಭೆ

ಪುತ್ತೂರು : ರಾಮಕೃಷ್ಣ ಮಿಷನ್ ಮಂಗಳೂರು ಇದರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಕಳೆದ ವರ್ಷ ಯಶಸ್ವಿಯಾಗಿ ಸ್ವಚ್ಛ ಪುತ್ತೂರು ಅಭಿನಾಯನವು ನಡೆದಿತ್ತು. ಈಗ ಎರಡನೇ ವರ್ಷದ ಸ್ವಚ್ಛ ಪುತ್ತೂರು ಅಭಿಯಾನದ ಪೂರ್ವಭಾವಿ ಸಭೆಯು ದಿನಾಂಕ 22-11-2017ರ ಸಾಯಂಕಾಲ 6.00 ಗಂಟೆಗೆ ಕಲ್ಲಾರೆ ರಾಘವೇಂದ್ರ ಮಠದಲ್ಲಿ ರಾಮಕೃಷ್ಣ ಮಠದ ಪೂಜ್ಯ ಏಕಗಮ್ಯಾನಂದಜೀ ಮಹರಾಜ್ ಅವರ ನೇತೃತ್ವದಲ್ಲಿ ನಡೆಯಲಿರುವುದು.ಪುತ್ತೂರಿನ ಎಲ್ಲ ಸಮಾಜಮುಖೀ ಸಂಘಟನೆಗಳ ಸದಸ್ಯರೂ ಅಪೇಕ್ಷಿತರು.ಬನ್ನಿ, ಕೈ ಜೋಡಿಸಿ.ಶೀಘ್ರದಲ್ಲೇ ಆರಂಭಗೊಳ್ಳಲಿರುವ ಸ್ವಚ್ಛ ಪುತ್ತೂರಿನ ಎರಡನೆಯ...
ಸುದ್ದಿ

ಕ್ರಿಮಿನಲ್ ಪ್ರಕರಣದ ಸಾಕ್ಷಿ ನಾಶಕ್ಕೆ ಯತ್ನ | ಸುದ್ದಿ ಬಿಡುಗಡೆ ಲೋಕಲ್ ಪತ್ರಿಕೆಯ ಸಿಬ್ಬಂದಿ ಮೇಲೆ ಜಾಮೀನು ರಹಿತ ಪ್ರಕರಣ

ಪುತ್ತೂರು : ಸುದ್ದಿ ಬಿಡುಗಡೆ ಪತ್ರಿಕೆಯ ಮೂವರು ಸಿಬ್ಬಂದಿಗಳ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಕ್ರಿಮಿನಲ್ ಪ್ರಕರಣವೊಂದರಲ್ಲಿ ಸಾಕ್ಷಿದಾರರಾಗಿರುವ ಪತ್ರಕರ್ತರೊಬ್ಬರಿಗೆ ಸಾಕ್ಷಿ ಹಿಂತೆಗೆಯುವಂತೆ ಒತ್ತಡ ಹಾಕಿದಕ್ಕೆ ಈ ಪ್ರಕರಣ ದಾಖಲಾಗಿದೆ. 7 ವರ್ಷ ಗರಿಷ್ಠ ಶಿಕ್ಷೆಗೆ ಒಳಗಾಗಬಹುದಾದ  ಸುದ್ದಿ ಬಿಡುಗಡೆ ಪತ್ರಿಕೆಯ ಈ ಆರೋಪಿ ಸಿಬ್ಬಂದಿಗಳು, ಇದೀಗ ಬಂಧನ ಭೀತಿಯನ್ನು ಎದುರಿಸುತ್ತಿದ್ದಾರೆ. ಸರ್ಕಲ್ ಇನ್ಸ್ ಪೆಕ್ಟರಿಗೆ ತನಿಖೆಯ ನೇತೃತ್ವ ವಹಿಸಲು ಆದೇಶ ಪುತ್ತೂರು ತಾಲೂಕು...
1 3,301 3,302 3,303 3,304 3,305 3,336
Page 3303 of 3336