ಚಲಿಸುತ್ತಿದ್ದ ಕಾರಿನ ಮುಂದೆಯೇ ಬಿದ್ದ ಬೃಹತ್ ಮರ :ಪ್ರಯಾಣಿಕರು ಜಸ್ಟ್ ಮಿಸ್ -ಕಹಳೆ ನ್ಯೂಸ್

ಚಿಕ್ಕಮಗಳೂರು: ಚಲಿಸುತ್ತಿದ್ದ ಕಾರಿನ ಮುಂಭಾಗ ಬೃಹತ್ ಮರವೊಂದು ಬಿದ್ದ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಬಳಿ ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಏ.24ರ ಸಂಜೆ ಆಲ್ದೂರಿನಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಈ ವೇಳೆ ಕಾರಿನಲ್ಲಿ ಹಾಸನ ಮೂಲದ ನಾಲ್ವರು ಪ್ರಯಾಣಿಸುತ್ತಿದ್ದರು. ಈ ವೇಳೆ ಮರ ಬಿದ್ದಿದೆ. ಮರ ಬೀಳುವ ದೃಶ್ಯ ಕಾರಿನಲ್ಲಿದ್ದ ಪ್ರಯಾಣಿಕರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಮರ ಬೀಳುತ್ತಿದ್ದಂತೆ ಚಾಲಕ ಕಾರನ್ನು ನಿಯಂತ್ರಣಕ್ಕೆ ತೆಗೆದುಕೊಂಡು ನಿಲ್ಲಿಸಿದ್ದಾನೆ. ಇದರಿಂದ ಪ್ರಯಾಣಿಕರು ಪಾರಾಗಿದ್ದಾರೆ.









