Recent Posts

Saturday, April 25, 2026
ರಾಜ್ಯಸುದ್ದಿ

ಕಾನ್‌ಸ್ಟೆಬಲ್‌ ಪ್ರೇಯಸಿಯಿಂದ ರಾದ್ಧಾಂತ; ಪೊಲೀಸ್‌ ಮನೆಗೆ ನುಗ್ಗಿ ಆತನ ಪತ್ನಿ, ಮಗನಿಗೆ ಚಾಕುವಿನಿಂದ ಇರಿದು ಹತ್ಯೆ -ಕಹಳೆ ನ್ಯೂಸ್

ರಾಯ್ಪುರ: ಛತ್ತೀಸಗಢದಲ್ಲಿ 25 ವರ್ಷದ ಮಹಿಳೆಯೊಬ್ಬಳು ತಾನು ಸಂಬಂಧ ಹೊಂದಿದ್ದ ಕಾನ್‌ಸ್ಟೆಬಲ್‌ ಮನೆಗೆ ನುಗ್ಗಿ ಆತನ ಪತ್ನಿ ಮತ್ತು ಮೂವರು ಮಕ್ಕಳಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.

ಸರೋಜಿನಿ ಮೊದಲು ರೀನಾ ಯಾದವ್‌ ಜೊತೆಗೆ ಜಗಳ ತೆಗೆದಳು. ಈ ವೇಳೆ ಏಕಾಏಕಿ ಚಾಕು ತೆಗೆದು ಇರಿದಿದ್ದಾಳೆ. ಹಲ್ಲೆ ನಡೆಸಿ ನಂತರ ಆಕೆಯ ಮಕ್ಕಳ ಮೇಲೂ ದಾಳಿ ಮಾಡಿದಳು. ಮನೆಯಲ್ಲಿ ನಿದ್ದೆ ಮಾಡುತ್ತಿದ್ದ 9 ವರ್ಷದ ಆದಿತ್ಯ ಎಂಬ ಹುಡುಗನ ಮೇಲೂ ಚಾಕವಿನಿಂದ ಇರಿದಳು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತನ್ನ ಮಕ್ಕಳ ಮೇಲೆ ಹಲ್ಲೆ ನಡೆಸಬೇಡ ಎಂದು ರೀನಾ ಯಾದವ್‌ ಕೇಳಿಕೊಂಡರೂ ಆರೋಪಿತೆ ಕೇಳಿಲ್ಲ. ಒಬ್ಬಳು ಹುಡುಗಿ ಸ್ನಾನಗೃಹದಲ್ಲಿ ಅಡಗಿಕೊಂಡಿದ್ದಳು. ಇನ್ನೊಬ್ಬಳು ಮನೆಯಿಂದ ತಪ್ಪಿಸಿಕೊಂಡು ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾಳೆ.