Recent Posts

Sunday, April 26, 2026
ಸುದ್ದಿ

ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಮನೆಗಳ ಹಸ್ತಾಂತರ | ಮೂರು ಬಡಕುಟುಂಬಗಳಿಗೆ ಬೆಳಕಾದ ಅಶೋಕ್ ರೈ

ಪುತ್ತೂರು : ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಿ.ಜೆ ಪಿ. ಮುಖಂಡ ಪುತ್ತೂರಿನ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ನೇತ್ರತ್ವದಲ್ಲಿ ಮುಂಡೂರಿನಲ್ಲಿ ನಿರ್ಮಾಣಗೊಂಡ ಮೂರು ಮನೆಗಳ ಹಸ್ತಾಂತರ ಕಾರ್ಯಕ್ರಮವು ಇಂದು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ವಹಿಸಿದ್ದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜಿ.ಪಂ ಅದ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ತಾ.ಪಂ ಅದ್ಯಕ್ಷೆ ಭವಾನಿ ಚಿದಾನಂದ,ತಾ.ಪಂ ಸದಸ್ಯರಾದ ಶಿವರಂಜನ್ ಮೀನಾಕ್ಷಿ ಮಂಜುನಾಥ ,ಎಪಿಎಂಸಿ ಸದಸ್ಯೆ ತ್ರಿವೇಣಿ ಕರುಣಾಕರ ಪೆರ್ವೋಡಿ,ಗ್ರಾ.ಪಂ ಸದಸ್ಯರಾದ ಉಮೇಶ್ ಅಂಬಟ,ಸ್ವಾತಿ ಜನಾರ್ಧನ,ಪ್ರೇಮಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.