Saturday, April 25, 2026
ಬೆಂಗಳೂರುರಾಜ್ಯಸುದ್ದಿ

ಒಂದೇ ಪಂದ್ಯದಲ್ಲಿ 2 ದಾಖಲೆ ಬರೆದ ವಿರಾಟ್ ಕೊಹ್ಲಿ -ಕಹಳೆ ನ್ಯೂಸ್

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟಾನ್ಸ್‌  ವಿರುದ್ಧದ ಪಂದ್ಯದಲ್ಲಿ ಕೊಹ್ಲಿ  ಎರಡು ದಾಖಲೆ ಬರೆದಿದ್ದಾರೆ. ಐಪಿಎಲ್  ಇತಿಹಾಸದಲ್ಲಿ 800 ಬೌಂಡರಿ ಹೊಡೆದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಸದ್ಯ ಕೊಹ್ಲಿ 807 ಫೋರ್‌ ಹೊಡೆದು ಮೊದಲ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಶಿಖರ್ ಧವನ್ (768) ಇದ್ದಾರೆ. ನಂತರ ಸ್ಥಾನದಲ್ಲಿ ಡೇವಿಡ್ ವಾರ್ನರ್ (663), ರೋಹಿತ್ ಶರ್ಮಾ(653) ಇದ್ದಾರೆ.

ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 44 ಎಸೆತಗಳಲ್ಲಿ 81 ರನ್‌(8 ಬೌಂಡರಿ, 4 ಸಿಕ್ಸ್‌) ಹೊಡೆದು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

2008 ರಿಂದ ನಿನ್ನೆಯ ಪಂದ್ಯ ಸೇರಿದಂತೆ ಕೊಹ್ಲಿ ಐಪಿಎಲ್‌ನಲ್ಲಿ ಒಟ್ಟು 274 ಪಂದ್ಯವಾಡಿ ಒಟ್ಟು 8,989 ರನ್‌ ಹೊಡೆದಿದ್ದಾರೆ. 8 ಶತಕ, 6 ಅರ್ಧಶತಕ ಹೊಡೆದಿರುವ ಕೊಹ್ಲಿ 807 ಬೌಂಡರಿ 303 ಸಿಕ್ಸ್‌ ಸಿಡಿಸಿದ್ದಾರೆ.