ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ 2026-27ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳ ಆಗತ-ಸ್ವಾಗತ ಕಾರ್ಯಕ್ರಮ ಪ್ರವೇಶೋತ್ಸವ- – ಕಹಳೆ ನ್ಯೂಸ್
ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ 2026-27ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಆಗತ-ಸ್ವಾಗತ ಆಜಾದ್ ಭವನದಲ್ಲಿ ನಡೆಯಿತು.
ಪ್ರಾರಂಭದಲ್ಲಿ ಗಣ್ಯರಿಂದ ದೀಪ ಪ್ರಜ್ವಲನ ಹಾಗೂ ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ, ಬಳಿಕ ಗಣ್ಯ ಅತಿಥಿಗಳು ಅಗ್ನಿಹೋತ್ರಕ್ಕೆ ಹವಿಸ್ಸನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ನೂತನ ವಿದ್ಯಾರ್ಥಿಗಳು ಅಗ್ನಿಹೋತ್ರಕ್ಕೆ ಹವಿಸ್ಸನ್ನು ಅರ್ಪಿಸುವ ಮೂಲಕ ಪದವಿ ಶಿಕ್ಷಣಕ್ಕೆ ಮುಂದಡಿಯಿಟ್ಟರು. ಹೊಸ ವಿದ್ಯಾರ್ಥಿಗಳಿಗೆ ಹಾಗೂ ಹೊಸ ಉಪನ್ಯಾಸಕರಿಗೆ ಆರತಿ ಬೆಳಗಿ, ಕುಂಕುಮ ಹಚ್ಚಿ ಸ್ವಾಗತಿಸಲಾಯಿತು, ಬಳಿಕ ವಿದ್ಯಾರ್ಥಿಗಳು ಹಿರಿಯರ ಆಶೀರ್ವಾದ ಪಡೆದರು.
ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರೂ ರಾ. ಸ್ವ. ಸಂಘದ ಹಿರಿಯರೂ ಆದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಲ್ಲಾ ವಿದ್ಯಾರ್ಥಿಗಳೂ ದೇಶಭಕ್ತಿಯಿಂದ ಧರ್ಮ ರಕ್ಷಣೆಗಾಗಿ ಜೀವನ ನಡೆಸುವ ಸಂಕಲ್ಪ ತೊಡಬೇಕು ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಕರ್ನಾಟಕ ಬ್ಯಾಂಕ್ ಲಿಮಿಟೆಡ್, ಮಂಗಳೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ; ಸಿಇಒ ಶ್ರೀ ರಾಘವೇಂದ್ರ ಎಸ್ ಭಟ್ ಕಾಲೇಜಿನ ನೂತನ ವೆಬ್ಸೈಟ್ ನ ಉದ್ಘಾಟನೆಯನ್ನು ಟಿವಿ ಪರದೆಯ ಅನಾವರಣದ ಮೂಲಕ ನೆರವೇರಿಸಿ ಮಾತನಾಡುತ್ತಾ ಪಠ್ಯ- ಪಠ್ಯೇತರ ಶಿಕ್ಷಣಗಳ ಜೊತೆಗೆ ಜೀವನ ಶಿಕ್ಷಣವನ್ನು ಕೂಡ ಒದಗಿಸುತ್ತಾ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಬೆಂಗಳೂರಿನ ಉದ್ಯಮಿ ದರ್ಶನ್ ಆರ್ ಲಮಾಣಿ, ಬೆಂಗಳೂರಿನ ಅರುಣ್ ಕಂಪನಿಯ ಮೈನಿಂಗ್ ಡೆವಲಪರ್ ಅರುಣ್ ಗೌಡ, ಬೆಂಗಳೂರಿನ ಪ್ರಗತಿಪರ ಕೃಷಿಕರಾದ ಶ್ರೀ ಗೋವಿಂದರಾಜ್, ಬಿಇ ಸಿವಿಲ್ ಇಂಜಿನಿಯರ್ ಸಿಂಗರ್ ಬಾಕ್ಸರ್ ಶ್ರೀ ಸಿದ್ವಿನ್ ಹೆಗಡೆ, ಕೆಎಂಸಿ ಮಣಿಪಾಲ ಮಾಹೆ ಇದರ ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕರಾದ ಡಾ.ದೀಪಕ್ ರಾಮ್ ಬಾಯಿರಿ, ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ, ಕಲ್ಲಡ್ಕ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು, SಗಿS ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಶ್ರೀ ನಾರಾಯಣ
ಭಂಡಾರಿ ಇವರು ಅಭ್ಯಾಗತರಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಮಾಹಿತಿ ಕೈಪಿಡಿ ಶಿಕ್ಷಣ ದರ್ಶಿನಿಯನ್ನು ಗಣ್ಯರು ಬಿಡುಗಡೆಗೊಳಿಸಿದರು.
ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪದವಿ ಕಾಲೇಜು ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಕೃಷ್ಣಪ್ರಸಾದ್ ಗಣ್ಯರನ್ನು ಸ್ವಾಗತಿಸಿ, ಬಿಸಿಎ ವಿದ್ಯಾರ್ಥಿನಿ ಕು. ತ್ರಿಶಾ ವಂದಿಸಿ, ಬಿಸಿಎ ವಿದ್ಯಾರ್ಥಿ ಜಯಸೂರ್ಯ ಕಾರ್ಯಕ್ರಮ ನಿರ್ವಹಿಸಿದರು.











