ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲದ ಆಂಗ್ಲ ವಿಭಾಗ, ಲಿಟರರಿ ಕ್ಲಬ್ ಮತ್ತು ಐ.ಕ್ಯೂ.ಎ.ಸಿ ಘಟಕದ ಜಂಟಿ ಆಶ್ರಯದಲ್ಲಿ ‘ಫ್ರಮ್ ಪೇಜಸ್ ಟು ಪಿಕ್ಸೆಲ್ಸ್’ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲದ ಆಂಗ್ಲ ವಿಭಾಗ, ಲಿಟರರಿ ಕ್ಲಬ್ ಮತ್ತು ಐ.ಕ್ಯೂ.ಎ.ಸಿ ಘಟಕದ ಜಂಟಿ ಆಶ್ರಯದಲ್ಲಿ ‘ಫ್ರಮ್ ಪೇಜಸ್ ಟು ಪಿಕ್ಸೆಲ್ಸ್’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಶ್ರೀಹರಿ ಶರ್ಮ ನಿರ್ಮಿಸಿದ ನೂತನ ಬ್ಲಾಗ್ ಉದ್ಘಾಟಿಸಿಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ್ ಭಟ್ ಮಾತನಾಡಿ, ಸಾಹಿತ್ಯವು ಇಷ್ಟು ದಿನ ಕೇವಲ ಪುಸ್ತಕಗಳಿಗಷ್ಟೇ ಸೀಮಿತವಾಗಿತ್ತು. ಆದರೆ ಆಂಗ್ಲ ವಿಭಾಗದ ವತಿಯಿಂದ ರೂಪಿಸಿರುವ ಈ ನೂತನ ಡಿಜಿಟಲ್ ವೇದಿಕೆಯು ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಬರವಣಿಗೆಯ ಕೌಶಲ್ಯವನ್ನು ಹೊರಹಾಕಲು ಸಿಕ್ಕಿರುವ ಸುವರ್ಣಾವಕಾಶ. ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆಯಿಲ್ಲದೆ
ತಮ್ಮ ಕಥೆ, ಕವನಗಳನ್ನು ಬರೆಯುವ ಮೂಲಕ ಈ ಬ್ಲಾಗ್‍ನ ಬೆಳವಣಿಗೆಗೆ ಕೈಜೋಡಿಸಬೇಕು. ಈ ಸಣ್ಣ ಪ್ರಯತ್ನವು ಮುಂದೆ ಹೆಮ್ಮರವಾಗಿ ಬೆಳೆದು ಮತ್ತಷ್ಟು ಹೊಸ ಬ್ಲಾಗ್‍ಗಳು ಹುಟ್ಟಿಕೊಳ್ಳಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಆಂಗ್ಲ ವಿಭಾಗ ಮುಖ್ಯಸ್ಥ ಬಾಲಕೃಷ್ಣ ಹೆಚ್, ಲಿಟರರಿ ಕ್ಲಬ್‍ನ ಅಧ್ಯಕ್ಷೆ ಸುಮಶ್ರೀ.ಪಿ, ಸದಸ್ಯೆ ಶ್ರೀರಕ್ಷಾ, ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಎಸ್.ಗೀತಿಕಾ ಸ್ವಾಗತಿಸಿ, ವಿದ್ಯಾಶ್ರೀ ವಂದಿಸಿ, ವಾಣಿಶ್ರೀ ಡಿ.ಆರ್ ನಿರೂಪಿಸಿದರು.











