Recent Posts

Friday, August 21, 2026
ಸುದ್ದಿ

ಕಲ್ಮಂಜ : ಶಾಸಕ ಹರೀಶ್ ಪೂಂಜಾರ ಹುಟ್ಟುಹಬ್ಬ : ಕಲ್ಮಂಜ ಯುವಕರಿಂದ ಪಜಿರಡ್ಕದಲ್ಲಿ ವಿಶೇಷ ಪೂಜೆ – ಕಹಳೆ ನ್ಯೂಸ್

ಕಲ್ಮಂಜ : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಕಲ್ಮಂಜದ ಹರೀಶ್ ಪೂಂಜಾ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರಿಂದ ಇತಿಹಾಸ ಪ್ರಸಿದ್ಧ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಅರ್ಪಿಸಲಾಯಿತು.

ಜಾಹೀರಾತು

ಶಾಸಕ ಹರೀಶ್ ಪೂಂಜಾರವರಿಗೆ ದೀರ್ಘಾಯುಷ್ಯ, ಆರೋಗ್ಯ, ಸಂಪತ್ತು ಪ್ರಾಪ್ತಿಯಾಗಲಿ. ಅದೇ ರೀತಿಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಮೂರನೇ ಅವಧಿಗೆ ಗೆದ್ದು, ಶಾಸಕ ಸ್ಥಾನದಿಂದ ಸಚಿವ ಸ್ಥಾನವನ್ನು ಅಲಂಕರಿಸಲಿ ಎಂದು ಕಾರ್ಯಕರ್ತರ್ತರು ದೇವರಿಗೆ ವಿಶೇಷ ಪೂಜೆ ಅರ್ಪಿಸಿ, ಪ್ರಾರ್ಥಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕಲ್ಮಂಜ 89ನೇ ವಾರ್ಡ್ ಬಿಜೆಪಿ ಬೂತ್ ಸಮಿತಿಯ ಕಾರ್ಯದರ್ಶಿ ಶ್ರೀ ಅನಿಲ್ ಕುಮಾರ್, ಬೂತ್ ಸಮಿತಿ ಮಾಜಿ ಅಧ್ಯಕ್ಷರಾದ ಶ್ರೀ ಸಾಂತಪ್ಪ ಎಂ., ಸಂದೀಪ್ ಎಸ್., ಪುರಕ್ಷಿತ್, ಭರತೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.