ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ ಒಂಬತ್ತನೆಯ ಮತ್ತು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಧಾರಿತ ಗಮಕ ವಾಚನ ಕಾರ್ಯಕ್ರಮ

ಪಟ್ಟೆ ಬಡಗನ್ನೂರು: ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ ಒಂಬತ್ತನೆಯ ಮತ್ತು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಧಾರಿತ ಗಮಕ ವಾಚನ ಕಾರ್ಯಕ್ರಮ ನಡೆಯಿತು. ಗಮಕಿಯಾಗಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಶ್ರೀ ಚಂದ್ರಶೇಖರ್ ಸುಳ್ಯ ಪದವು, ವ್ಯಾಖ್ಯಾನಕಾರ ರಾಗಿ ಶ್ರೀ ಅಪ್ಪಕುಂಞಿ ಯಾದವ್, ಹಾರ್ಮೋನಿಯಂ ವಾದಕರಾಗಿ ಶ್ರೀ ಸತೀಶ್ ಹೆಬ್ಬಾರ್ ಅಡೂರು ಭಾಗವಹಿಸಿದರು.
ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕರಾದ ಶ್ರೀ ವಿಘ್ನೇಶ್ ಹಿರಣ್ಯ ರವರು ಅತಿಥಿಗಳಿಗೆ ಶಾಲು ಹೊದೆಸಿ ಸ್ವಾಗತಿಸಿದರು, ಪ್ರೌಢಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಸುಮನಾ ಬಿ. ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಪ್ರೌಢ ಶಾಲೆಯ 9 ಮತ್ತು 10ನೆಯ ತರಗತಿ ವಿದ್ಯಾರ್ಥಿಗಳು ‘ಪಠ್ಯಾಧಾರಿತ ಗಮಕವಾಚನ’ದ ಪ್ರಯೋಜನವನ್ನು ಪಡೆದರು. ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರಾದ ಶ್ರೀ ವಿಶ್ವನಾಥ್ ಬೊಳ್ಳಾಡಿ ಯವರು ಸ್ವಾಗತಿಸಿ, ಧನ್ಯವಾದವನ್ನು ಅರ್ಪಿಸಿದರು. ಪ್ರೌಢಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಸಹಕರಿಸಿದರು.











