Recent Posts

Thursday, August 20, 2026
ಸುದ್ದಿ

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಡಬದ ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ವಿದ್ಯಾರ್ಥಿಗಳ ಅನನ್ಯ ಸಾಧನೆ – ಕಹಳೆ ನ್ಯೂಸ್

ಕಡಬ: ವಿದ್ಯಾಭಾರತಿ ಕರ್ನಾಟಕ – ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಆ.19ರಂದು ಅನುದಾನಿತ ಕೆ.ಪಿ.ಎಸ್.ಕೆ. ಸ್ಮಾರಕ ಪ್ರೌಢಶಾಲೆ, ಪಂಜಿನಡ್ಕ, ಮುಲ್ಕಿಯಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸರಸ್ವತೀ ವಿದ್ಯಾಲಯ ಪ್ರೌಢಶಾಲೆ, ಕಡಬದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಜಾಹೀರಾತು

ಕಿಶೋರ ವರ್ಗದ ಬಾಲಕರ ರಿದಮಿಕ್ ವಿಭಾಗದಲ್ಲಿ ದಿಗಂತ್ (10ನೇ ತರಗತಿ) ಹಾಗೂ ತಶ್ವಿನ್ ಬಿ.ಕೆ (9ನೇ ತರಗತಿ) ಪ್ರಥಮ ಸ್ಥಾನ ಪಡೆದು ಪುತ್ತೂರಿನಲ್ಲಿ ನಡೆಯುವ ಪ್ರಾಂತ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಅದೇ ವಿಭಾಗದ ಆರ್ಟಿಸ್ಟಿಕ್ ಪೇರ್ ವಿಭಾಗದಲ್ಲಿ ಪೂಜನ್ ಡಿ.ಆರ್. (9ನೇ) ಹಾಗೂ ಲಿಖಿತ್ ಕುಂಬಾರ (9ನೇ) ದ್ವಿತೀಯ ಸ್ಥಾನ ಗಳಿಸಿದ್ದಾರೆ. ಆರ್ಟಿಸ್ಟಿಕ್ ಸಿಂಗಲ್ ವಿಭಾಗದಲ್ಲಿ ಪೂಜನ್ ಡಿ.ಆರ್. (9ನೇ) ತೃತೀಯ ಸ್ಥಾನ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಿಶೋರ ವರ್ಗದ ಬಾಲಕಿಯರ ರಿದಮಿಕ್ ಪೇರ್ ವಿಭಾಗದಲ್ಲಿ ಜ್ಞಾನವಿ ಎನ್.(10ನೇ) ಹಾಗೂ ನಿರೀಕ್ಷ ಎಸ್. (9ನೇ) ದ್ವಿತೀಯ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಕಿಶೋರ ವರ್ಗದ ಬಾಲಕರ ಟ್ರೆಡಿಷನಲ್ ಯೋಗ ವಿಭಾಗದಲ್ಲಿ ಅಭಿμÉೀಕ್ ತೃತೀಯ ಸ್ಥಾನ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕಿ ಶ್ರೀಮತಿ ಜಲಜಾಕ್ಷಿ ಬಿ.ವಿ. ತರಬೇತಿ ನೀಡಿರುತ್ತಾರೆ ಹಾಗೂ ತಂಡದ ವ್ಯವಸ್ಥಾಪಕರಾಗಿ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಲಕ್ಷ್ಮೀಶ ಗೌಡ ಆರಿಗ ಸಹಕರಿಸಿರುತ್ತಾರೆ.