ಅಲೋಶಿಯಸ್ ಗೊನ್ಜಾಗಾ ತೃತೀಯ ಭಾಷೆಯಾಗಿ ಕೊಂಕಣಿಯನ್ನು ಕನ್ನಡ ಲಿಪಿಯಲ್ಲೂ ಕಲಿಸಲು ಅಣಿಯಾಗಿದೆ: ಪ್ರಾಂಶುಪಾಲ ಫಾ ರೋಹನ್ ಡಿ’ಅಲ್ಮೇಡಾ ಘೋಷಣೆ – ಕಹಳೆ ನ್ಯೂಸ್

ಕೊಂಕಣಿ ತೃತೀಯ ಭಾಷೆಯಾಗಿ ಅಲೋಶಿಯಸ್ ಗೊನ್ಜಾಗಾ ಸಿಬಿಎಸ್ಇ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಮೊದಲಿನಿಂದ ಆರಂಭಿಸಲಾಗುವುದು, ಎಂದು ಶಾಲೆಯ ಪ್ರಾಂಶುಪಾಲ ಫಾ ರೋಹನ್ ಡಿ’ಅಲ್ಮೇಡಾ ಎಸ್ ಜೆ ನುಡಿದರು. ಅವರು ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಸಹಯೋಗದೊಂದಿಗೆ ಕೊಂಕಣಿ ಸಂಘದ ಉದ್ಘಾಟನೆ ತಮ್ಮ ಶಾಲೆಯಲ್ಲಿ ದೀಪ ಬೆಳಗಿಸಿ ಮಾಡಿ ಮಾತನಾಡಿದರು.
ಕೊಂಕಣಿ ಮಾತೃಭಾಷೆ ಇರುವ ಮಕ್ಕಳು ಕನ್ನಡ, ದೇವನಾಗರಿ, ರೋಮಿ,ಯಾವ ಲಿಪಿಗಳಲ್ಲಿ ಆಗುತ್ತದೆ ಅವುಗಳ ಉಪಯೋಗ ಮಾಡಿ ಕೊಂಕಣಿ ಕಲಿಯಬೇಕು. ನಾವು ಅದಕ್ಕೆ ಪ್ರೋತ್ಸಾಹ ನೀಡುತ್ತೇವೆ ಎಂದರು. ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಅಧ್ಯಕ್ಷರು ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ ಕೊಂಕಣಿ 20 ಆಗಸ್ಟ್ 1992 ರಿಂದ ಸಾಂವಿಧಾನಿಕ ಮಾನ್ಯತೆ ಪಡೆದು ಹಣದ ನೋಟಿನಲ್ಲಿ 22 ಭಾಷೆಗಳ ಪೈಕಿ ಸ್ಥಾನ ಪಡೆದಿದೆ. ಅದು ನಮ್ಮ ಹಿರಿಯರು ಮಾಡಿದ ಸಾಧನೆ. ಕರ್ನಾಟಕದ ಕೆಬಿಎಂಕೆ ಮತ್ತು ಸೈಂಟ್ ಅಲೋಶಿಯಸ್ ಕೂಡಾ ಇದರ ಹಿಂದೆ ಶ್ರಮಪಟ್ಟಿದೆ ಎಂದು ಹೇಳಿ ವಿದ್ಯಾರ್ಥಿಗಳಿಗೆ ಕೊಂಕಣಿ ಭಾಷೆಯಲ್ಲಿ ಕ್ವಿಜ್ ಮಾಡಿ ಬಹುಮಾನ ನೀಡಿದರು.
ಮುಖ್ಯ ಅತಿಥಿಗಳಾಗಿ ಎಸ್ ಎಲ್ ಪ್ರಶಾಂತ ಶೇಟ್ ಮಾತನಾಡಿ ಕೊಂಕಣಿ 44 ಪ್ರಭೇದಗಳ ಭಾಷೆ. ಕ್ರೈಸ್ತ, ಹಿಂದು,ಮುಸ್ಲಿಂ, ದೈವಜ್ನ,ಜಿಎಸ್‌ಬಿ, ಖಾರ್ವಿ, ಕುಡುಮಿ ಎಲ್ಲರೂ ಕೊಂಕಣಿ ಮಾತನಾಡಿ ಉಳಿಸಿದ್ದಾರೆ. ಅದು ಕೊಂಕಣಿ ಅಸ್ಮಿತತೆ.ವಿವಿಧತೆಯಲ್ಲಿ ಏಕತೆ ಇದು ಎಂದರು.
ವೇದಿಕೆಯಲ್ಲಿ ಬಹುಭಾಷಾ ಚಲನಚಿತ್ರ ನಿರ್ದೇಶಕ ನಿರ್ಮಾಪಕ ಹೆರ್ರಿ ಫರ್ನಾಂಡೀಸ್ ಬಾರ್ಕೂರು,ಕೆಬಿಎಂಕೆ ಖಜಾಂಚಿ ವಸಂತ ರಾವ್, ಉಪ ಪ್ರಾಂಶುಪಾಲ್ ಅಪರ್ಣಾ ಸುರೇಶ್ ಇದ್ದರು. ಇನ್ನೊಬ್ಬ ಉಪಪ್ರಾಂಶುಪಾಲ ಲೊರೆಲ್ ಡಿಸೋಜ ವಂದಿಸಿದರು. ಜಿವಿತ್ ಪ್ರೆನಿಟಾ ಫೆರಾವೊ ನಿರೂಪಿಸಿದರು ,ಮಿಶಲ್ ಕ್ರಾಸ್ಟಾ ಸ್ವಾಗತಿಸಿ, ಪರಿಚಯಿಸಿದರು
ಸಹಕರಿಸಿದರು. ಕೆಬಿಎಂಕೆಯ ಡಿಸೋಜ ಸದಸ್ಯರು ಶಾಂತಿ ವೆರೊನಿಕಾ ಇದ್ದರು. ಸ್ಟೇನಿ ತಾವ್ರೊ,ಡೆನಿಸ್ ಡಿಸೋಜ ವಾಮಂಜೂರ್,ಹೆರಾಲ್ಡ್ ಅಲ್ಬುಕರ್ಕ್, ಮರಿಯಾ ಪಿಂಟೊ,ಪ್ರೇಮ್ ಮತ್ತಿತರರು ಇದ್ದರು











