
ಹನೂರು ಶೂಟೌಟ್ ಪ್ರಕರಣ: ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ ಮಾಡಿದ ಶಾಸಕ ಮಂಜುನಾಥ್
ಹನೂರು:ಭಾನುವಾರ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮರಣೋತ್ತರ ಪರಿಕ್ಷೇಯ ನಂತರ ಶವಗಳನ್ನು ಪೋಲಿಸ್ ಭದ್ರತೆಯಲ್ಲಿ ಪ್ರತ್ಯೇಕ ಆಂಬ್ಯುಲೆAಸ್‌ಗಳಲ್ಲಿ ತೋಮಿಯರ್ ಪಾಳ್ಯ ಗ್ರಾಮಕ್ಕೆ ತರಲಾಯಿತು.
ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಅರಣ್ಯ ಇಲಾಖೆಯವರು ಗುಂಡಿನ ದಾಳಿಗೆ ಸಾವನ್ನಪ್ಪಿದ್ದಾರೆ ಎನ್ನಲಾದ ಮೂರು ಜನರನ್ನು ಅವರ ಸ್ವ ಗ್ರಾಮದಲ್ಲಿ ಅಂತ್ಯಕ್ರೀಯೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮೃತಪಟ್ಟವರಲ್ಲಿ ಒಬ್ಬ ಹತ್ತಿರದ ಕುಟುಂಬವನ್ನು ಭೇಟಿ ಮಾಡಿದ ಹನೂರು ಶಾಸಕ ಮಂಜುನಾಥ್ ಪರಿಹಾರ ಮೊತ್ತವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.











