Thursday, August 13, 2026
ಸಿನಿಮಾ

ನಟ ದರ್ಶನ್ ಗೆ ಸಂಕಷ್ಟದ ಮಧ್ಯೆ, ಸಾಮಾಜಿಕ ಜಾಲತಾಣದಲ್ಲಿ ವಿಜಯಲಕ್ಷ್ಮಿ ಪೋಸ್ಟ್ ವೈರಲ್ : ಅಂತದ್ದೆನಿದೆ?!- ಕಹಳೆ ನ್ಯೂಸ್

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ಗೆ ದಿನದಿಂದ ದಿನಕ್ಕೆ ಆಘಾತಗಳ ಸರಮಾಲೆಯೇ ಎದುರಾಗುತ್ತಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಹಾಗೂ ದರ್ಶನ್‌ ಅತ್ಯಾಪ್ತ ಎಂದೇ ಹೇಳಲಾದ ಪ್ರದೋಷ್, ಇದೀಗ ಮಾಫಿ ಸಾಕ್ಷಿಯಾಗಿ (Approver) ಸತ್ಯ ಹೇಳಲು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಜಾಹೀರಾತು

ಈ ದಿಢೀರ್ ಬೆಳವಣಿಗೆಯಿಂದಾಗಿ ನಟ ದರ್ಶನ್‌ಗೆ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಯಾಗುವ ಸಾಧ್ಯತೆಯಿದ್ದು, ತನಿಖಾ ಸಂಸ್ಥೆಗೆ ಇದು ಪ್ರಮುಖ ಸಾಕ್ಷ್ಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೊಂದೆಡೆ, ಈ ಎಲ್ಲಾ ಗೊಂದಲಗಳ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಸಿದ್ಧ ಕಾಮಾಕ್ಯ ದೇವಸ್ಥಾನದ ಫೋಟೋವನ್ನು ತಮ್ಮ ಸ್ಟೇಟಸ್‌ನಲ್ಲಿ ಹಂಚಿಕೊಂಡಿರುವ ಅವರು, “ದೇವರಿಗೆ ಗೊತ್ತು… ಅಷ್ಟೇ ಸಾಕು” ಎಂಬ ಮಾರ್ಮಿಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಆ ಮೂಲಕ ಪ್ರಸ್ತುತ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ತಮ್ಮ ಮನದ ಮಾತನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೇ ನಿಲ್ಲದೆ, ವಿಜಯಲಕ್ಷ್ಮಿ ಅವರು “ಎಲ್ಲಿಗೆ ಓಡುವೆ ಓ ಮನುಜ… ನಿನ್ನ ಕರ್ಮಗಳೆಲ್ಲ ಇಲ್ಲೇ ಕೊನೆ” ಎಂಬ ಭಕ್ತಿ ಹಾಗೂ ವೈರಾಗ್ಯ ತುಂಬಿದ ಹಾಡನ್ನು ಸಹ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗೆ ಸೇರಿಸಿದ್ದಾರೆ. ಈ ಪೋಸ್ಟ್‌ಗಳು ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಶುರುವಾಗಿದ್ದು, ಈ ರೀತಿಯ ಪೋಸ್ಟ್ ಹಾಕಿರುವ ಹಿಂದಿನ ನೈಜ ಅರ್ಥವೇನು? ಇದು ಯಾರನ್ನು ಉದ್ದೇಶಿಸಿ ಹಾಕಿದ್ದು? ಎಂಬ ಕುತೂಹಲ ಸಾರ್ವಜನಿಕರಲ್ಲಿ ಹಾಗೂ ಅಭಿಮಾನಿಗಳಲ್ಲಿ ತೀವ್ರಗೊಂಡಿದೆ.