
ಕುಂದಾಪುರ: ಕೋಡಿ ಲೈಟ್‌ಹೌಸ್ ಬಳಿಯ ಸಮುದ್ರ ತೀರದಲ್ಲಿ ಬೃಹತ್ ಗಾತ್ರದ ಡಾಲ್ಫಿನ್‌ವೊಂದು ಕೊಳೆತ ಸ್ಥಿತಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ.
ಸಮುದ್ರ ತೀರದಲ್ಲಿ ಡಾಲ್ಫಿನ್ ಮೃತದೇಹ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರೀಫ್ ವಾಚ್ ಸಂಸ್ಥೆಯ ಕುಂದಾಪುರ ಘಟಕ ಸ್ಥಳಕ್ಕೆ ತೆರಳಿ ಸಮುದ್ರ ಸಸ್ತನಿಯ ಮರಣೋತ್ತರ ಪರೀಕ್ಷೆ ನಡೆಸಿತು.
ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಕುಂದಾಪುರ ಅರಣ್ಯ ಇಲಾಖೆಯ ಸಹಯೋಗದಲ್ಲಿ ಡಾಲ್ಫಿನ್ ಮೃತದೇಹವನ್ನು ಕಡಲತೀರದಲ್ಲೇ ಸಮಾಧಿ ಮಾಡಲಾಯಿತು. ಕಾರ್ಯಾಚರಣೆಗೆ ಕರಾವಳಿ ಭದ್ರತಾ ಪೊಲೀಸರು ಕೂಡ ಸಹಕಾರ ನೀಡಿದರು. ಈ ಸಂದರ್ಭದಲ್ಲಿ ರೀಫ್ ವಾಚ್‌ನ ಡಾ. ಅಜು, ಸಹಾಯಕ ಸಿಬ್ಬಂದಿ ನಾಗರಾಜ್ ಪೂಜಾರಿ ಹಾಗೂ ಅರಣ್ಯ ಇಲಾಖೆಯ ಮಂಜುನಾಥ್ ಉಪಸ್ಥಿತರಿದ್ದರು.










