ಮೇ.22ರಂದು ತೆರೆಗೆ ಬರುತ್ತಿರುವ ಬಹುನಿರೀಕ್ಷಿತ ತುಳು ಚಿತ್ರ ‘ಗಜಾನನ ಕ್ರಿಕೆಟರ್ಸ್’-ಕಹಳೆ ನ್ಯೂಸ್

ಕರಾವಳಿಯ ಸಂಸ್ಕೃತಿ, ಸ್ನೇಹ, ಕ್ರಿಕೆಟ್ ಹುಚ್ಚು ಮತ್ತು ಭಾವನೆಗಳನ್ನು ಒಂದೇ ಕಥೆಯಲ್ಲಿ ಒಗ್ಗೂಡಿಸಿಕೊಂಡಿರುವ ಬಹುನಿರೀಕ್ಷಿತ ತುಳು ಚಲನಚಿತ್ರ ‘ಗಜಾನನ ಕ್ರಿಕೆಟರ್ಸ್’ (ಜಂತೊಟ್ಟು ಸಿನ್ಸ್ 1983) ಇದೇ ಮೇ 22ರಂದು ಕರಾವಳಿ ಜಿಲ್ಲೆಯಾದ್ಯಂತ ಭರ್ಜರಿಯಾಗಿ ತೆರೆಕಾಣುತ್ತಿದೆ.
ಪ್ರಜ್ವಲ್ ಫಿಲ್ಡ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರವನ್ನು ಪ್ರಜ್ವಲ್ ಶೆಟ್ಟಿ ನಿರ್ಮಿಸಿದ್ದು, ಕೀರ್ತನ್ ಭಂಡಾರಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈಗಾಗಲೇ ಟೀಸರ್, ಹಾಡುಗಳು ಹಾಗೂ ವಿವಿಧ ಪ್ರಚಾರ ಕಾರ್ಯಕ್ರಮಗಳ ಮೂಲಕ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿರುವ ಈ ಸಿನಿಮಾ. ತುಳು ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸುವ ನಿರೀಕ್ಷೆ ಹುಟ್ಟಿಸಿದೆ. ಚಿತ್ರದ ಸಹ ನಿರ್ಮಾಪಕರಾಗಿ ರೋಹನ್ ಪಿರೇರ ವಾಮಂಜೂರು ಹಾಗೂ ಸಂತೋಷ್ ಲಾಡ್ ಕಾರ್ಯನಿರ್ವಹಿಸಿದ್ದಾರೆ.
ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕುಂದಾಪುರ, ಕಾರ್ಕಳ, ಪುತ್ತೂರು, ಬೆಳ್ತಂಗಡಿ, ದೇರಳಕಟ್ಟೆ ಸೇರಿದಂತೆ ಕರಾವಳಿಯ ವಿವಿಧ ಭಾಗಗಳ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ಕ್ರಿಕೆಟ್. ಸ್ನೇಹ ಮತ್ತು ಬದುಕಿನ ಕಥೆ
‘ಗಜಾನನ ಕ್ರಿಕೆಟರ್ಸ್’ ಕೇವಲ ಕ್ರಿಕೆಟ್ ಕುರಿತ ಸಿನಿಮಾ ಮಾತ್ರವಲ್ಲ. ಇದು ಗ್ರಾಮೀಣ ಬದುಕಿನ ನೆನಪುಗಳು. ಸ್ನೇಹದ ಬಾಂಧವ್ಯ, ಯುವಕರ ಕನಸುಗಳು ಹಾಗೂ ಬದುಕಿನ ಹೋರಾಟಗಳನ್ನು ಮನಮುಟ್ಟುವ ರೀತಿಯಲ್ಲಿ ತೆರೆಗೆ ತರುತ್ತದೆ. ಆಂಡರ್ ಆರ್ಮ್ ಕ್ರಿಕೆಟ್ ನ ಹಿನ್ನೆಲೆಯೊಂದಿಗೆ ಸಾಗುವ ಈ ಚಿತ್ರದಲ್ಲಿ ಹಾಸ್ಯ, ಪ್ರೀತಿ, ಭಾವನೆ ಮತ್ತು ಸಮಾಜಮುಖಿ ಸಂದೇಶವನ್ನು ಮನರಂಜನಾತ್ಮಕವಾಗಿ ನಿರೂಪಿಸಲಾಗಿದೆ.
ತುಳು ಭಾಷೆಯ ದೊಡ್ಡ ಬಜೆಟ್ ಚಿತ್ರಗಳಲ್ಲಿ ಒಂದಾಗಿ ಮೂಡಿಬಂದಿರುವ ಈ ಸಿನಿಮಾ ತಾಂತ್ರಿಕವಾಗಿ ಹಾಗೂ ಕಥಾಹಂದರದ ದೃಷ್ಟಿಯಿಂದ ವಿಶೇಷ ಗಮನ ಸೆಳೆಯುತ್ತಿದೆ. ಮಂಗಳೂರು ಹಾಗೂ ಸುತ್ತಮುತ್ತಲಿನ ಸುಂದರ ಪ್ರದೇಶಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದು, ಕರಾವಳಿಯ ನೈಸರ್ಗಿಕ ಸೌಂದರ್ಯವನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ.
ಬಲಿಷ್ಠ ತಾರಾಗಣ
ಚಿತ್ರದಲ್ಲಿ ನಿರ್ಮಾಪಕರಾದ ಪ್ರಜ್ವಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರೊಂದಿಗೆ ವಿನೀತ್ ಕುಮಾರ್. ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಪ್ರಕಾಶ್ ತುಮಿನಾಡು, ಉಮೇಶ್ ಮಿಜಾರು, ಅನ್ವಿತಾ ಸಾಗರ್, ಸಮತಾ ಅಮೀನ್. ಸರ್ವೋತ್ತಮ ಶೆಟ್ಟಿ (ಅಬುಧಾಬಿ). ವಾಲ್ವರ್
ನಂದಳಿಕೆ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪುಷ್ಪರಾಜ್ ಬೊಳ್ಳಾರು, ರೂಪಾ ವರ್ಕಾಡಿ, ಲಂಚುಲಾಲ್, ಸಚಿನ್ ಮಾಡ, ಜೇಮ್ಸ್ ಮಂಡೋನ್ನಾ, ಕರಣ್ ಪೂಜಾರಿ. ಪ್ರಕಾಶ್ ಪೂಂಜಾ, ರೋಹಿಣಿ, ಮೋಹನ್ ಕೊಪ್ಪಲ, ರಂಜಿತ್ ಅಮೀನ್, ಸೌಮ್ಯ ಸುಧೀಂದ್ರ, ಸಂದೀಪ್ ಮಲಾನಿ, ಗುಣ ಪ್ರಸಾದ್, ಪ್ರವೀಣ್ ಕೊಡಕ್ಕಲ್, ಪ್ರಶಾಂತ್ ಅಂಚನ್, ಅಶೋಕ್ ಬೈಲೂರು, ಪವಿತ್ರಾ, ಆಲ್ವಿನ್ ಪಿಂಟೊ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರದ ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ ಬೈಲೂರು ರಚಿಸಿದ್ದು, ತುಳುನಾಡಿನ ಸ್ಥಳೀಯ ಭಾಷೆಯ ಸೊಗಡನ್ನು ಸಂಭಾಷಣೆಗಳಲ್ಲಿ ಜೀವಂತವಾಗಿ ಮೂಡಿಸಿದ್ದಾರೆ.
ತಾಂತ್ರಿಕವಾಗಿ ಸಮೃದ್ಧ ಸಿನಿಮಾ
ಚಿತ್ರಕ್ಕೆ ಸೃಜನ್ ಕುಮಾರ್ ತೋನ್ಸೆ ಸಂಗೀತ ನೀಡಿದ್ದು, ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಈಗಾಗಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ಗೀತ ಸಾಹಿತ್ಯವನ್ನು ಕೀರ್ತನ್ ಭಂಡಾರಿ, ಸೃಜನ್ ಮಾನವ್ ಹಾಗೂ ಶ್ರೀನಿಧಿ ಶೆಟ್ಟಿ ರಚಿಸಿದ್ದಾರೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರೊಂದಿಗೆ ಭೋಜರಾಜ ವಾಮಂಜೂರು, ಸೃಜನ್ ಕುಮಾರ್ ತೋನ್ನೆ. ಪಲ್ಲವಿ ಪ್ರಭು. ಮೇಘನಾ ಕುಂದಾಪುರ, ವಿನ್ಯಾಸ್ ಮಧ್ಯ, ಕೀರ್ತನ್ ಭಂಡಾರಿ, ಸನ್ನಿಧಿ ವಿಶ್ವನಾಥ್ ಶೆಟ್ಟಿ ಹಾಗೂ ಅಶೋಭ್ಯ ಹರಿಕಿರಣ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ವಿನುತ್ ಕೆ. ಸುವರ್ಣ ಅವರ ಛಾಯಾಗ್ರಹಣ ಚಿತ್ರದ ದೃಶ್ಯ ವೈಭವವನ್ನು ಹೆಚ್ಚಿಸಿದ್ದು. ಸುಜಯ್ ಶಿವರಾಮ್ ಹಾಗೂ ಕೌಶಿಕ್ ಭಂಡಾರಿ ಅವರ ಸಂಕಲನ ಚಿತ್ರಕ್ಕೆ ಚುರುಕು ನೀಡಿದೆ.
ಡಿಐ – ಸಾಗರ್ ಕ್ರಿಯೇಟಿವ್ ವಿಲೇಜ್, ಕಲರಿಸ್ಟ್ – ಸಚಿನ್ ಗಣೇಶ್, ಪಬ್ಲಿಸಿಟಿ ಡಿಸೈನ್ ಹಾಗೂ ಅನಿಮೇಷನ್ಸ್ – ಪವನ್ – ಕ್ರಿಟ್ ಡಿಸೈನ್ಸ್, ದೇವಿ ರೈ, ಶ್ರೀನಾಥ್ ಪವಾರ್ ಮತ್ತು ಕಾಮೆಂಟರಿ ವಾಯ್ಸ್ – ಗೋಪಿ, ಸತೀಶ್, ಕೀರ್ತನ್ ಭಂಡಾರಿ ಹಾಗೂ ಅರ್ಟ್ – ವಿ.ಜೆ. ಧೀರಜ್ ಸನಿಲ್ ಮತ್ತು ರಾಜೇಶ್ ಬಂದ್ಯೋಡ್, ವಸ್ತ್ರ ವಿನ್ಯಾಸ – ಗಣೇಶ್ ಸಗ್ರಿ ಹಾಗೂ ಭರತ್ ಕುಲಾಲ್, ಮೇಕಪ್ ಅರ್ಪಿತ್ ಭಂಡಾರಿ, ಚೇತನ್ ಕಲ್ಲಡ್ಕ, ರಾಜ್ ಮಾಣಿ, ಸ್ಪಿಲ್ಸ್ – ಶ್ರೀ ಜಿ. ಬಂಗೇರ, ಲೈಟ್ಸ್ ಮತ್ತು ಕ್ಯಾಮರಾ ಯುನಿಟ್ ಇನ್‌ಚಾರ್ಜ್ ಆಗಿ ಲ್ಯುಮಿನರಿ ಬಾಕ್ಸ್ ಕಾರ್ಕಳ ಅವರ ಕಾರ್ಯ ಚಿತ್ರಕ್ಕೆ ಹೆಚ್ಚುವರಿ ಮೆರುಗು ನೀಡಿದೆ.
ಸಮರ್ಥ ನಿರ್ಮಾಣ ಬಳಗ
ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಪ್ರತೀಕ್ ಭಂಡಿ. ಪ್ರೊಡಕ್ಷನ್ ಮ್ಯಾನೇಜರ್‌ಗಳಾಗಿ ರವಿ ಎಂ.ಎಸ್. ವರ್ಕಾಡಿ ಕಾರ್ಯನಿರ್ವಹಿಸಿದ್ದಾರೆ. ಆಕ್ಷನ್ ವಿಭಾಗವನ್ನು ಯೋಗಾನಂದ, ನೃತ್ಯ ನಿರ್ದೇಶನವನ್ನು ಅವಿನಾಶ್ ಬಂಗೇರ ಹಾಗೂ ಸಾವನ್ ಸಾಲಿಯಾನ್ ನಿರ್ವಹಿಸಿದ್ದಾರೆ. ಸಹ ನಿರ್ದೇಶಕರಾಗಿ ಸುಜಯ್ ಶಿವರಾಮ್ ಹಾಗೂ ಅಸೋಸಿಯೇಟ್ ನಿರ್ದೇಶಕರಾಗಿ ಗಣೇಶ್ ಸಗ್ರಿ, ಸುಧಿ ಅರ್ಯನ್ ಮತ್ತು ರಾಬಿನ್ ರೈ ಕಾರ್ಯನಿರ್ವಹಿಸಿದ್ದಾರೆ. ಪಿಆರ್ಒ ಆಗಿ ಜಗನ್ನಾಥ್ ಶೆಟ್ಟಿ ಬಾಳ ಹಾಗೂ ಮಾರ್ಕೆಟಿಂಗ್ ಮತ್ತು ಪ್ರೊಮೋಶನ್ಸ್ ವಿಭಾಗವನ್ನು ಸುರೇಶ್ ರಾವ್ ಕೊಕ್ಕಡ ನಿರ್ವಹಿಸಿದ್ದಾರೆ.
ಪ್ರಮೋಷನ್ಸ್, ಪ್ರೊಡಕ್ಷನ್ ಮತ್ತು ಪಬ್ಲಿಸಿಟಿ ವಿಭಾಗದ ಒಳಾಂಗಣ ಹಾಗೂ ಹೊರಾಂಗಣ ಕಾರ್ಯಗಳನ್ನು ಮಧು ಕೆ.ಎಂ.. ಕರಣ್ ಪೂಜಾರಿ, ಭರತ್ ಕುಲಾಲ್, ಪ್ರದ್ಯುಮ್ನ ಶೆಟ್ಟಿ, ಶ್ರೇಯಸ್, ನಿಧೀಶ್, ಶ್ರೇಯಸ್ ಆಚಾರ್, ಮನೀಷ್, ಸುದರ್ಶನ್ ಪೂಜಾರಿ, ರಾಬಿನ್ ವಾಮಂಜೂರು, ಹರ್ವಿನ್ ಪಿಂಟೊ, ರೋಷನ್ ರೊಕ್ಕೊ, ಎಡ್ರಿನ್, ಶಾನ್ ಬೆಂದೂರು, ಕಾಲಿನ್ ಏಷ್ಯ, ಏಂಜಲ್ ಬೆಂದೂರು. ದಿಶಾಲ್ ಮಡಂತ್ಯಾರು, ಎರಾಲ್ ವಾಮಂಜೂರು, ಅರೆಲ್, ಗ್ರೇಷಿಯನ್, ಸೋನಾಲಿ ಬೆಂದೂರು, ರೋಹನ್, ಅಲ್ಡನ್, ಹೆನ್ಸರ್, ಜೋಯೆಲ್, ಅನ್ಸನ್, ರಾನ್ಸನ್ ಮೊಂಟೇರೊ ಹಾಗೂ ಲೋಕೂ ನಾಯಕ್ ಪಬ್ಲಿಸಿಟಿ ಎಡಿಟರ್ ಆಗಿ ನಿರ್ವಹಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ
ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಸಿನಿಪ್ರೇಕ್ಷಕರು ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಕರಾವಳಿ ಭಾಗದ ಅಂಡರ್ ಆರ್ಮ್ ಅಂಡರ್ಆಮ್್ರ ಕ್ರಿಕೆಟ್ ಸಂಸ್ಕೃತಿಯನ್ನು ತೆರೆಗೆ ತರುತ್ತಿರುವ ಈ ಸಿನಿಮಾ ಯುವಜನತೆಗೆ ವಿಶೇಷ ಆಕರ್ಷಣೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 97022 60464 / 79753 35210 / 98440 45543









